ಚಿತ್ರಕಲೆಯಲ್ಲಿ ರೂಪಕೊಡುವ ಶಕ್ತಿ: ತಹಸೀಲ್ದಾರ್
ಚಿತ್ತಾಪುರ: ಕಲ್ಪನೆಗಳ ಮೂಲಕ ರೂಪ ಕೊಡುವ ಶಕ್ತಿ ಚಿತ್ರಕಲೆಯಲ್ಲಿ ಅಡಗಿದೆ ಎಂದು ತಹಸೀಲ್ದಾರ್ ಬಾಲರಾಜ ದೇವರಖದ್ರಾ ಹೇಳಿದರು. ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಸಾಶಿ ಇಲಾಖೆ ಆಯುಕ್ತರ ಕಚೇರಿ 2012- 13 ನೇ ಸಾಲಿನ ಚಿತ್ತಾಪುರ, ಸೇಡಂ, ಚಿಂಚೋಳಿ ತಾಲೂಕುಗಳ ಚಿತ್ರಕಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಚಿತ್ರಕಲೆಗಳ ಪ್ರದರ್ಶನ ಹಾಗೂ ಪ್ರಗತಿ ಪರೀಶಿಲನೆ ಸಭೆ ಮತ್ತು ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಲೆ ಎಲ್ಲರಲ್ಲಿ ಅಡಗಿರುತ್ತದೆ. ಜೀವನದಲ್ಲಿ ಆಳವಡಿಸಿಕೊಂಡು ಚಿತ್ರ ಕಲೆಯ ಪ್ರತಿಭೆ ಹೊರ ತರುವ ಪ್ರಯತ್ನ ಮಾಡಬೇಕು ಎಂದರು. ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಹೊಸ್ಮನಿ ಮಾತನಾಡಿ, ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ದೃಶ್ಯ ಮಾಧ್ಯಮ ಚಿತ್ರಕಲೆಯು ಅನಕ್ಷರಸ್ಥರು ಶಿಕ್ಷಣ ಕಲಿಯುವ ಸರಳ ವಿಧಾನ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಕೊಪ್ಪದ, ಆಯುಕ್ತರ ಕಚೇರಿಯ ಚಿತ್ರಕಲಾ ವಿಷಯದ ಪರೀವೀಕ್ಷಕ ಟಿ. ದೇವಿಂದ್ರಪ್ಪ ಮಾತನಾಡಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಲೊಡ್ಡೆನೋರ, ನಿರುದ್ಯೋಗ ಚಿತ್ರಕಲಾ ಶಿಕ್ಷಕರ ಸಂಘದ ರಾಜ್ಯ ಪ್ರ. ಕಾರ್ಯದರ್ಶಿ ಬಾಬುರಾವ ಟಿ. ಚವ್ಹಾಣ, ಶಾಲೆ ಮುಖ್ಯಗುರು ಲಿಂಗಪ್ಪ ಮಲ್ಕನ ವೇದಿಕೆಯಲ್ಲಿದ್ದರು. ಧರ್ಮಾನಂದ, ಕಿಶೋರ ನಾಗಿನೆ, ರಾಜಶೇಖರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. ನಿಧನರಾದ ಭಂಕೂರ ಚಿತ್ರಕಲಾ ಶಿಕ್ಷಕಿ ಜ್ಯೋತಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಆಚರಿಸಿದರು. ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಶಾಂತಮಲ್ಲ ಶಿವಮೊ ನಿರೂಪಿಸಿದರು. ಪ್ರಭು ಜಾಣ ಸ್ವಾಗತಿಸಿದರು. ನರಸಿಂಗ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

