ಸುದ್ದಿ ಸಂಕ್ಷೇಪ
ಬೇಕಾಬಿಟ್ಟಿ ವರ್ಗಾ: ಭೀಮರೆಡ್ಡಿ ಗರಂ
ಗುಲ್ಬರ್ಗ: ಕಮಿಷನರ್ ಆಗಿ ಡಾ. ನಾಗಯ್ಯ ಕೆಲಸದ ಮೇಲಿದ್ದರೂ ಸರ್ಕಾರ 14.9.2012 ರಿಂದಲೇ ಹುದ್ದೆ ಖಾಲಿ ಇದೆ ಎಂದು ಇನ್ನೊಬ್ಬರನ್ನು ನೇಮಕ ಮಾಡುವುದು ಅದೆಷ್ಟು ಔಚಿತ್ಯ ಪೂರ್ಣ. ಇದು ಅಕ್ರಮ ನೇಮಕಾತಿ, ಸರ್ಕಾರ ಯಾರದ್ದೋ ಪ್ರಭಾವಕ್ಕೆ ಮಣಿದು ಈ ರೀತಿ ಮಾಡಿದೆ. 2012 ಸೆಪ್ಟೆಂಬರ್ ವರ್ಗಾವಣೆ ಆದೇಶವೂ ಕೈ ಸೇರಿಲ್ಲ, ಈಗಿನ ಆದೇಶವೂ ಕಮಿಷನರ್, ಪಾಲಿಕೆ ಮೇಯರ್ ಯಾರೂ ನೋಡಿಲ್ಲ. ಹೀಗೆ ಗಾಳಿಯಲ್ಲೇ ವರ್ಗಾವಣೆ ಮಾಡುತ್ತ ಹೋದರೆ ಪಾಲಿಕೆ ಗತಿ ಏನು ನಗರಾಭಿವೃದ್ಧಿ ಹಣೆಬರಹವೇನು 5 ವರ್ಷಗಳಲ್ಲಿ 14 ಆಯುಕ್ತರು ಗುಲ್ಬರ್ಗ ಪಾಲಿಕೆಗೆ ಬಂದು ಹೋದರು, ಇದು ಯಾವ ಪುರುಷಾರ್ಥಕ್ಕಾಗಿ ಎಂಬುದು ಸರ್ಕಾರವೇ ಹೇಳಬೇಕು.
ಇಂದು ಕಾರ್ಮಿಕರ ಪ್ರತಿಭಟನೆ
ಆಳಂದ: ತಾಲೂಕಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ಸಹಾಯಕ ಕ್ಷೇತ್ರಾಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿದೆ. ಕೂಡಲೇ ಕ್ರಮ ಜರುಗಿಸಿ, ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕಾರ್ಖಾನೆಯ ಕಾರ್ಮಿಕರು ಫೆ. 3ರಂದು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಕೈಗೊಳ್ಳಲಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಮಲ್ಲಿನಾಥ ಬುಜುರ್ಕೆ, ಕಾರ್ಯದರ್ಶಿ ಜಿ.ಎಸ್. ಚಕ್ರಪಾಣಿ ಅವರು, ಬೊಮ್ಮನಳ್ಳಿಯಲ್ಲಿ ಸಹಾಯಕ ಕ್ಷೇತ್ರಾಧಿಕಾರಿ ಶರಣಬಸಪ್ಪ ಲಾವಣಿ ಮೇಲೆ ಅಲ್ಲಿಯ ರೈತ ಲಿಂಗಣ್ಣಾ ಜೀವಣಿ ಅವರು ಅವಧಿಗೆ ಮುನ್ನವೇ ಕಬ್ಬು ಕಟಾವು ಮಾಡಿ ಪಡೆಯಬೇಕೆಂದು ಹಲ್ಲೆ ನಡೆಸಿದ್ದಾರೆ. ಕಾರ್ಮಿಕರಿಗೆ ರಕ್ಷಣೆಯಿಲ್ಲವಾಗಿದೆ, ಸೂಕ್ತ ರಕ್ಷಣೆ ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ನಾಳೆ ಪಡಿತರ ಚೀಟಿ ಪಡೆಯಿರಿ
ಗುಲ್ಬರ್ಗ: ನಗರದಲ್ಲಿ ಫೆ.4 ರಂದು ನ್ಯಾಯಬೆಲೆ ಅಂಗಡಿ ಸಂಖ್ಯೆ 138, 139, 140, 141, 142, 144, 147, 148 ಹಾಗೂ 243 ಗಳಿಗೆ ಸಂಬಂಧಿಸಿದ ತಾತ್ಕಾಲಿಕ ಪಡಿತರ ಚೀಟಿದಾರರು ಕಾಯಂ ಪಡಿತರ ಚೀಟಿಗಳನ್ನು ಗುಲ್ಬರ್ಗ ಮಹಾನಗರ ಪಾಲಿಕೆ ಹಿಂಭಾಗ ಸ್ವರ್ಣ ಜಯಂತಿ ಕೊಠಡಿ ಬಳಿ ಆಹಾರ ನಿರೀಕ್ಷಕರಿಂದ ಪಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರು ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿ ಸಂಖ್ಯೆ 137, 152, 153, 162 , 163ಗೆ ಸಂಬಂಧಿಸಿದ ತಾತ್ಕಾಲಿಕ ಪಡಿತರ ಚೀಟಿದಾರರ ನ್ಯಾಯಬೆಲೆ ಅಂಗಡಿ ಸಂಖ್ಯೆ 153ರ ಬಳಿ ಖಾಯಂ ಪಡಿತರ ಚೀಟಿಗಳನ್ನು ಪಡೆಯಬೇಕು. ನ್ಯಾಯಬೆಲೆ ಅಂಗಡಿ ಸಂಖ್ಯೆ 162, 164, 165, 166, 167ಗೆ ಸಂಬಂಧಿಸಿದ ತಾತ್ಕಾಲಿಕ ಪಡಿತರ ಚೀಟಿದಾರರು ರಾಜಾಪೂರ ಮೈಯಿನ್ ರೋಡ್, ಅಶೋಕ ಹೋಟೆಲ್ ಹತ್ತಿರ ಇರುವ ಮಳಿಗೆ ಬಳಿ ಕಾಯಂ ಪಡಿತರ ಚೀಟಿಗಳನ್ನು ಪಡೆಯಬೇಕು. ನ್ಯಾಯಬೆಲೆ ಅಂಗಡಿ ಸಂಖ್ಯೆ 177, 201, 204, 205, 209, 215, 240, 245ರ ಬಳಿ ಸಂಬಂಧಿಸಿದ ತಾತ್ಕಾಲಿಕ ಪಡಿತರ ಚೀಟಿದಾರರಿಗೆ ಕಾಯಂ ಪಡಿತರ ಚೀಟಿಗಳನ್ನು ಆಹಾರ ನಿರೀಕ್ಷಕರು ವಿತರಣೆ ಮಾಡುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

