ಗುಲ್ಬರ್ಗಾ

ವಂಚನೆ ಆರೋಪ; ದೂರು

Published On :

ಗುಲ್ಬರ್ಗ: ತಾಲೂಕಿನ ಅವರಾದ ಗ್ರಾಮದ ಸೀಮಾಂತರದಲ್ಲಿರುವ ಕೃಷಿ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಲು ಗ್ರಾಪಂ ಪಿಡಿಒ ಮತ್ತು ಬಿಲ್ ಕಲ್ಟರ್ಗಳು ಸೇರಿ ಖೊಟ್ಟಿ ದಾಖಲಾತಿಗಳ ಮೇಲೆ ಸಹಿ ಮಾಡಿ 7.25 ಲಕ್ಷ ವಂಚನೆ ಮಾಡಿದ ಘಟನೆ ನಡೆದಿದೆ. ಗುಲ್ಬರ್ಗದ ಖಾಜಾ ಕಾಲೋನಿಯ ಮುನಿರುದ್ದೀನ್ ಎಂಬಾತನೆ ವಂಚನೆಗೊಂಡವನು. ಅವರಾದ ಗ್ರಾಮದ ಸೀಮಾಂತರದಲ್ಲಿ ಸರ್ವೆ ನಂ. 101 ಅಅ ಮುನಿರುದ್ದೀನ್ ಹೆಸರಿನಲ್ಲಿ 1 ರಿಂದ 198 ಪ್ಲಾಟ್ಗಳನ್ನು ಮಾಡಿ ಕೊಡುವುದಾಗಿ ದಲ್ಲಾಳಿ ಜಗದೀಶ ವಳಕೇರಿ ಮತ್ತು ಕುಸನೂರ ಗ್ರಾಪಂ ಪಿಡಿಓ ಮೋನಿಕಾ ಜಾಧವ, ಬಿಲ್ ಕಲೆಕ್ಟರ್ ಶರಣಗೌಡ ಮತ್ತು ಅವರಾದ ಬಿಲ್ ಕಲೆಕ್ಟರ್ ಪೀರಪ್ಪ ಸೇರಿಕೊಂಡು ವಂಚನೆ ಮಾಡಿದ್ದಾರೆ. ಪಂಚಾಯತಿಯ ಅರ್ಜಿ ನಂ. 12, ಕರ ಪಾವತಿ ರಶೀದಿ, ಬಾಕಿ ರಹಿತ ಪ್ರಮಾಣ ಪತ್ರ, ಖಾತಾ ಎಕ್ಸಟ್ರಾಕ್ಸ್ ಖೊಟ್ಟಿ ದಾಖಲಾತಿಗಳನ್ನು ತಯಾರಿಸಿ ಅವುಗಳ ಮೇಲೆ ಪಿಡಿಒ ಮತ್ತು ಬಿಲ್ ಕಲ್ಟರ್ಗಳು ಸಹಿ ಮಾಡಿ ವಂಚನೆ ಮಾಡಿದ್ದಾರೆಂದು ಮುನಿರುದ್ದೀನ್ ಅವರು ಗುಲ್ಬರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಡಿಒ ಮತ್ತು ಬಿಲ್ ಕಲೆಕ್ಟರ್ ವಿರುದ್ಧ ದೂರು ನೀಡಿದ್ದಾರೆ.
ಯಂತ್ರದಿಂದ ಶೌಚ ಸ್ವಚ್ಛತೆಗೆ ಸೂಚನೆ
ಗುಲ್ಬರ್ಗ: ಗುಲ್ಬರ್ಗ- ಚಿತ್ತಾಪುರ ತಾಲೂಕಿನಾದ್ಯಂತ ಶೌಚಾಲಯದ ಗುಂಡಿಗಳನ್ನು ಯಾವುದೇ ವ್ಯಕ್ತಿಗಳು ಸ್ವಚ್ಛ ಮಾಡದೆ ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಛಗೊಳಿಸುವಂತೆ ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿ ಸೂಚಿಸಿದ್ದಾರೆ. ತಪ್ಪಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ. ನಿಯಮದನ್ವಯ ಒಣ ಶೌಚಾಲಯಗಳನ್ನು ಹೊಂದಿರುವುದಾಗಲಿ, ತಲೆ ಮೇಲೆ ಮಲ ಹೊರುವುದಾಗಲಿ ಹಾಗೂ ಮಲ ಹೊರುವ ಪದ್ಧತಿಗೆ ಪ್ರಚೋದನೆ ನೀಡುವುದನ್ನು ನಿಷೇಧಿಸಿದೆ.
ಇಂದು ಸಂವಾದ ಕಾರ್ಯಕ್ರಮ
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರದಲ್ಲಿ ನಿರ್ಮಾಣಗೊಂಡ ಮಹಿಳಾ ಸುರಕ್ಷತೆ, ಸಮಸ್ಯೆ ಹಾಗೂ ಸವಾಲುಗಳು ಕುರಿತು ಸಂವಾದ ಕಾರ್ಯಕ್ರಮವು ಫೆ.2ರಂದು ಮಧ್ಯಾಹ್ನ 12ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಡಾ. ಛಾಯಾ ದೇಗಾಂವಕರ್, ಡಾ. ಶೈಲಜಾ ಹಿರೇಮಠ ಮತ್ತು ಇಂದಿರಾ ಮಾನ್ವಿಕರ ಅವರು ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆಂದು ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಪರಿಷತ್ತಿಗೆ ಆಯ್ಕೆ
ಗುಲ್ಬರ್ಗ: ಉತ್ತರ ಪ್ರದೇಶದ ಲಕ್ನೋದಲ್ಲಿ ಈಚೆಗೆ ನಡೆದ ಭಾರತೀಯ ಪರಿಸರ ವಿಜ್ಞಾನ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪರಿಷತ್ತಿಗೆ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ಕೆ. ವಿಜಯಕುಮಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.