ಗದಗ

ನಿತ್ಯ ಕಿರಿಕಿರಿ: ಕೋತಿಗಳ ಸೆರೆ

Published On :

ಮುಂಡರಗಿ:  ಪಟ್ಟಣದ 23 ವಾರ್ಡ್‌ಗಳಲ್ಲಿಯೂ ನಿತ್ಯ ಎಲ್ಲೆಂದರಲ್ಲಿ ಸಾರ್ವಜನಿಕರ ಮನೆಗಳಿಗೆ, ಹಿತ್ತಲಿಗೆ, ತೋಟಗಳಿಗೆ, ಶಾಲೆಗಳಿಗೆ, ತರಕಾರಿ ಮಾರುಕಟ್ಟೆಗೆ ಹೀಗೆ ಎಲ್ಲೆಂದರಲ್ಲಿ ಹಾರಾಡುತ್ತ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ ಉಂಟುಮಾಡುತ್ತಿದ್ದ ಮಂಗಗಳನ್ನು ಹಿಡಿಯಲು ಪುರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.
ಸಾರ್ವಜನಿಕರು ಮಂಗಗಳನ್ನು ಹಿಡಿಯುವಂತೆ ಅನೇಕ ಬಾರಿ ಪುರಸಭೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕಳೆದ 2-3 ದಿನಗಳಿಂದ ಪುರಸಭೆ ಅಧಿಕಾರಿಗಳು ಪಟ್ಟಣದ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿ, ಪಂಜರವನ್ನಿಟ್ಟು ಮಂಗಗಳನ್ನು ಅದರಲ್ಲಿ ಕೂಡಿಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಪಟ್ಟಣದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.    
ಈ ಹಿಂದೆ ಸದಾ ಕಾಡಿನಲ್ಲಿರುತ್ತಿದ್ದ ಮಂಗಗಳು ಇಂದು ಕಾಡಿನಲ್ಲಿ ಆಹಾರದ ಕೊರತೆಯಿಂದಾಗಿ ನಗರದತ್ತ ಮುಖಮಾಡಿವೆ. ಸಾರ್ವಜನಿಕರ ಕೈಯಲ್ಲಿರುವ ಕೈಚೀಲಗಳಿಗೆ ಕೈ ಹಾಕುವುದು, ಹಣ್ಣಿನ ಅಂಗಡಿಗೆ ಹೋಗಿ ಹಣ್ಣು ತೆಗೆದುಕೊಂಡು ಹೋಗುವುದು ಹೀಗೆ ಸಾಕಷ್ಟು ರೀತಿಯಲ್ಲಿ ತೊಂದರೆ ನೀಡುತ್ತಿದ್ದವು. ಕಳೆದ ಎರಡು ದಿನಗಳಿಂದ ಚೊಳಚಗುಡ್ಡದ ಫಕೀರಪ್ಪ ಬಡೆಪ್ಪನವರ ಮತ್ತು ತಂಡ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈಗಾಗಲೇ 40 ರಿಂದ 50 ಕ್ಕೂ ಹೆಚ್ಚು ಮಂಗಗಳು ಬಲೆಯಲ್ಲಿ ಬಿದ್ದಿವೆ. ಸೋಮವಾರವೂ ಮಂಗಗಳನ್ನು ಪಂಜರದಲ್ಲಿ ಹಿಡಿಯುವ ಕಾರ್ಯ ಮುಂದುವರೆದಿತ್ತು.
ಮಂಗಗಳನ್ನು ಮತ್ತೆ ಇಲ್ಲಿಯೇ ಗುಡ್ಡದಲ್ಲಿ ಬಿಟ್ಟು ಬರುವುದರಿಂದ ಅವು ಮರಳಿ ಬರುವ ಸಾಧ್ಯತೆಗಳಿದ್ದು, ಹತ್ತಿರದಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಬಿಟ್ಟು ಬರಬೇಕೆನ್ನುವುದು ಮುಂಡರಗಿ ಸಾರ್ವಜನಿಕರ ಒತ್ತಾಯವಾಗಿದೆ. ಪುರಸಭೆ ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.