ಗದಗ

ನಗರಕ್ಕಿಂದು ಬಿ. ಶ್ರೀರಾಮುಲು

Published On :

ಗದಗ:  ಸಂಸದ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಜು. 25ರ ಸಂಜೆ 6.30 ಗಂಟೆಗೆ ನಗರದಲ್ಲಿರುವ ಜುಮ್ಮಾ ಮಸ್ಜಿದ್ ಹತ್ತಿರ ನಡೆಯುವ ಇಫ್ತಾರಕೂಟದಲ್ಲಿ ಪಾಲ್ಗೊಳ್ಳುವರು ಎಂದು ಆಪ್ತ ಸಹಾಯಕ ಎಸ್.ಎಚ್. ಶಿವನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸತ್ ರಚನೆ
ಗಜೇಂದ್ರಗಡ: ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚಿಸಲಾಯಿತು. ಎಸ್.ಎಸ್. ರಾಯಬಾಗಿ (ಪ್ರಧಾನ ಮಂತ್ರಿ), ಎಸ್.ಎನ್. ಭೋವಿ (ಮಹಿಳಾ ಹಾಗೂ ಶಿಕ್ಷಣ), ವೈ.ವಿ. ಹದ್ಲಿ (ಕ್ರೀಡಾ ಮತ್ತು ಶಿಸ್ತು), ಜೆ.ಡಿ. ಮಾಲ್ದಾರ (ಪ್ರವಾಸ), ಡಿ.ಆರ್. ಜಿಂಗಾಡೆ (ಹಣಕಾಸು ಮತ್ತು ವಾಚನಾಲಯ), ಎಸ್.ಎಸ್.ಪಾಟೀಲ (ಪರಿಸರ), ಎಸ್.ಎಸ್. ಪಾಚಂಗಿ (ವಿಜ್ಞಾನ), ವಿ.ವಿ. ಮಲಗಾ (ಪ್ರಾರ್ಥನೆ ಮತ್ತು ವಾರ್ತಾ), ಜಿ.ಸಿ. ಹಿರೇಮಠ (ಸಾಂಸ್ಕೃತಿಕ) ಎ.ಎಂ. ಪರಿಟ (ಆರೋಗ್ಯ), ಎಂ.ಸಿ. ಜಕ್ಕಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಶಾಲಾ ಸಂಸತ್ತಿಗೆ ಆಯ್ಕೆಯಾದರು ಎಂದು ಮುಖ್ಯ ಗುರುಮಾತೆ ಎಂ.ಟಿ. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ನರಗುಂದ:  ತಾಲೂಕಿನ ಸುರಕೋಡದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ರಚಿಸಲಾಯಿತು. ಅಧ್ಯಕ್ಷರಾಗಿ ಜಗದೀಶ ನಂದಿ, ಉಪಾಧ್ಯಕ್ಷರಾಗಿ ಸಿ.ವಿ. ಪಾಟೀಲ, ಸದಸ್ಯರಾಗಿ ಎಂ.ಬಿ. ಮಜ್ಜಿಗಿ, ವೀರಪ್ಪ ಮಡಿವಾಳರ, ಮಲ್ಲವ್ವ ಹಡಪದ, ಶೇಖರಯ್ಯ ಹಿರೇಮಠ, ಕಾಳವ್ವ ಕುಸುಗಲ್, ನಾಗಪ್ಪ ಕುಂಬಾರ, ಬಸಪ್ಪ ಪೂಜಾರ, ಬಸಪ್ಪ ಮುತ್ತಣ್ಣನವರ, ಸಾವಿತ್ರಿ ಜಾಲಿಹಾಳ, ಪವಾರ, ಬಸವರಾಜ ಬಾರಕೇರ ಆಯ್ಕೆಯಾಗಿದ್ದಾರೆಂದು ಮುಖ್ಯಾಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂಜಾ ಸಮಾರಂಭ ಇಂದು
ಗದಗ:  ಜ. ವಿಠ್ಠಲಾರೂಢ ಮಹಾಸ್ವಾಮಿ ಸಮಾಜ ಟ್ರಸ್ಟ್ ಕಮಿಟಿ, ಎಸ್.ಎಸ್.ಕೆ. ತರುಣ ಸಂಘ, ಎಸ್.ಎಸ್.ಕೆ. ಮಹಿಳಾ ಮಂಡಳ ಗದಗ ಇವರ ವತಿಯಿಂದ ನಗರದ ಜಗದಂಬಾ ದೇವಸ್ಥಾನ ಮತ್ತು ತುಳಜಾಭವಾನಿ ದೇವಸ್ಥಾನಗಳಲ್ಲಿ ಜು. 25ರಂದು ಭಂಡಾರ ಅಲಂಕಾರ ಪೂಜಾ ಸಮಾರಂಭ ನೆರವೇರಲಿದೆ. ಅಂದು ಬೆಳಗ್ಗೆ 8 ರಿಂದ 9 ಗಂಟೆಯ ವರೆಗೆ ಮತ್ತು ತುಳಜಾಭವಾನಿ ದೇವಸ್ಥಾನದಲ್ಲಿ ಬೆಳಗ್ಗೆ 10ರಿಂದ 11ರ ವರೆಗೆ ಪೂಜಾ ಸಮಾರಂಭ, ಮಧ್ಯಾಹ್ನ 12ಕ್ಕೆ ಮಹಾನೈವೇದ್ಯ, ಮಹಾಮಂಗಳಾರತಿ ಕಾರ್ಯಕ್ರಮ ನರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಉದ್ಯೋಗಾಧಾರಿತ ತರಬೇತಿ
ಗದಗ:  ನಗರದ ಸಮರ್ಥನಂ ಅಂಗವಿಕಲರ ಸಂಸ್ಥೆಯು ವರ್ಷಕ್ಕೆ 4 ಬ್ಯಾಚ್‌ನಂತೆ 3 ತರಹದ ಅಂದರೆ ಐ.ಟಿ.ಟಿ.ಬಿ.ಪಿ.ಒ. ಮತ್ತು ರಿಟೇಲ್ ತರಬೇತಿಯನ್ನು ನೀಡುತ್ತಿದ್ದು, ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ ಅಂಗವಿಕಲರು, ಅಂಧರು, ಕಿವುಡ ಮತ್ತು ಮೂಕ ಮಕ್ಕಳು ಹಾಗೂ ದೈಹಿಕ ಅಂಗವಿಕಲರು ಈ ತರಬೇತಿಯನ್ನು ಪಡೆಯಬಹುದಾಗಿದೆ. ಶಿಕ್ಷಣ, ಊಟ ಮತ್ತು ವಸತಿ (ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ) ಉಚಿತವಾಗಿದೆ. ತರಬೇತಿಯನ್ನು ಮುಗಿಸಿದ ನಂತರ ಖಾಸಗಿ ಕಂಪನಿಗಳಲ್ಲಿ ಖಚಿತವಾಗಿ ಕೆಲಸ ಕೊಡಿಸಲಾಗುವುದು. ಆಸಕ್ತರು ಜು. 31ರೊಳಗಾಗಿ ಸಂಪರ್ಕಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಮರ್ಥನಂ ಅಂಗವಿಕಲರ ಸಂಸ್ಥೆ ಎಲ್.ಎಚ್. ದೂದಿಹಳ್ಳಿ ಬಿಲ್ಡಿಂಗ್, ಪಂಚಾಕ್ಷರಿ ನಗರ 4ನೇ ಕ್ರಾಸ್ ಗದಗ-ದೂ. 08372-237775, ಮೊ. 7760403638, 9986979391 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.