ಶಿಕ್ಷಕರ ಸಹಪಠ್ಯ ಸ್ಪರ್ಧೆ: ದ್ವಿತೀಯ ಸ್ಥಾನ
ಗದಗ: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರು ಚಿತ್ರದುರ್ಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಗದುಗಿನ ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಐ.ಎಸ್. ಗೌಡರ ತಯಾರಿಸಿದ ಮಾದರಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಸ್ಥಳದಲ್ಲೇ ಪಾಠೋಪಕರಣ ತಯಾರಿಕೆಯಲ್ಲಿ ಡಿಎನ್ಎ ಅಣು ಹಾಗೂ ಮಾನವನ ಶ್ವಾಸಕ್ರಿಯೆ ಮತ್ತು ದುಷ್ಪರಿಣಾಮದ ಮಾದರಿ ಬಹು ಮೆಚ್ಚುಗೆಯನ್ನು ಪಡೆದುಕೊಂಡು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಅಣುವಂಶೀಯ ಲಕ್ಷಣಗಳನ್ನು ತಿಳಿಸುವ ಡಿಎನ್ಎ ಹಾಗೂ ಧೂಮ್ರಪಾನ ಮಾನವನ ಶ್ವಾಸಕೋಶ, ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಿಳಿಸುವ ಈ ಮಾದರಿ ನಿರ್ಣಾಯಕರ ಮತ್ತು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಯಿತು.
ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರಿನ ಹಿರಿಯ ಅಧಿಕಾರಿ ಸಂಧ್ಯಾ ಪಾಟೀಲ, ಚಿತ್ರದುರ್ಗದ ಡಿಡಿಪಿಐ ಮಂಜುನಾಥ, ಡಯಟ್ ಪ್ರಾಚಾರ್ಯ ಮಲ್ಲಣ್ಣ ಅವರು ಶಿಕ್ಷಕ ಐ.ಎಸ್. ಗೌಡರ ಅವರಿಗೆ ಪ್ರಶಸ್ತಿಯೊಂದಿಗೆ ಫಲಕ ಹಾಗೂ ಬಹುಮಾನದ ಚೆಕ್ ವಿತರಿಸಿ ಅಭಿನಂದಿಸಿದರು. ರಾಜ್ಯಮಟ್ಟದಲ್ಲಿ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಶಿಕ್ಷಕ ಗೌಡರ ಅವರಿಗೆ ಗದಗ ಡಿಡಿಪಿಐ ರಾಜೀವ ನಾಯಕ, ಗದಗ ಶಹರ ಬಿಇಓ ಐ.ಬಿ. ಬೆನಕೊಪ್ಪ, ಸಾಶಿಇ ಶಿಕ್ಷಣಾಧಿಕಾರಿ ಸಿ.ವಿ. ಮ್ಯಾಗೇರಿ, ಶಿಕ್ಷಣ ಸಂಯೋಜಕ ಸಿ.ಬಿ. ಕಾಳೆ, ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ವಿ.ಎಲ್. ಪಾಟೀಲ, ಆಡಳಿತ ಮಂಡಳಿಯ ಸದಸ್ಯರು, ಶಾಲಾ ಮುಖ್ಯಾಧ್ಯಾಪಕಿ ಎ.ಸಿ. ಮೇತ್ರಾಣಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

