ಗದಗ

ಮುಂಡರಗಿ: ಇಂದಿನಿಂದ ವಾಲಿಬಾಲ್ ಪಂದ್ಯಾವಳಿ

Published On :

ಮುಂಡರಗಿ: ಮೃಡಗಿರಿ ಸ್ಪೋರ್ಟ್ಸ್ ಕ್ಲಬ್ ಮುಂಡರಗಿ ಇವರ ಆಶ್ರಯದಲ್ಲಿ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 16 ಹಾಗೂ 17ರಂದು ಮುಂಡರಗಿ ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾವಳಿ ಜರುಗಲಿದೆ. ಫೆ. 16ರ ಬೆಳಗ್ಗೆ 10.30ಕ್ಕೆ ಪಂದ್ಯಾವಳಿ ಉದ್ಘಾಟನೆಯಾಗಲಿದ್ದು, ಜ.ಡಾ. ಅನ್ನದಾನೀಶ್ವರ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ಬಿಎಸ್‌ಆರ್ ಪಕ್ಷದ ಯುವ ಮುಖಂಡ ಮಹಾಂತೇಶ ಹಳ್ಳೆಪ್ಪನವರ ಹಾಗೂ ಕುಮಾರಸ್ವಾಮಿ ಹಿರೇಮಠ ಉದ್ಘಾಟಿಸುವರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಕೃಷ್ಣ ದೊಡ್ಡಮನಿ  ಅಧ್ಯಕ್ಷತೆ ವಹಿಸಿವರು. ಹೇಮಂತಗೌಡ ಪಾಟೀಲ, ಆನಂದಗೌಡ ಪಾಟೀಲ, ಡಿ.ಡಿ. ಮೋರನಾಳ, ಎಸ್.ಡಿ. ಮಕಾಂದಾರ, ದುದ್ದುಸಾಬ್ ಕಾತರಕಿ, ಅನ್ವರಬಾಷಾ ಹಣಗಿ, ಮೋದಿನಸಾಬ್ ಡಂಬಳ, ಕರೀಂಸಾಬ್ ಮುಲ್ಲಾ, ವಿ.ಎಸ್. ಘಟ್ಟಿ, ಜಿ.ಬಿ. ಅಮಾತಿ, ಆಗಮಿಸಲಿದ್ದಾರೆ. ಫೆ 17ರ ಸಂಜೆ 4 ಗಂಟೆಗೆ ಬಹುಮಾನ ವಿತರಣಾ ಸಮಾರಂಭ ಜರುಗಲಿದೆ. ಜ.ಡಾ. ಅನ್ನದಾನೀಶ್ವರ ಶ್ರೀ  ಸಾನ್ನಿಧ್ಯ ವಹಿಸಲಿದ್ದಾರೆ. ಹೇಮಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕರಬಸಪ್ಪ ಹಂಚಿನಾಳ, ಎ.ಟಿ. ನರೇಗಲ್. ಸುನೀಲ್ ಸವದಿ, ವೈ.ಎನ್. ಗೌಡರ, ಧೃವಕುಮಾರ ಹೊಸಮನಿ, ವಿ.ಎಸ್. ಪಾಟೀಲ, ಆರ್.ಎಂ. ಪಾಟೀಲ, ನಾರಾಯಣಪ್ಪ ಇಲ್ಲೂರ, ಶೇಖವ್ವ ಸಂಗಟಿ, ಶಿವನಗೌಡ ಗೌಡ್ರ, ಎಸ್.ಎಸ್. ಪದಕಿ, ಡಾ. ನಿಂಗು ಸೊಲಗಿ,  ಪ್ರೊ. ಎ.ವೈ. ನವಲಗುಂದ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.