ಶಾಲಾ ಸಂಸತ್ ರಚನೆ
ಹೊಳೆಆಲೂರು: ಇಲ್ಲಿನ ಕಲ್ಮೇಶ್ವರ ಸಂಯುಕ್ತ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಶಾಲಾ ಸಂಸತ್ ಬುಧವಾರ ರಚಿಸಲಾಯಿತು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ವೈ.ವಿ. ಗಾಣಿಗೇರ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆಯ ಅಧ್ಯಕ್ಷ ಸಿ. ಜಿ. ಬೀರನೂರ ಆಗಮಿಸಿದ್ದರು. ಪ್ರಧಾನ ಮಂತ್ರಿಯಾಗಿ ಪ್ರಮೋದ ಪಾಟೀಲ, ಸಭಾಪತಿಯಾಗಿ ಎಸ್.ಎಂ. ಮಾಡಲಗೇರಿ ಆಯ್ಕೆಯಾದರಲ್ಲದೇ 16 ವಿಭಾಗಗಳ ಸದಸ್ಯರೊಂದಿಗೆ ಮಂತ್ರಿಮಂಡಳ ರಚನೆ ಮಾಡಲಾಯಿತು. ಎಸ್.ಎ. ಗಿರಿತಿಮ್ಮಣ್ಣವರ ಮಾತನಾಡಿ, ಶಾಲಾ ಸಂಸತ್ ರಚನೆಯ ಉದ್ದೇಶ ಕುರಿತು ಹೇಳಿದರು. ವೈ.ವಿ. ಗಾಣಿಗೇರ ಮಂತ್ರಿಮಂಡಲಕ್ಕೆ ಪ್ರಮಾಣ ವಚನ ಬೋಧಿಸಿದರು. ಸಿ.ಜಿ. ಬೀರನೂರ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಬಡಮಕ್ಕಳಿಗೆ ಸಂಸ್ಥೆಯಿಂದ ಉಚಿತ ಸಮವಸ್ತ್ರ ವಿತರಿಸಲಾಯಿತು. ಎಸ್. ಕೆ. ಶೆಲ್ಲಿಕೇರಿ ಸ್ವಾಗತಿಸಿದರು. ಎಂ.ಎಸ್. ಕರಾಡದ ವಂದಿಸಿದರು.
ನೇಕಾರರಿಗೆ ಸೌಲಭ್ಯ ನೀಡಿ
ಗದಗ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಕೈಮಗ್ಗ ನೇಕಾರರಿಗೆ ಹಾಗೂ ಕೆಎಚ್ಡಿಸಿ ನೇಕಾರರಿಗೆ ನೀಡುತ್ತಿದ್ದ ಐಸಿಐಸಿಐ ಲೊಂಬಾರ್ಡ್ ಆರೋಗ್ಯ ಕಾರ್ಡ್ನ್ನು 6 ತಿಂಗಳಿಂದ ನೀಡುತ್ತಿಲ್ಲ. ನೇಕಾರರಿಗೆ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಸೌಲಭ್ಯದಲ್ಲಿ ತೊಂದರೆಯಾಗುತ್ತಿದ್ದು, ಈ ಕೂಡಲೇ ಜವಳಿ ಇಲಾಖೆ ನೇಕಾರರಿಗೆ ಸೌಲಭ್ಯ ನೀಡಲು ಬಿ. ಬಿ. ಬಣ್ಣದ ಕೈಮಗ್ಗ ನೇಕಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಬಣ್ಣದ ಅವರು ಒತ್ತಾಯಿಸಿದ್ದಾರೆ. ಅವರು ಈ ಕುರಿತು ಜವಳಿ ಸಚಿವ ಬಾಬುರಾವ್ ಚಿಂಚನ್ಸೂರ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹಾಗೂ ಜವಳಿ ಅಯುಕ್ತರಿಗೂ ಪತ್ರ ಬರೆದು ಬೇಗನೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಆರೋಗ್ಯ ಕಾರ್ಡ್ ಬಂದ್ ಮಾಡಿರುವ ಕುರಿತು ಇಲಾಖೆಯವರ ಹತ್ತಿರ ವಿಚಾರ ಮಾಡಿದರೆ ಐಸಿಐಸಿಐಯ ಕಂಪನಿ ಜತೆ ಒಪ್ಪಂದ ಮುಗಿದಿದೆ. ಬೇರೆ ಕಂಪನಿಯ ಕೂಡ ಒಪ್ಪಂದ ಆಗಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಇಬ್ಬರ ಜಗಳದಲ್ಲಿ ನೇಕಾರರು ಆರೋಗ್ಯದ ತೊಂದರೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಬೇಗನೆ ಈ ಆರೋಗ್ಯ ಕಾರ್ಡ್ಗಳನ್ನು ನೀಡುವ ವ್ಯವಸ್ಥೆ ಆಗುವಂತೆ ಒತ್ತಾಯಿಸಿದ್ದಾರೆ.
ವಚನಾಮೃತ ನಾಳೆ
ನರಗುಂದ: ಶ್ರಾವಣ ಮಾಸದ ನಿಮಿತ್ತ ತಿಂಗಳವರೆಗೆ ನಡೆಯುವ ವಚನಾಮೃತ ಪ್ರಾರಂಭೋತ್ಸವ ಜು. 27ರ ಸಂಜೆ 6ಕ್ಕೆ ವಿ.ಎನ್. ಕೊಳ್ಳಿಯವರ ಮನೆಯಲ್ಲಿ ಜರುಗಲಿದೆ. ಕಾರ್ಯಕ್ರಮಕ್ಕೆ ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕನವರ, ಸಿ.ಎಚ್. ಕೋರಿ, ಸಿದ್ದರಾಮಪ್ಪ ಗೋವೇಶ್ವರ, ಚನ್ನಬಸಪ್ಪ ಕಂಠಿ, ಕಸಪ ತಾಲೂಕು ಅಧ್ಯಕ್ಷ ಪಿ.ಸ. ಕಲಹಾಳ, ಶಂಕ್ರಣ್ಣ ವಾಳದ, ವಿ.ಎನ್. ಕೊಳ್ಳಿಯವರ, ಬಸವ ಕೇಂದ್ರ ಹಾಗೂ ಮುರುಘರಾಜೇಂದ್ರ ಉಚಿತ ವಸತಿ ನಿಲಯದ ಎಲ್ಲ ಪದಾಧಿಕಾರಿಗಳು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಕಾರ್ಯದರ್ಶಿ ಆಯ್ಕೆ
ಗದಗ: ಸ್ಥಳೀಯ ವಿ.ಡಿ.ಎಸ್. ಬಾಲಕರ ಪಪೂ ಕಾಲೇಜಿನ ವಿದ್ಯಾರ್ಥಿ ಸಂಘದ ವಿವಿಧ ವಿಭಾಗಗಳ ಕಾರ್ಯದರ್ಶಿಗಳನ್ನು ಚುನಾವಣೆ ಮುಖಾಂತರ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎ. ಬೇವಿನಕಟ್ಟಿ, ಉಪಪ್ರಧಾನ ಕಾರ್ಯದರ್ಶಿಯಾಗಿ ಎಫ್.ಎಸ್. ನಾವಳ್ಳಿ, ಮಹಿಳಾ ಪ್ರತಿನಿಧಿಯಾಗಿ ರಾಜೇಶ್ವರಿ ತಮ್ಮನಗೌಡ್ರ, ಉಪಮಹಿಳಾ ಪ್ರತಿನಿಧಿಯಾಗಿ ಶಿಲ್ಪಾ ಹೊಸಮನಿ, ಕ್ರೀಡಾ ಕಾರ್ಯದರ್ಶಿಯಾಗಿ ಎಸ್.ಪಿ. ಹಿರೇಮಠ, ಉಪ ಕ್ರೀಡಾ ಕಾರ್ಯದರ್ಶಿಯಾಗಿ ಆರ್.ಎಸ್. ಲಮಾಣಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಶಾಲ ಮುರಗಿ, ಉಪಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಲ್ಲಮ್ಮ ಪಟ್ಟೇದ, ಪ್ರವಾಸ ಕಾರ್ಯದರ್ಶಿಯಾಗಿ ಕುಮಾರ ಲಮಾಣಿ, ಉಪಪ್ರವಾಸ ಕಾರ್ಯದರ್ಶಿಯಾಗಿ ಹುಸೇನ ಮದನಿ, ಹಸಿರು ಪಡೆ ಕಾರ್ಯದರ್ಶಿಯಾಗಿ ಸುನೀಲ ಚಲವಾದಿ, ಉಪಹಸಿರು ಪಡೆ ಉಪಕಾರ್ಯದರ್ಶಿಯಾಗಿ ರಮೇಶ ದೊಡ್ಡಮನಿ ಆಯ್ಕೆಯಾಗಿದ್ದಾರೆ. ದತ್ತಪ್ರಸನ್ನ ಪಾಟೀಲ ಕಾರ್ಯಗಳ ಕುರಿತು ವಿವರಿಸಿದರು. ಪ್ರಾ. ಎಂ.ಸಿ. ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ.ಬಿ. ಮಿರ್ಜಿ ಚುನಾವಣಾಧಿಕಾರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

