ಗದಗ

ಶಾಲಾ ಸಂಸತ್ ರಚನೆ

Published On :

ಗದಗ:  ತಾಲೂಕಿನ ಅಡವಿಸೋಮಾಪುರ ಸಣ್ಣತಾಂಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ 2014-15ನೇ ಸಾಲಿನ ಶಾಲಾ ಸಂಸತ್ ರಚನೆಯ ಅಂಗವಾಗಿ ಶಾಲಾ ಮಕ್ಕಳಿಂದ ಅಣಕು ಮತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲಾ ಪ್ರಧಾನಮಂತ್ರಿಯಾಗಿ ಸೌರವ ಪವಾರ, ಉಪಪ್ರಧಾನಮಂತ್ರಿಯಾಗಿ ಪೂಜಾ ಲಮಾಣಿ, ಹಣಕಾಸು ಮಂತ್ರಿಯಾಗಿ ಗೋಪಾಲ ಲಮಾಣಿ, ಪರಿಸರ ಮಂತ್ರಿಯಾಗಿ ಸಾಗರ ಲಮಾಣಿ, ಆರೋಗ್ಯ ಮಂತ್ರಿಯಾಗಿ ಗೋಪಾಲ ದೇವಪ್ಪ, ಕ್ರೀಡಾ ಮಂತ್ರಿಯಾಗಿ ಸೌರವ ಲಮಾಣಿ, ಶಿಕ್ಷಣ ಮಂತ್ರಿಯಾಗಿ ಆಕಾಶ ಜಡಿ, ಸಾಂಸ್ಕೃತಿಕ ಮಂತ್ರಿಯಾಗಿ ರಾಜೇಶ್ವರಿ ಲಮಾಣಿ, ಸ್ವಚ್ಛತೆ ಮಂತ್ರಿಯಾಗಿ ಶಿವಾಜಿ ಲಮಾಣಿ, ಶಾಲಾ ನಿರ್ವಹಣಾ ಮಂತ್ರಿಯಾಗಿ ಆಶಾ ರಾಠೋಡ, ಪ್ರವಾಸ ಮಂತ್ರಿಯಾಗಿ ರೇಷ್ಮಾ ತಿಪ್ಪಣ್ಣ ಆಯ್ಕೆಯಾದರು. ಶಾಲಾ ಪ್ರಧಾನ ಶಿಕ್ಷಕ ಮಲ್ಲೇಶ ಹರಿವಾಣ ಶಾಲಾ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ಮಕ್ಕಳಿಗೆ ಶುಭ ಹಾರೈಸಿದರು. ಶಿಕ್ಷಕ ಎಲ್.ವಿ. ನಂದೆಪ್ಪನವರ, ಜಿ.ಎಲ್. ಹೂವಿನಹಳ್ಳಿ, ಎಸ್.ಟಿ. ಹಳಕಟ್ಟಿ, ಪಿ.ಬಿ. ಕಿಲಬನವರ, ಎಸ್‌ಡಿಎಂಸಿ ಸದಸ್ಯ ಹೇಮಣ್ಣ ಲಮಾಣಿ, ಲಕ್ಷ್ಮಣ ಲಮಾಣಿ, ಗಂಗವ್ವ ಲಮಾಣಿ, ದೇವಕ್ಕ ಲಮಾಣಿ, ದಾನಮ್ಮ ಲಮಾಣಿ ಉಪಸ್ಥಿತರಿದ್ದರು.
ಖಾದಿ ಘಟಕ ಸಾಲ: ಏಕಗಂಟು ತೀರುವಳಿ ಯೋಜನೆಗದಗ:  ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಖಾದಿ ಮತ್ತು ಗ್ರಾಮೋದ್ಯೋಗ ಯೋಜನಾ ಆಧಾರಿತ ಧನಸಹಾಯ ಯೋಜನೆಯಡಿ ಸಾಲ ಪಡೆದ ಘಟಕಗಳಿಗೆ ಬಡ್ಡಿ ಮನ್ನಾ ಮಾಡುವುದರೊಂದಿಗೆ ಏಕಗಂಟು ತೀರುವಳಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಗೆ ರಾಜ್ಯ ಸರ್ಕಾರವು ಜು. 9ರಂದು ಆದೇಶ ಹೊರಡಿಸಿ ರಾಜ್ಯಾದ್ಯಂತ 21,180 ಫಲಾನುಭವಿಗಳಿಗೆ ಪ್ರಸಕ್ತ ಸಾಲಿನಲ್ಲಿ ರು. 26.15 ಕೋಟಿ ಅನುದಾನ ಒದಗಿಸಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 194 ಫಲಾನುಭವಿಗಳಿದ್ದು, ಒಟ್ಟು ರು. 6.09 ಲಕ್ಷ ಅನುದಾನ ನೀಡಲಾಗಿದೆ. ಯೋಜನೆಯ ಅನ್ವಯ ಸಾಲ ಪಡೆದ ಫಲಾನುಭವಿಗಳು ಏಕಗಂಟು ತೀರುವಳಿ ಯೋಜನೆಯಡಿ ಆಗಿರುವ ಬಡ್ಡಿ ಮನ್ನಾದ ಪ್ರಯೋಜನೆ ಪಡೆದು 31-3-2015 ರೊಳಗೆ ಒಂದು ಬಾರಿ ಅಥವಾ ಕಂತುಗಳಲ್ಲಿ ಅಸಲನ್ನು ಪೂರ್ಣವಾಗಿ ಮರುಪಾವತಿ ಮಾಡಿ ಋಣಮುಕ್ತರಾಗುವ ಈ ಅವಕಾಶವನ್ನು ಬಳಸಿಕೊಳ್ಳಲು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ  ಗುಣ ಅಳವಡಿಸಿಕೊಳ್ಳಬೇಕು
ಗದಗ:  ಮಕ್ಕಳು ಸ್ಪರ್ಧಾತ್ಮಕ ಗುಣಗಳನ್ನು ಅಳವಡಿಸಿ ಕೊಳ್ಳುವುದರ ಜತೆಗೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದು ಬಾಲ ವಿನಾಯಕ ವಿದ್ಯಾನಿಕೇತನ ಕಾರ್ಯದರ್ಶಿ ಎಸ್. ರವಿ ಹೇಳಿದರು. ಅವರು ಈಚೆಗೆ ನಗರದ ಬಾಲವಿನಾಯಕ ವಿದ್ಯಾನಿಕೇತನ ಶಾಲೆಯ ಪ್ರಪ್ರಥಮ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿದರು. ಪಿಎಸ್‌ಐ ವಿದ್ಯಾಧರನ್ ಅವರು ವಿವಿಧ ಗುಂಪುಗಳ ಉದ್ಘಾಟನೆ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನದ ಮೂಲಕ ಗೌರವ ಸ್ವೀಕರಿಸಿ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷೆ ಕಮಲಾ ಸೆಲ್ವರಾಜ, ಸಂಸ್ಥಾಪಕ ಕಾರ್ಯದರ್ಶಿ ಎಂ.ಸೆಲ್ವರಾಜ, ಆಡಳಿತ ಮಂಡಳಿ ಸದಸ್ಯೆ ಆರ್. ವಸಂತಕುಮಾರಿ, ಆರ್. ಮಲ್ಲಿಕಾ, ಆರ್. ವಿನಾಯಕ, ಶಾಲೆಯ ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪ ಪ್ರಾಚಾರ್ಯ ಪ್ರಮೋದ ಮಳೇಕರ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.