ಮಹಾಂತ ಶ್ರೀ ಲಿಂಗೈಕ್ಯ: ಶ್ರದ್ಧಾಂಜಲಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 4
ಹರಿಹರದ ಪಂಚಮಸಾಲಿ ಪೀಠದ ಸ್ಥಿರ ಪಟ್ಟಾಧ್ಯಕ್ಷರಾದ ಮಹಾಂತ ಸ್ವಾಮೀಜಿ ಲಿಂಗೈಕ್ಯರಾದ ಪ್ರಯುಕ್ತ ಸೋಮವಾರ ಸಮೀಪದ ಗೊಜನೂರು ಗ್ರಾಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಪೀಕಾರ್ಡ್ ಬ್ಯಾಂಕಿನ ಅಧ್ಯಕ್ಷ ಎಸ್.ಪಿ. ಪಾಟೀಲ್ ಮಾತನಾಡಿ, ಸಮಾಜದ ಸಂಘಟನೆಯಲ್ಲಿ ಹರಿಹರ ಪೀಠದ ಶ್ರೀಗಳು ಮಹತ್ತರ ಕಾರ್ಯ ಮಾಡಿದ್ದು, ಪಂಚಮಸಾಲಿ ಸಮಾಜಕ್ಕೆ ಅವರ ಸೇವೆ ಅವಿಸ್ಮರಣೀಯ.
ಅವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಮ್ಮ ಸಮಾಜವು ಸಾಗಿ ಶ್ರೀಗಳು ಕಂಡ ಕನಸನ್ನು ನನಸಾಗಿಸುವ ಮೂಲಕ ಅವರ ದಾರಿಯಲ್ಲಿ ಸಾಗೋಣ. ಭಗವಂತನು ಶ್ರೀಗಳ ಆತ್ಮಕ್ಕೆ ಚಿರಶಾಂತಿ ನೀಡಿಲಿ ಎಂದು ಪ್ರಾರ್ಥಿಸಿದರು. ಶಿರಹಟ್ಟಿ ತಾಲೂಕು ವೀರಶೈವ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಸೋಮಣ್ಣ ಮುಳಗುಂದ, ತಾಲೂಕು ಕಾರ್ಯದರ್ಶಿ ಶಿವಾನಂದ ದೇಸಾಯಿ, ಗ್ರಾಪಂನ ಮಾಜಿ ಅಧ್ಯಕ್ಷ ಎಸ್.ಡಿ.ಪಾಟೀಲ, ಬಿ.ಎನ್. ಪಾಟೀಲ್, ರಮೇಶ ದನದಮನಿ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಹನುಮಂತಗೌಡ ದೊಡ್ಡಗೌಡರ, ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಸಂಜೀವ ಚಾಕಲಬ್ಬಿ, ಶಿವರಾಜಗೌಡ ಪಾಟೀಲ, ಬಾಬಣ್ಣ ಜಕ್ಕನಗೌಡರ, ದ್ಯಾಮನಗೌಡ ಪಾಟೀಲ್, ಹನುಮಂತಗೌಡ ಪಾಟೀಲ, ಗಂಗನಗೌಡ ಪಾಟೀಲ, ಹನುಮಂತಗೌಡ ಮೂಲಿಮನಿ, ಫಕ್ಕಿರೇಶ ದೊಡ್ಡಗೌಡರ, ಅಂದಾನಗೌಡ ಬಾಗವಾಡ, ರಾಮನಗೌಡ ಪಾಟೀಲ ಮುಂತಾದವರು ಇದ್ದರು. ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಿ.ಡಿ. ಪಾಟೀಲ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

