ಗದಗ

ಉದ್ಯೋಗಿನಿ ಯೋಜನೆಯಿಂದ ಸ್ವಾವಲಂಬನೆ

Published On :

ಗದಗ: ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸಿದ ಉದ್ಯೋಗಿನಿ ಯೋಜನೆ ಮಹಿಳೆಯರ ಸ್ವಾವಲಂಬನೆಗೆ ಸಹಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಎನ್. ಪರಮೇಶ್ವರಪ್ಪ ಕರೆ ನೀಡಿದರು.
ಹುಲಕೋಟಿಯ ಗಿಟ್‌ಸರ್ಡ್ ಸಂಸ್ಥೆಯಲ್ಲಿ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯೋಗಿನಿ ಯೋಜನೆ ಫಲಾನುಭವಿಗಳಿಗಾಗಿ ಏರ್ಪಡಿಸಿದ್ದ 3 ದಿನಗಳ ಉದ್ಯಮಶೀಲತಾ ತರಬೇತಿ ಉದ್ಘಾಟಿಸಿಗ ಅವರು, ಮಹಿಳೆ ಮನೆಗೆಲಸಕ್ಕೆ ಸೀಮಿತಗೊಳ್ಳದೆ ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು ಎಂದರು. ಕೆವಿಕೆ ಯೋಜನಾ ನಿರ್ದೇಶಕ ಎಚ್.ಆರ್. ಜಗದೀಶ ತರಬೇತಿ ಉದ್ದೇಶ ವಿವರಿಸಿದರು. ಅತಿಥಿಗಳಾಗಿ ಜಿಲ್ಲಾ ಸಂಯೋಜಕ ಡಿ.ವಿ. ಬಡಿಗೇರ ಪಾಲ್ಗೊಂಡಿದ್ದರು. ಗಿಟ್‌ಸರ್ಡ್ ಉಪನಿರ್ದೇಶಕ ಸುರೇಶ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.