ಗದಗ

ಗಾಣಿಗ ಸಮಾಜ ವಧು-ವರರ ಸಮಾವೇಶ

Published On :

ಗದಗ: 2-3 ತಿಂಗಳಲ್ಲಿ ಟ್ರಸ್ಟ್‌ನ ವತಿಯಿಂದ ಸಮಾಜ ಬಾಂಧವರ ವಧು-ವರರ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದ್ದು, ಸಮಾಜದ ಸರ್ವ ಜನರು ಇದಕ್ಕೆ ಸಹಕರಿಸುವಂತೆ ಜಿಲ್ಲಾ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗ ಟ್ರಸ್ಟ್‌ನ ಗೌರವಾಧ್ಯಕ್ಷ ಸಿ.ಬಿ. ಬಡ್ನಿ ಹೇಳಿದರು. ನಗರದ ಹಾತಲಗೇರಿ ರಸ್ತೆಯಲ್ಲಿರುವ ಸಮಾಜದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾಜ ಬಾಂಧವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ಸಮುದಾಯ ನಿರ್ಮಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಬರುವ ಜನವರಿಯಲ್ಲಿ ಭೂಮಿ ಪೂಜೆ ನೆರವೇರಿಸಲು ಉದ್ದೇಶಿಸಲಾಗಿದೆ. ಸಹಾಯ ಮಾಡುವವರಿಗೆ ವಿನಂತಿಸಲಾಯಿತು. ಸಮಾಜದ ಅಧ್ಯಕ್ಷ ಗಿರಿಯಪ್ಪ ಅಸೂಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭಕಟ್ಟಡ ನಿರ್ಮಾಣ ಸಮಿತಿಗೆ ನೂತನವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ನಿಂಗಪ್ಪ ಕೆಂಗಾರ, ಕಾರ್ಯದರ್ಶಿಯಾಗಿ ಬಸವರಾಜ ಬಿಂಗಿ, ಖಜಾಂಚಿಯಾಗಿ ಮಲ್ಲಪ್ಪ ಹವಳಪ್ಪನವರ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು. ಎ.ಕೆ. ಕಿರೆಸೂರು, ಐ.ಬಿ. ಮರಿಬಸಣ್ಣವರ, ಎಂ.ಎಂ. ಹವಳಪ್ಪನವರ, ಮೋಟಬಸಪ್ಪ ಶಲವಡಿ, ಎ.ಸಿ. ಲಕ್ಕುಂಡಿ, ಎಸ್.ಬಿ. ಗುಜಮಾಗಡಿ, ಐ.ಎಂ. ಕಿರೆಸೂರು, ಬಿ.ಕೆ. ಐನಾಪುರ, ಬಿ.ವಿ. ಬಿಂಗಿ, ಎಚ್.ಎಂ. ಬಣವಿ, ಪ್ರಕಾಶ ಗಿರಿಯಪ್ಪಗೌಡ್ರ, ಅಶೋಕ ಮಂದಾಲಿ, ಬಸವರಾಜ, ಪಿ.ಜಿ. ಹುಡೇದ, ನಿಂಗಪ್ಪ ಮಣ್ಣೂರು, ಶಿವಪುತ್ರಪ್ಪ ಮೂಲಿಮನಿ, ಚಂದ್ರು ಪತ್ತಾರ, ಎಸ್.ವಿ. ಪಾಟೀಲ, ಎಸ್.ವೈ. ಮರಳಪ್ಪನವರ, ರಾಜಶೇಖರ ಬಳಿಯಲಿ, ಆರ್.ಎಂ. ಮಂದಾಲಿ, ಎಸ್.ಬಿ. ಹಿಟ್ನಳ್ಳಿ, ಸೋಮನಗೌಡ ಪಾಟೀಲ, ಶಂಭುಲಿಂಗಪ್ಪ ಒಡೆಯರ, ಎಸ್.ಟಿ.ಪಾಟೀಲ, ರುದ್ರಪ್ಪ ಬಾವಿ, ಶೈಲಗೌಡ ಪಾಟೀಲ, ಪಿ.ಬಿ. ಚಳ್ಳಮರದ, ಎ.ಎಸ್. ಬಿಂಗಿ, ವಿ.ಎಸ್. ಹಂಚನಾಳ, ಬಸವಂತಪ್ಪ ನವಲಳ್ಳಿ, ಹನುಮಂತಪ್ಪ ಮುಗಳಿ, ಟಿ.ವಿ. ಗಾಣಿಗೇರ, ಇಬ್ರಾಹಿಂ ಕಿತ್ತೂರು, ಶಿವಪ್ಪ ಹಿಟ್ನಳ್ಳಿ, ರಮೇಶ ಮಂದಾಲಿ, ಮುತ್ತಣ್ಣ ಚಳ್ಳಮರದ, ಅಂದಪ್ಪ ಬಿಂಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಿಗೇಶ ಬಡ್ನಿ ನಿರೂಪಿಸಿದರು. ಅಶೋಕ ಮಂದಾಲಿ ವಂದಿಸಿದರು.
ಆ. 12, 13ರಂದು ಪ್ರತಿಭಾ ಪುರಸ್ಕಾರ
ಮುಂಡರಗಿ: ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಮಾಜ ಹಾಗೂ ಗದಗ ಜಿಲ್ಲಾ ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ ಗದಗ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಆ. 12 ಮತ್ತು 13ರಂದು ಎರಡು ದಿನಗಳ ಕಾಲ ಜರುಗುವ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ವೀರಶೈವ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಶೇ. 84ರಷ್ಟು ಪ್ರತಿಶತ ಅಂಕವನ್ನು ಪಡೆದವರಿಗೆ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಗುದು. ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ ಬಿ.ಕೆ. ಪಾಟೀಲ ಮೊ- 8105414124, ಮಂಜುನಾಥ ಮುಧೋಳ ಮೊ -9741758688 ಇವರನ್ನು ಸಂಪರ್ಕಿಸಲು ಮುಂಡರಗಿ ತಾಲೂಕು ವೀರಶೈವ ಪಂಚಮಸಾಲಿ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಟೌವ್ ಸ್ಫೋಟ: ಮಹಿಳೆ ಸಾವು
ಗದಗ: ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಬುಧವಾರ ಸಂಜೆ ಅಡುಗೆ ಮಾಡುವ ಸಂದರ್ಭದಲ್ಲಿ ಸ್ಟೌವ್ ಸ್ಫೋಟಗೊಂಡು ಮಹಿಳೆ ಸಾವನಪ್ಪಿದ್ದಾರೆ. ಮೃತಳನ್ನು ಸುಲ್ತಾನ್‌ಬೇಗಂ (30) ಎಂದು ಗುರುತಿಸಲಾಗಿದೆ. ಘಟನೆ ಸಂದರ್ಭದಲ್ಲಿ ಸುಲ್ತಾನ್‌ಬೇಗಂ ಅವಳನ್ನು ರಕ್ಷಿಸಲು ಹೋಗಿದ್ದ ರಾಜೇಸಾಬ್ ಎನ್ನುವವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.