ಗದಗ

ಇಂದು ಕಬಡ್ಡಿ ಪಂದ್ಯಾವಳಿ

Published On :


ರೋಣ: ತಾಲೂಕಿನ ಬೆನಹಾಳ ಗ್ರಾಮದ ಗೆಳೆಯರ ಬಳಗ ಯುವಕ ಮಂಡಳ ಇವರ ಆಶ್ರಯದಲ್ಲಿ ದಿ. ಎಲ್.ಬಿ. ಜಂಗಣ್ಣವರ ಹಾಗೂ ವಿಶ್ವನಾಥ ಪಾಟೀಲ್ ಇವರ ಸ್ಮರಣಾರ್ಥವಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ (53ಕೆಜಿ ಒಳಗಿನ) ಕಬಡ್ಡಿ ಪಂದ್ಯಾವಳಿ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವು ಫೆ. 2 ರಂದು ರಾತ್ರಿ 9 ಗಂಟೆಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಜರುಗಲಿದೆ. ಸಾನ್ನಿಧ್ಯವನ್ನು ಬೆನಹಾಳ ಹಿರೇಮಠದ ಮಹಾಂತ ಶಿವಾಚಾರ್ಯರು ವಹಿಸುವರು. ಗಂಗಾಧರ ಮಂಡಸೊಪ್ಪಿ ಜ್ಯೋತಿ ಬೆಳಗಿಸುವರು. ಉದ್ಘಾಟಕರಾಗಿ ಬಸವಂತಪ್ಪ ತಳವಾರ ಆಗಮಿಸುವರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಸುಶಿಲವ್ವ ಪಾಟೀಲ ವಹಿಸುವರು. ಜಿಪಂ ಸದಸ್ಯೆ  ಶಕುಂತಲಾ ಗಾಣಗೇರ, ತಾರನಗೌಡ ಪಾಟೀಲ, ವೀರನಗೌಡ ಹೊಸಮನಿ, ಹೂವಪ್ಪ ಜೊತೆಪ್ಪನವರ ಮುಂತಾದವರು ಉಪಸ್ಥಿತರಿರುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಣ: 10ರಂದು ವಾಲಿಬಾಲ್ ಪಂದ್ಯಾವಳಿ
ರೋಣ: ದ್ರೋಣಾಚಾರ್ಯ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯು ಫೆ. 10ರಂದು ಪಟ್ಟಣದ ಹೊಸ ಸಂತೆ ಬಜಾರ ಮೈದಾನದಲ್ಲಿ ಜರುಗಲಿದೆ. ಪಂದ್ಯಾವಳಿಯನ್ನು ಬಸವಂತಪ್ಪ ತಳವಾರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಾವಾಸಾಬ ಬೆಟಗೇರಿ ಮತ್ತು ಶಿವಕುಮಾರ ಚಿತ್ರಗಾರ ವಹಿಸುವರು. ಜೆಡಿಎಸ್ ಮುಖಂಡ ಹೇಮಗಿರೀಶ ಹಾವನಾಳ, ಎಚ್.ಎಸ್. ಸೋಂಪುರ, ಅಜ್ಜು ಬೇಪಾರಿ, ಅಶೋಕ ನವಲಗುಂದ, ಎಂ.ಜಿ. ಪೂಜಾರ, ಎಫ್.ಎನ್. ತೆಗ್ಗಿನಮನಿ, ಪ್ರಭುರಾಜ ಬ್ಯಾಳಿ  ಆಗಮಿಸುವರು. ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರು. 7001, ದ್ವಿತೀಯ ರು. 5001, ತೃತೀಯ ರು. 3001, ಚತುರ್ಥ 2,001 ನೀಡಲಾಗುವುದೆಂದು ಪ್ರಕಟಣೆ ತಿಳಿಸಿದೆ.
4ರಂದು ಚೆನ್ನಮ್ಮ ಪುಣ್ಯ ಸ್ಮರಣೋತ್ಸವ
ರೋಣ: ವೀರರಾಣಿ ಕಿತ್ತೂರ ಚೆನ್ನಮ್ಮಳ 183ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಫೆ. 4ರ ಬೆಳಗ್ಗೆ 10ಗಂಟೆಗೆ ತಾಲೂಕಿನ ಮೆಣಸಗಿ ಗ್ರಾಮದ ವೀರಶೈವ ಪಂಚಮಸಾಲಿ ಸಂಘದ ಕಾರ್ಯಾಲಯದಲ್ಲಿ ಜರುಗಲಿದೆ. ಅಧ್ಯಕ್ಷತೆಯನ್ನು ಅಮರೇಶ್ವರ ಬೂದಿಹಾಳ ವಹಿಸುವರು. ಅತಿಥಿಗಳಾಗಿ ಬಸವರಾಜ ದಿಂಡೂರ, ಎಸ್.ವಿ. ನೇಗಲಿ, ಎಫ್.ವಿ. ಮರಿಗೌಡರ, ವೀರುಪಾಕ್ಷಗೌಡ್ರ ದೇಸಾಯಿಗೌಡ್ರ, ನಿಂಗಪ್ಪ ಪಡಗದ, ವೀರಣ್ಣ ಕರಿಬಿಷ್ಠಿ, ಎಂ.ಎಸ್. ಪರ್ವಗೌಡ್ರ, ಎಂ.ಕೆ. ಬೊಮ್ಮನಗೌಡ್ರ, ಶೇಖರಗೌಡ ಹಿರೇಗೌಡ್ರ ಮುಂತಾದವರು ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.