ಪುರಸಭೆಯಿಂದ ಅಭಿವೃದ್ಧಿ ಕಾರ್ಯ: ಸಚಿವ ಬಂಡಿ
ಗಜೇಂದ್ರಗಡ: ಪಟ್ಟಣದ ಅಭಿವೃದ್ಧಿ ಹೆಚ್ಚಿಸಲು ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಪಾತ್ರ ಪ್ರಮುಖ. ಈ ನಿಟ್ಟಿನಲ್ಲಿ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿರುವ ಜನಪರ ಅಭಿವೃದ್ದಿ ಕಾರ್ಯಗಳು ಸಾಕ್ಷಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಇತ್ತೀಚೆಗೆ ಸ್ಥಳೀಯ ಪುರಸಭಾ ಭವನದಲ್ಲಿ ನಡೆದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಸದಸ್ಯರ ಬೀಳ್ಕೊಡುವ ಸಮಾರಂಭದಲ್ಲಿ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು. ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಗಜೇಂದ್ರಗಡ ಪುರಸಭೆಗೆ ಕಳೆದ 5 ವರ್ಷದ ಅವಧಿಯಲ್ಲಿ ಪುರಸಭೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಯೋಜನೆ ಅಡಿ ರು. 20 ಕೋಟಿಗೂ ಅಧಿಕ ಅನುದಾನ ನೀಡುವ ಮೂಲಕ ಪಟ್ಟಣದಲ್ಲಿ ಶುದ್ಧ ಕುಡಿವ ನೀರಿನ ಘಟಕ, ಸಿಮೆಂಟ ರಸ್ತೆ, ಸಾರ್ವಜನಿಕ ಶೌಚಾಲಯ ಸೇರಿದಂತೆ ಹತ್ತು ಹಲವು ಯೋಜನೆ ಕಾರ್ಯಗತಗೊಂಡು ಜನತೆಯ ಸೇವೆಗೆ ಸಮರ್ಪಣೆಯಾಗಿದ್ದು ತೃಪ್ತಿ ತಂದಿದೆ ಎಂದರು.
ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ, ಉಪಾಧ್ಯಕ್ಷ ಭಾಸ್ಕರ ರಾಯಬಾಗಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ ಸಚಿವ ಕಳಕಪ್ಪ ಬಂಡಿಯವರ ಸಹಕಾರ ಅನನ್ಯವಾದದ್ದು ಎಂದರು. ಚಂದ್ರಶೇಖರ ಚಳಗೇರಿ, ಅಂಬರೇಶ ಅರಳಿ ಮಾತನಾಡಿದರು. ಪುರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು. ಜತೆಗೆ ಗಜೇಂದ್ರಗಡ ನೂತನ ತಾಲೂಕಾಗಲು ಶ್ರಮಿಸಿದ ಸಚಿವ ಕಳಕಪ್ಪ ಬಂಡಿ ಅವರನ್ನು ಗಜೇಂದ್ರಗಡ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.
ಪುರಸಭಾ ಅಧ್ಯಕ್ಷೆ ದೇವಕ್ಕ ಬೆಳವಣಕಿ, ಸದಸ್ಯ ಎ.ಬಿ. ಲೋದಿ, ಪ್ರಭು ಚವಡಿ, ಪ್ರಕಾಶ ಜಾಲಿಹಾಳ, ಬಸವರಾಜ ಬಂಕದ, ರಾಜೇಸಾಬ ಡಾಲಾಯತ್, ಯಮನೂಸಾಬ ಹೊನ್ನಳ್ಳಿ, ದುರುಗಪ್ಪ ದಾರೋತ್ತರ, ರೇಣಪ್ಪ ಇಂಗಳೆ, ಡಿ.ಎಚ್. ಬಳೂಟಗಿ, ಪುಷ್ಪಾವತಿ ಭಾಂಡಗೆ, ಸಾವಿತ್ರಿಬಾಯಿ ನಿಂಬಾಳ್ಕರ, ಗಿರಿಜಾಬಾಯಿ ಗುಗಲೋತ್ತರ, ಸುವರ್ಣಮ್ಮ ಪಾಟೀಲ ಸೇರಿದಂತೆ ಪುರಸಭೆ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು. ಕೆ.ಎಚ್. ಬಳಗಾನೂರ ಸ್ವಾಗತಿಸಿದರು. ಕೆ.ಓ. ಮುಲ್ಲಾ ನಿರೂಪಿಸಿದರು. ಎಂ.ಬಿ. ನಿಡಶೇಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

