ಗದಗ

ಬಾವುಟಕ್ಕೆ ಬೆಂಕಿ: ಮಹಾ ಶವಯಾತ್ರೆ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 2
ಬೆಳಗಾವಿ ಜಿಲ್ಲೆಯ ಶಿನೋಳಿ ಗ್ರಾಮದಲ್ಲಿ ಶುಕ್ರವಾರ ಮಹಾರಾಷ್ಟ್ರದ ಶಿವಸೇನೆ ಮುಖಂಡ ದಿವಾಕರ ಹಾಗೂ ಅವರ ಸಂಗಡಿಗರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದನ್ನು ಖಂಡಿಸಿ ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ಜನಹಿತ ವೇದಿಕೆ ಕಾರ್ಯಕರ್ತರು ಎಂಇಎಸ್ ಪ್ರತಿಕೃತಿ ಹಾಗೂ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಕರ್ನಾಟಕ ಯುವಶಕ್ತಿ ವೇದಿಕೆಯ ಕಾರ್ಯಕರ್ತರು ಎಂಇಎಸ್ ಶವಯಾತ್ರೆ ನಡೆಸಿದರು. ಈ ಮಧ್ಯೆ  ಜಿಲ್ಲಾ ವಕೀಲರ ಸಂಘದ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.
ದಿನೇ ದಿನೆ ಮಹಾರಾಷ್ಟ್ರದ ಶಿವಸೇನಾ ಮತ್ತು ಎಂ.ಇ.ಎಸ್. ಕಾರ್ಯಕರ್ತರ ಪುಂಡಾಟಿಕೆ ಹೆಚ್ಚುತ್ತಿದೆ. ಇಂತಹ ಪುಂಡರಿಗೆ ಮಹಾ ಸರ್ಕಾರ ಲಕ್ಷಾಂತರ ರು. ಕೊಡುವುದಾಗಿ ಹೇಳಿಕೆ ನೀಡಿ ಗೂಂಡಾಗಳನ್ನು ಕರ್ನಾಟಕದ ಮೇಲೆ ಎತ್ತಿ ನಿಲ್ಲಿಸಿದೆ. ಶುಕ್ರವಾರ ಮಹಾರಾಷ್ಟ್ರದ ಪುಂಡರು ಕನ್ನಡಾಂಬೆಯ ಶವಯಾತ್ರೆ ಮಾಡಿ ಧ್ವಜವನ್ನು ಸುಟ್ಟುಹಾಕಿರುವುದು ಖಂಡನಾರ್ಹ.
ಕರ್ನಾಟಕ ಪೊಲೀಸರ ಮೇಲೆ ಹಾಗೂ ಕನ್ನಡಿಗರ ಮೇಲೆ ಹಲ್ಲೆ ಮಾಡಿ ಕನ್ನಡದ ಜನರನ್ನು ಕೆರಳಿಸುವಂತೆ ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಯನ್ನು ಕೂಡಿಹಾಕಿ ಹಲ್ಲೆ ಮಾಡಿದ್ದಾರೆ.
ಈ ಕೂಡಲೇ ರಾಜ್ಯ ಸರ್ಕಾರ  ಎಂ.ಇ.ಎಸ್. ಹಾಗೂ ಶಿವಸೇನೆಯ ಕಾರ್ಯಕರ್ತರನ್ನು ಬಂಧಿಸಿ, ಈ ಎರಡು ಸಂಘಟನೆಗಳನ್ನು ನಿಷೇಧಿಸಬೇಕು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ, ಉಪಾಧ್ಯಕ್ಷ ಕೆ.ಎಂ. ಮಾನ್ವಿ, ಕಾರ್ಯದರ್ಶಿ ಕೆ.ಎಲ್. ಕರಿಗೌಡ್ರ, ಎಂ.ಎ. ಸಂಗನಾಳ, ಬಿ.ಎಚ್. ಮಾಡಲಗೇರಿ, ಕರ್ನಾಟಕ ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಮುತ್ತಣ್ಣ ಅನವಾಲದ, ರವಿ ಹೊಸಳ್ಳಿ, ಶಿವಕುಮಾರ ಹೊಸಳ್ಳಿ, ಮಹೇಶ ಹೊಸಳ್ಳಿ, ರುಸ್ತುಮ್ ಚಳಗೇರಿ, ಶಿವಕುಮಾರ ಚವಡಿ, ಗಿರಿಧರ ನರಸಾಪುರ, ವಸಂತ ಬಳ್ಳಾರಿ, ಆನಂದ ಸಿಂಧೆ, ಹನುಮಂತ ದಾಸರ, ಹೀರಾ, ಅನಿಲ ಮೇಟಿ, ಚಂದ್ರು ಹೊರಪೇಟಿ, ರವಿ ಹಡಪದ, ನವೀನ ಕಮತರ, ಸಾಗರ ಅಂಗಡಿ.
ಕರ್ನಾಟಕ ಜನಹಿತ ವೇದಿಕೆ ಅಧ್ಯಕ್ಷ ಎಚ್.ಎಸ್. ಸೋಂಪುರ, ಜಿಲ್ಲಾಧ್ಯಕ್ಷ ವೈ.ಎಚ್. ನದಾಫ, ಉಪಾಧ್ಯಕ್ಷ ರಮೇಶ ಅಬ್ಬಿಗೇರಿ, ಜ್ಞಾನೇಶ ಖೋಕಲೆ, ಭದ್ರೇಶ ಕುಸ್ಲಾಪುರ, ಮಲ್ಲೇಶ ನಡುವಿನಮನಿ, ನಾಗೇಶ ಅಂಗಡಿ, ಮಾರುತಿ ಈಳಿಗೇರ, ನಜೀರ್ ಹದ್ಲಿ, ಮಹಾಂತೇಶ ಬೆನಕನಳ್ಳಿ, ಮರಿಯಪ್ಪ ವಡ್ಡರ, ಅಶೋಕ ಹಾದಿಮನಿ, ಪರಶುರಾಮ ಭಜಂತ್ರಿ, ಸಿಕಂದರ ಮುಲ್ಲಾ, ಸಿದ್ದು ಅಂದಾನಗೌಡ್ರ, ಮಹೇಶ ಮಡಿವಾಳರ, ಸಾಹಿಲ್ ನವಲಗುಂದ, ಇಲಿಯಾಸ ನವಲಗುಂದ, ಅಸ್ಲಂ ನವಲಗುಂದ, ದತ್ತು ಬಾಕಳೆ, ಗೌಸುಸಾಬ ನದಾಫ, ಮಲ್ಲೇಶ ಚವಡಿ, ಸಿದ್ದು ವಡವಿ, ನಾಗರಾಜ ಹನುಮಂತಗೌಡ್ರ, ಹಾಲಪ್ಪ ಅರಹುಣಸಿ, ಹುಚ್ಚಪ್ಪ ಭಜಂತ್ರಿ, ತುಳಸಪ್ಪ ಗದಗ, ರಾಜು ಪುರ್ತಗೇರಿ, ಅಬ್ಬಾಸ ಹಳೆಮಸೂತಿ, ಶಂಕ್ರಪ್ಪ ಭಜಂತ್ರಿ, ಶ್ರೀಶೈಲಪ್ಪ ಬೆಂತೂರ, ಈ.ಕೆ. ಹುಣಸಿಮರದ, ವಿ.ವಿ. ಮೂಗನೂರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.