ಯುವಕರಿಂದಗೆ ಅರ್ಲು ಎರಚಾಟ
ಕನ್ನಡಪ್ರಭ ವಾರ್ತೆ, ನರಗುಂದ, ಆ. 1
ಪ್ರತಿವರ್ಷ ನಾಗರ ಪಂಚಮಿ ಹಬ್ಬ ಬಂದಿತೆಂದರೆ ಪಟ್ಟಣ, ತಾಲೂಕಿನ ಯುವಕರಿಗೆ ಬಲು ಖುಷಿ. ಅವರು ಯರಿ ಮಣ್ಣಿನಿಂದ ನಿರ್ಮಿಸಿರುವ ನಾಗದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅದನ್ನು ಪರಸ್ಪರ ಎರಚುವ ಮೂಲಕ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ.
ಈ ಭಾಗದಲ್ಲಿ ನಾಗರ ಪಂಚಮಿ ಹಬ್ಬದ ದಿನ ಮಹಿಳೆಯರು, ಪುರುಷರು ಹಬ್ಬವನ್ನು ನಾಲ್ಕು ದಿನ ಆಚರಿಸುವರು. ನಾಗರಪಂಚಮಿ ಅಮಾವಾಸ್ಯೆ 5 ದಿನ ಬಳಿಕ ರೊಟ್ಟಿ ಪಂಚಮಿ, ನಾಗ ಮೂರ್ತಿಗಳಿಗೆ ಹಾಲೆರೆಯುವಿಕೆ, ಆನಂತರ ದಿವಸ ಕಪ್ಪು ಮಣ್ಣಿನ ಜಮೀನನಿಂದ ಎರಡು ದಿನ ಮೊದಲ ಮಣ್ಣು ತಂದು ಅದನ್ನು ನೀರಲ್ಲಿ ನೆನೆಸಿ ಹುತ್ತಾ ಮುರಿಯವ ದಿವಸ 5 ಅಡಿ ಎತ್ತರದ ನಾಗಸ್ವಾಮಿ ದೇವರ ಮೂರ್ತಿ ಮಾಡುತ್ತಾರೆ. ಇದು ಪಟ್ಟಣದ ಹಲವು ಗಲ್ಲಿಗಳಲ್ಲಿ ನಡೆಯುತ್ತದೆ. ಇದೇ ಮೂರ್ತಿಗೆ ಮಹಿಳೆಯರು ಹಾಲು ಹಾಕುತ್ತಾರೆ.
ಇತಿಹಾಸ: ಈ ಭಾಗದಲ್ಲಿ ಇಂಥ ಪದ್ಧತಿ ಗುರು-ಹಿರಿಯರು ಅಭಿಪ್ರಾಯದ ಪ್ರಕಾರ ಸುಮಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಯರಿ ಮಣ್ಣಿನಲ್ಲಿ ಸಾಕಷ್ಟು ವೈದ್ಯಕೀಯ ಗುಣಗಳಿದ್ದು, ಮಣ್ಣಿನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಚರ್ಮ ರೋಗಗಳು ಬರಲ್ಲ. ಅದಕ್ಕಾಗಿ ಈ ಭಾಗದಲ್ಲಿ ಪ್ರತಿ ವರ್ಷ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಉತ್ಸಾಹದಿಂದ ಪಾಲ್ಗೊಳ್ಳುವರು: ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಸಾರ್ವಜನಿಕರು ನಾಗಸ್ವಾಮಿ ದೇವರ ಮೂರ್ತಿ ದರ್ಶನ ಪಡೆದ ಮೇಲೆ ಯರಿ ಮಣ್ಣಿನ ಮುದ್ದೆಯನ್ನು ತೆಗೆದುಕೊಂಡು ಯುವಕರು, ಪುರುಷರು ಹರ್ಷದಿಂದ ಕೈಗೆ ತೆಗೆದುಕೊಂಡು ಒಬ್ಬರಿಗೊಬ್ಬರು ಎರಚಿಕೊಂಡು ಸಂತೋಷಪಡುತ್ತಾರೆ. ತಮ್ಮ ತಮ್ಮಲ್ಲಿ ಅರ್ಲು ಎರಚಿದ ಬಳಿಕ ಎಲ್ಲ ಯುವಕರು ಒಟ್ಟಗೆ ಸೇರಿ ಹಬ್ಬದ ಖುರ್ಷಿಯನ್ನು ಹಂಚಿಕೊಳ್ಳುವುದು ಇನ್ನೊಂದು ವಿಶೇಷ.
ಇದೆಲ್ಲ ಮುಗಿದ ಆನಂತರ ಜಳಗ ಮಾಡಿದ ಬಳಿಕ ನವಲಗುಂದ ತಾಲೂಕಿನ ಅಮರಗೋಳದ ಗ್ರಾಮದ ಸುಕ್ಷೇತ್ರ ನಾಗಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವರು.
ಹುತ್ತ ನಿರ್ಮಿಸಿ ಮೆಚ್ಚುಗೆ ಗಳಿಸಿದ ಯುವಕರು
ರೋಣ: ತಾಲೂಕಿನ ಅರಹುಣಸಿ ಗ್ರಾಮದ ಡಾ ಬಿ.ಆರ್. ಅಂಬೇಡ್ಕರ್ ಯುವಕ ಮಂಡಳ ಸದಸ್ಯರು ದಲಿತ ಕಾಲನಿಯ ದುರ್ಗಾದೇವಿ ದೇವಸ್ಥಾನದ ಎದುರಿಗೆ ನಾಗರ ಪಂಚಮಿ ಪ್ರಯುಕ್ತ ಶುಕ್ರವಾರ ಬೃಹತ್ತಾದ ಹುತ್ತ ನಿರ್ಮಿಸಿ, ಅಭಿಷೇಕ ನೆರವೇರಿಸಿದರು. ಇದರಲ್ಲಿ ಹಾವುಗಳ ಚಿತ್ರ ಬಿಡಿಸಲಾಗಿದೆ. ದೊಡ್ಡ ಹೆಡೆಯ ಬಳಿ ಹಾಲು ಸುರಿದರೆ, ಅದು ಬಾಲದ ಬಳಿ ಬರುತ್ತಿತ್ತು. ಇದನ್ನು ಜನರು ಪ್ರಸಾದವೆಂದು ಸ್ವೀಕರಿಸಿದರು. ಹುತ್ತ ನಿರ್ಮಾಣದಲಿ ದೇವಪ್ಪ ಚಲವಾದಿ, ಆನಂದ ಚಲವಾದಿ, ಮಂಜುನಾಥ ಚಲವಾದಿ, ಮನೋಹರ ಚಲವಾದಿ, ಭೀಮಪ್ಪ ಚಲವಾದಿ, ಹನಮಂತಪ್ಪ ಚಲವಾದಿ, ವಿರೂಪಾಕ್ಷ ಚಲವಾದಿ, ರಾಜು ಚಲವಾದಿ, ಮಲ್ಲಪ್ಪ ಚಲವಾದಿ, ರಮೇಶ ಚಲವಾದಿ, ಪ್ರಭು ಗೊಂದಿ, ಶಿವಾಜಿ ಚಲವಾದಿ, ಮುದಕಪ್ಪ ಚಲವಾದಿ, ನಿಂಗಬಸಪ್ಪ ಚಲವಾದಿ ಶ್ರಮಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
- ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

