ಗುಣಮಟ್ಟದ ಶಿಕ್ಷಣ ಸಿಗಲಿ
ಕನ್ನಡಪ್ರಭ ವಾರ್ತೆ, ಗದಗ, ಆ. 3
ಶಿಕ್ಷಣ ಮಕ್ಕಳ ಹಕ್ಕಾಗಿರುವುದರಿಂದ ಪ್ರತಿಯೊಂದು ಶಾಲೆ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಪ್ರಾಥಮಿಕ ಹಂತದಲ್ಲಿ ಮಕ್ಕಳು ಸ್ಪಷ್ಟವಾಗಿ ಓದುವುದು, ಶುದ್ಧವಾಗಿ ಬರೆಯುವುದು, ಸುಲಭವಾಗಿ ಲೆಕ್ಕಾಚಾರ ಮಾಡಲು ಕಲಿಯಬೇಕು. ಈ ದಿಸೆಯಲ್ಲಿ ಶಿಕ್ಷಕರು ಮಗುವಿನ ಸಾಮರ್ಥ್ಯ ಅರಿತು, ಕಲಿಕೆಯನ್ನು ಅನುಕೂಲಕರವಾಗಿಸಬೇಕು ಎಂದು ಶಿಕ್ಷಣಾಧಿಕಾರಿ ಕೆ.ಡಿ. ಬಡಿಗೇರ ಹೇಳಿದರು.
ತಾಲೂಕಿನ ಚಿಂಚಲಿ ಗ್ರಾಮದ ವಡ್ಡರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಗದಗ ಗ್ರಾಮೀಣ ವಲಯದ ಆಶ್ರಯದಲ್ಲಿ ಶನಿವಾರ ನಡೆದ ಮಗ್ಗಿ ಮಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗದಗ ಗ್ರಾಮೀಣ ವಲಯದ ಶಾಲೆಗಳಲ್ಲಿ ಆಗಸ್ಟ್ ತಿಂಗಳನ್ನು ಮಗ್ಗಿ ಮಾಸವನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಮಕ್ಕಳಲ್ಲಿ ಅದ್ಭುತ ಸಾಮರ್ಥ್ಯ ಅಡಗಿದೆ. ಶಿಕ್ಷಕರು ಮಕ್ಕಳ ಸಾಮರ್ಥ್ಯ ಅರಿತು ಸೂಕ್ತ ಮಾರ್ಗದರ್ಶನ ನೀಡಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಲೆಕ್ಕಗಳನ್ನು ಸುಲಭವಾಗಿ ಮಾಡಲು ಮಗ್ಗಿಗಳು ಸಹಾಯಕವಾಗಿರುವುದರಿಂದ ಒಂದು ತಿಂಗಳ ಅವಧಿಯಲ್ಲಿ ಎಲ್ಲ ಮಕ್ಕಳಿಗೆ 30ರ ವರೆಗೆ ಹೇಳುವಂತೆ ಬಿಡುವಿನ ವೇಳೆಯಲ್ಲಿ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದರು.
ಇಸಿಒ ವಿವೇಕಾನಂದಗೌಡ ಪಾಟೀಲ್ ಮಗ್ಗಿ ಮಾಸದ ಉದ್ದೇಶಗಳನ್ನು ಮತ್ತು ಕಾರ್ಯರೂಪಕ್ಕೆ ತರುವಲ್ಲಿ ಶಿಕ್ಷಕರು ಮತ್ತು ಮಕ್ಕಳು ಮಾಡಬೇಕಾದ ಕಾರ್ಯಗಳನ್ನು ವಿವರಿಸಿದರು. ಜಗತ್ತಿನ ಎಲ್ಲ ಚರಾ-ಚರ ವ್ಯವಹಾರಕ್ಕೂ ಲೆಕ್ಕಾಚಾರ ಬೇಕು. ಲೆಕ್ಕವಿಲ್ಲದ ಬದುಕು ಬಲು ದುಃಖಕರ. ಗುಣಾಕಾರದ ಪರಿಕಲ್ಪನೆಗಳನ್ನು ಸುಲಭವಾಗಿ ಮಕ್ಕಳು ಅರ್ಥೈಸಿಕೊಳ್ಳಲು ಮಗ್ಗಿ ಕಲಿಕೆ ಅನಿವಾರ್ಯ ಎಂದರು. ವಿಶ್ವನಾಥ ಮುಂದಿನಮನಿ, ಜ್ಯೋತಿ ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು. ವೀಣಾ ಎಸ್.ಟಿ., ವಿ.ಎಂ. ಮೊರಬ, ಎಂ.ಎಸ್. ಪಾಟೀಲ, ಬಿ.ಎಸ್. ಶೇಗಡಿ, ಆರ್.ಬಿ. ಕುಲಕರ್ಣಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

