ಗುಲ್ಬರ್ಗಾ

ಮಹಿಳೆಯರಿಂದ ಖಾಲಿ ಕೊಡ ಪ್ರದರ್ಶನ

Published On :

ಕೆಂಭಾವಿ: ಶಾಶ್ವತ ಕುಡಿವ ನೀರಿನ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲು ಸೋಮವಾರ ಯಕ್ತಾಪುರ ಗ್ರಾಮಕ್ಕೆ ಆಗಮಿಸುತ್ತಿದ್ದ ಶಾಸಕ ಶರಣಬಸಪ್ಪ ದರ್ಶನಾಪುರ ಅವರನ್ನು ಗುತ್ತಿಬಸವೇಶ್ವರ ಬಡಾವಣೆಯ ನಾಗರಿಕರು ಮುತ್ತಿಗೆ ಹಾಕಿ ರಸ್ತೆಯ ಮೇಲೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.
  ಶಾಸಕರು ಬರುತ್ತಿದ್ದಂತೆ ಅವರನ್ನು ಮುತ್ತಿಗೆ ಹಾಕಿದ ಮಹಿಳೆಯರು, ಕೊಳವೆ ಬಾವಿ ಬತ್ತಿಹೊಗಿದ್ದು ತಾಸಿಗೆ ಒಂದು ಕೊಡ ನೀರು ಬರುತ್ತಿದೆ. ಕುಡಿವ ನೀರಿಗಾಗಿ 2ಕಿಮೀ ದೂರ ಹೋಗಬೇಕು. ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ತೊಂದರೆಯಾಗಲಿದೆ. ನಮಗೆ ಶಾಶ್ವತ ಕುಡಿವ ನೀರು ಕೊಡಿ ಎಂದು ಆಗ್ರಹಿಸಿದರು. ನಿತ್ಯ ಅನುಭವಿಸುತ್ತಿರುವ ತೊಂದರೆಯನ್ನು ಮಲ್ಲಮ್ಮ, ನಾಗಮ್ಮ ಇತರರು ಹೇಳಿ ತಮ್ಮ ಅಳಲನ್ನು ತೋಡಿಕೊಂಡರು.
  ಸಮಸ್ಯೆ ಅರಿತ ಶಾಸಕರು, ಖಾಸಗಿ ವ್ಯಕ್ತಿಯೊಬ್ಬರ ಕೊಳವೆ ಭಾವಿಯಿಂದ ಬಡಾವಣೆಗೆ ತಾತ್ಕಾಲಿಕವಾಗಿ ನೀರು ಪೂರೈಸಲು ಸಂಬಂಧಪಟ್ಟವರಿಗೆ ಸೂಚಿಸಿದರು. ಸರ್ಕಾರ ಹಣ ನೀಡದಿದ್ದರೆ ನಾನು ನಿಮಗೆ ಕೊಡುತ್ತೇನೆ, ಜನರಿಗೆ ನೀರಿನ ತೊಂದರೆಯಿದೆ. ಬೇಸಿಗೆ ಮುಗಿಯುವವರೆಗೆ ಇಂದಿನಿಂದಲೆ ನೀರು ಕೊಡಿ ಎಂದು ಸೂಚಿಸಿದರು.
 ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದನಗೌಡ ಪೊಲೀಸ ಪಾಟೀಲ, ಶಿವಮಹಾಂತ ಚಂದಾಪುರ, ಅಮೀನರಡ್ಡಿ ಪಾಟೀಲ ಯಾಳಗಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.