ಮದ್ಯದಂಗಡಿ ಕಳ್ಳತನ
ಗದಗ: ಇಲ್ಲಿಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಗ್ರೇನ್ ಮಾರುಕಟ್ಟೆ ಭಾಗದಲ್ಲಿರುವ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಯಲ್ಲಿ ಶುಕ್ರವಾರ ತಡರಾತ್ರಿ ಕಳ್ಳತನ ನಡೆದಿದೆ. ಕನ್ನ ಹಾಕಿ ಅಂಗಡಿ ಪ್ರವೇಶಿಸಿರುವ ಕಳ್ಳರು, ಅಂಗಡಿ ಲಾಕರ್ನಲ್ಲಿ ರು. 50 ಸಾವಿರಕ್ಕೂ ಹೆಚ್ಚು ದೋಚಿ ಪರಾರಿಯಾಗಿದ್ದಾರೆ. ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮೆರಾ ಒಡೆದು ಹಾಕಿದ್ದಾರೆ. ಸ್ಥಳಕ್ಕೆ ಗದಗ ಶಹರ ಕ್ರೈಂ ಪೊಲೀಸ್ ಸಿಬ್ಬಂದಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿ, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
ವಯಸ್ಕರ ಶಿಕ್ಷಣ ಕೇಂದ್ರಕ್ಕೆ ಭೇಟಿ
ಲಕ್ಷ್ಮೇಶ್ವರ: ನಮ್ಮ ದೇಶದಲ್ಲಿ ಸಾಕ್ಷರತಾ ಪ್ರಮಾಣ ಇನ್ನೂ ಹೆಚ್ಚಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ವಯಸ್ಕರಿಗೆ ಶಿಕ್ಷಣ ನೀಡುವ ಮೂಲಕ ಅನಕ್ಷರತೆಯ ಪ್ರಮಾಣ ಕಡಿಮೆ ಮಾಡುವ ಕಾರ್ಯವನ್ನು ಮುಂದುವರೆದ ಕಲಿಕಾ ಕೇಂದ್ರ ಹಾಗೂ ವಯಸ್ಕರ ಕಲಿಕಾ ಕೇಂದ್ರಗಳು ಕಾರ್ಯ ಮಾಡುತ್ತಿವೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ. ಮೋಹನಕುಮಾರ್ ಹೇಳಿದರು. ಶುಕ್ರವಾರ ಸಮೀಪದ ಶಿಗ್ಲಿ ಗ್ರಾಮದ ವಯಸ್ಕರ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಉಮೇಶ ಭಜಂತ್ರಿ, ತಾಲೂಕು ವಯಸ್ಕರ ಸಹಾಯಕ ಆರ್.ಜಿ. ಶೇಳಕೆ, ಕಲಿಕಾ ಕೇಂದ್ರದ ಪ್ರೇರಕ ಎಸ್.ಕೆ. ಕಟ್ಟಿಮನಿ, ಗಾಯತ್ರಿ ನಡುವಿನಮನಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

