ರಸ್ತೆ ಕಾಮಗಾರಿಗೆ ಅಬ್ದುಲ್ ಚಾಲನೆ
ಯಾದಗಿರಿ: ನಗರದ ವಾರ್ಡ್ ನಂ.28ರಲ್ಲಿ ಸಿಸಿ ರಸ್ತೆ ಕಾಮಾಗಾರಿಗೆ ಸ್ಥಳೀಯ ಸದಸ್ಯ ಅಬ್ದುಲ್ ಕರೀಂ ಚಾಲನೆ ನೀಡಿದರು. ನಗರಸಭೆ ಅನುದಾನದಲ್ಲಿ ಬಿಲಾಲ್ ಮಸ್ಜೀದ್ನಿಂದ ಬಸ್ ನಿಲ್ದಾಣದವರೆಗೆ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪೌರಾಯುಕ್ತ ಮಹ್ಮದ್ ಮುನೀರ್ ತಿಳಿಸಿದರು. ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಸಾರ್ವಜನಿಕರಿಗೆ ಹೆಚ್ಚು ಕಾಲ ಬಳಸಲು ಯೋಗ್ಯವಾಗುವಂತೆ ಮಾಡಬೇಕು ಎಂದು ಅವರು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಎಂಜಿನಿಯರ್ ಸಂಜಯ ಕುಲಕರ್ಣಿ ಇತರರು ಇದ್ದರು.
6ರಂದು ಸುರಪುರ ಬಂದ್ಗೆ ಕರೆ
ಸುರಪುರ: ಕದಂಬ, ಬನವಾಸಿ, ಕಿತ್ತೂರು, ಹಂಪಿ ಉತ್ಸವಗಳ ಮಾದರಿಯಲ್ಲಿ ಸುರಪುರ ಉತ್ಸವವನ್ನು ಸರ್ಕಾರವೆ ಆಚರಣೆ ಮಾಡಬೇಕು ಮತ್ತು ಇದಕ್ಕಾಗಿ ಈ ಬಾರಿಯ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ಫೆ.6ರಂದು ಸುರಪುರ ಬಂದ್ಗೆ ಕರೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವಿಸ್ಮರಣೀಯ ಹೋರಾಟ ಮಾಡಿದ ಸುರಪುರ ಸಂಸ್ಥಾನದ ಇತಿಹಾಸವನ್ನು ಸರ್ಕಾರ ಕಡೆಗಣಿಸುತ್ತ ಬರುತ್ತಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಕುಂಬಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದಲ್ಲಿ ಹೋರಾಟದ ಕಿಚ್ಚು ಹಚ್ಚಿದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕರ ಯಶೋಗಾಥೆ ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವುದು ಅವಶ್ಯವಾಗಿದೆ. ಭವ್ಯ ಇತಿಹಾಸ ಹೊಂದಿರುವ ಈ ಭಾಗದ ಸಂಸ್ಥಾನಗಳ ಹಿರಿಮೆಯನ್ನು ಪರಿಚಯಿಸಲು ಸುರಪುರ ಉತ್ಸವ ಆಚರಣೆಗೆ ಸರ್ಕಾರ ಮುಂದಾಗುವುದು ಅವಶ್ಯವಾಗಿದೆ ಎಂದು ಸೇನೆ ಆಗ್ರಹಿಸಿದೆ.
ಕ್ಲಷ್ಟರ್ ಮಟ್ಟದ ಸಮಾಲೋಚನೆ
ಯಾದಗಿರಿ: ತಾಲೂಕಿನ ಸಂಗ್ವಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಡಿಯಾಲ ಕ್ಲಷ್ಟರ್ ಮಟ್ಟದ ನಲಿಕಲಿ ಸಮಾಲೋಚನಾ ಸಭೆ ಜರುಗಿತು. ಸೈದಾಪುರ ವಲಯ ಶಿಕ್ಷಣ ಸಂಯೋಜಕ ಶಂಕರಲಿಂಗಪ್ಪ ಮಾತನಾಡಿ, ನಲಿ- ಕಲಿ ಪ್ರಾಥಮಿಕ ಶಿಕ್ಷಣದ ಬುನಾದಿಯಾಗಿದ್ದು, ಶಿಕ್ಷಕರು ಆಸಕ್ತಿಯಿಂದ ಸಂತಸದಾಯಕ ಕಲಿಕೆ ಆಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಕೇಂದ್ರಗಳನ್ನು ಸಿದ್ಧತೆಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು. ಬಾಡಿಯಾಲ ಕ್ಲಷ್ಟರ್ ಸಿಆರ್ಪಿ ಬಸವನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಗುರುಗಳಾದ ನರಸಿಂಹರಾಜು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಾಯಿಬಣ್ಣ, ಸಹದೇವ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

