ಗದಗ

ನಾಟಕಗಳಿಂದ ಸಮಾಜದಲ್ಲಿ ಸೌಹಾರ್ದ: ಹಾವಿನಾಳ

Published On :

ಗಜೇಂದ್ರಗಡ: ನಾಟಕ ಕಲೆಗಳು ನೈಜ ಜೀವನದ ಕೈಗನ್ನಡಿಯಾಗಿ ನೆಮ್ಮದಿಯ ಬದುಕಿನ ರಹದಾರಿಯಾಗುವ ಜತೆಗೆ ಸಮಾಜದಲ್ಲಿ ಸೌಹಾರ್ದ ವೃದ್ಧಿಸಲು ಸಹಕಾರಿ. ಇಂತಹ ರಸವತ್ತಾದ ರಂಗಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ಸಮುದಾಯದ ಮೇಲಿದೆ ಎಂದು ಜೆಡಿಎಸ್ ಮುಖಂಡ ಹೇಮಗಿರೀಶ ಹಾವಿನಾಳ ಅಭಿಪ್ರಾಯ ಪಟ್ಟರು.
ಸಮೀಪದ ನಾಗರಸಕೊಪ್ಪ ಗ್ರಾಮದಲ್ಲಿ ಹುಲಿಗೆಮ್ಮದೇವಿ ಜಾತ್ರೆ ಪ್ರಯುಕ್ತ 'ಅರವತ್ತು ಹಳ್ಳಿಯ ಅರಸ' ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಅವರು, ಆಧುನಿಕತೆಗೆ ಮಾರು ಹೋಗಿರುವ ಜನತೆ ಕೇವಲ ಚಲನಚಿತ್ರ, ಧಾರವಾಹಿಗಳತ್ತ ಆಕರ್ಷಿತರಾಗಿ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳುತ್ತಿರುವುದು ಶೋಚನೀಯ. ಮನಸ್ಸಿಗೆ ಮುದ ನೀಡುವ ದೇಸೀ ಕಲೆಗಳನ್ನು ಆರಾಧಿಸಲು ಮುಂದಾಗಬೇಕು. ಇಂತಹ ರಂಗ ಕಲೆಗಳನ್ನು ಗ್ರಾಮೀಣ ಯುವಕರು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದರು.
ಕೆಜೆಪಿ ಮುಖಂಡ ಬಿ.ಎಂ. ಸಜ್ಜನರ ಮಾತನಾಡಿದರು. ಪಿ.ಕೆ. ಜೋಶಿ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಹನುಮಂತ ಕಮ್ಮಾರ, ಚಂಬಣ್ಣ ಚವಡಿ, ಬಸವರಾಜ ಮೂಲಿಮನಿ, ಶರಣಪ್ಪ ಡೊಣ್ಣೆಗುಡ್ಡ, ಮುತ್ತಯ್ಯ ಕಾರಡಗಿಮಠ, ಶಾಂತಪ್ಪ ಸೊಬರದ, ರಮೇಶ ಮಡಿವಾಳರ, ವೀರಣ್ಣ ಅಂಗಡಿ, ಕೆ.ಕೆ. ಭಾಗವಾನ, ಗುರಲಿಂಗಯ್ಯಜ್ಜ ಹಿರೇಮಠ, ಹುಸೇನಸಾಬ ಭಾಗವಾನ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.