ಇಂದು ಶಿವಾನುಭವ
ಮುಂಡರಗಿ: ಮುಂಡರಗಿ ಜಗದ್ಗುರು ತೋಂಟದಾರ್ಯ ಮಠದಲ್ಲಿ ಫೆಬ್ರವರಿ 6ರಂದು ಸಂಜೆ 7.30ಕ್ಕೆ 64ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮ ಜರುಗಲಿದೆ. ಜ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಗದಗ ತೋಂಟದಾರ್ಯ ಮಠದ ಬಸವರಾಜ ವೆಂಕಟಾಪುರ ಶರಣರು ಅತಿಥಿ ಉಪನ್ಯಾಸ ಮಾಡುವರು. ಈ ಸಂದರ್ಭದಲ್ಲಿ 2012-13ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದಿರುವ ತಾಲೂಕು ತೋಟಗಾರಿಕಾ ಇಲಾಖೆ ನಿರ್ದೇಶಕ ಸುರೇಶ ಕುಂಬಾರ ಹಾಗೂ 80 ವಸಂತಗಳನ್ನು ಪೂರೈಸಿದ ಈಶ್ವರಪ್ಪ ಉಪ್ಪಿನಬೆಟಗೇರಿಯವರನ್ನು ಸನ್ಮಾನಿಸಲಾಗುವುದು ಎಂದು ತೋಂಟದಾರ್ಯ ಮಠದ ಪ್ರಕಟಣೆ ತಿಳಿಸಿದೆ.
ಇಂದು ಚಿಕಿತ್ಸಾ ಶಿಬಿರ
ಮುಂಡರಗಿ: ನಿಯೋಸಾಫ್ಟ್ ಪಬ್ಲಿಕೇಶನ್ ಮಾರ್ಕೇಟಿಂಗ್ ಮತ್ತು ಇನ್ಫಾರ್ಮೇಶನ್ ಸೆಂಟರ್ ಮಣಿಪಾಲ್ ಅವರಿಂದ ಫೆ. 6ರಂದು ಬೆಳಗ್ಗೆ 10.30ಕ್ಕೆ ಸ್ಥಳೀಯ ಅಂಬಾಭವಾನಿ ಕಲ್ಯಾಣ ಕೇಂದ್ರದಲ್ಲಿ ಮುಂಡರಗಿ ತಾಲೂಕು ಮಟ್ಟದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭ ಜರುಗಲಿದೆ. ಕಲಕೇರಿ-ವಿರುಪಾಪುರದ ಷ.ಬ್ರ. ಮಧುಕೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವಿ. ತಿಗರಿಮಠ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಎ.ಟಿ. ನರೇಗಲ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಮಖ್ಯ ಅತಿಥಿಗಳಾಗಿ ಡಾ. ಎಂ.ಎಂ.ಸೊಲ್ಲಾಪುರ, ಎಂ.ಎನ್. ನಾಯಕ, ಈಶ್ವರಪ್ಪ ಹಂಚಿನಾಳ, ಸುರೇಶ ಹೊಸಮನಿ, ಎಂ.ಬಿ. ಪಾಟೀಲ, ಎಂ.ಸಿ. ಅಯ್ಯನಗೌಡ್ರ, ಹನಮಪ್ಪ ಸಣಕಲ್, ಗದಿಗೆಪ್ಪ ಕಂಬಳಿ, ಕುಬೇರಪ್ಪ ನಾಯಕ, ನಾಗರಾಜ ಮಂಜುನಾಥ ನಾಯಕ, ಅಶೋಕ ಕುಮಾರ, ಉಮೇಶ ಬಿ. ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಾಲೂಕು ಅಭಿವೃದ್ಧಿ ಅಧಿಕಾರಿ ಮಾರುತಿ ಕೊಡ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಹುಡ್ಕೋ ಕೆಲವು ಭಾಗ, ಮುಳಗುಂದ ರೋಡ್, ಕಲಾಲ ಲೈನ್, ಜಾಕೀರಹುಸೇನ್ ಕಾಲನಿ, ರಾಧಾಕೃಷ್ಣ ನಗರ ಈ ಭಾಗಗಳಲ್ಲಿ ಬುಧವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

