ಶಿರಹಟ್ಟಿ: ಸಂಭ್ರಮದ ಜಾತ್ರೆ
ಶಿರಹಟ್ಟಿ: ಪಟ್ಟಣದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿಯ 3 ದಿನಗಳ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಆರಂಭಗೊಂಡಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯ ಮೂರ್ತಿಯನ್ನು ಪಟ್ಟಣದಾದ್ಯಂತ ಸಕಲ ವಾದ್ಯ ವೈಭವಗಳೊಂದಿಗೆ ಸಾವಿರಾರು ಭಕ್ತರ ಉಧೋ ಉಧೋ ಎಂಬ ಘೋಷಣೆಯೊಂದಿಗೆ ಸಂಚರಿಸಿತು.
ಇತಿಹಾಸ ಪ್ರಸಿದ್ಧ ಫಕೀರೇಶ್ವರ ಮಠದ ಖ್ಯಾತಿಯಂತೆ ಮತ್ತೊಮ್ಮೆ ತಾಯಿ ದ್ಯಾಮವನ ಮೂರ್ತಿ ಮೆರವಣಿಗೆಯಲ್ಲಿ ಸಾಗುತ್ತಿದ್ದಂತೆ ಜಾತಿ, ಮತ, ಪಂಥಗಳೆನ್ನದೆ ಪ್ರತಿಯೊಬ್ಬರು ಉಡಿತುಂಬಿ ಕೃತಾರ್ಥರಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮುಂಜಾನೆ 6 ಗಂಟೆಗೆ ದೇವಿ ಮೂರ್ತಿ ಫಕೀರೇಶ್ವರ ಮಠಕ್ಕೆ ತೆರಳಿತು. ಜ. ಫಕೀರ ಸಿದ್ದರಾಮ ಶ್ರೀಗಳು ಪೂಜೆ ಸಲ್ಲಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮಠದಿಂದ ಸಂಪ್ರದಾಯದಂತೆ ದೇವಿಯು ನೇರವಾಗಿ ಗೌಡರ ಮನೆಗೆ ತೆರಳಿ ನಂತರ ಕುಲಕರ್ಣಿ (ಶಾನಭೋಗರ) ಮನೆಗೆ ತೆರಳಿತು. ಕೆಲ ಸಮಯ ದೇವಿಯ ಮೆರವಣಿಗೆ ನಿಂತಾಗ ನೂರಾರು ಮಹಿಳೆಯರು ದೇವರಿಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು. ಗ್ರಾಮದೇವಿ ದ್ಯಾಮವ್ವನ ದರ್ಶನಕ್ಕೆ ಉರಿ ಬಿಸಿಲು ಲೆಕ್ಕಿಸದೇ ಉತ್ಸಾಹದಿಂದ ತಂಡೋಪತಂಡವಾಗಿ ಜನ ಆಗಮಿಸುತ್ತಿರುವುದು ಎಲ್ಲೆಡೆ ಕಾಣುತ್ತಿತ್ತು. ಪಟ್ಟಣದ ಪ್ರತಿಯೊಂದು ಬೀದಿಗಳಲ್ಲಿಯೂ ತಳಿರು ತೋರಣಗಳು ಕಂಗೊಳಿಸುತ್ತಿದ್ದವು. ಜಾತಿ ಯಾವುದಾದರೇನು ರೀತಿ, ನೀತಿ ಮುಖ್ಯವಾಗಿದ್ದು, ಸಂಪ್ರದಾಯ ಶಿಷ್ಟಾಚಾರಗಳಿಂದ ಮನುಷ್ಯ ವಿವೇಕಿಯಾಗಬೇಕು. ಶುಕ್ರವಾರ ಪಟ್ಟಣದಲ್ಲಿ 3 ದಿನಗಳ ವರೆಗೆ ಜರುಗಲಿರುವ ಗ್ರಾಮದೇವಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಜನಾಂಗದ ಜನರೇ ಇದಕ್ಕೆ ಸಾಕ್ಷಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

