ದಾವಣಗೆರೆ

ಜಾಗತೀಕರಣದಿಂದ ಮಾನವೀಯ ಸಂಬಂಧ ಕಣ್ಮರೆ

Published On :

ದಾವಣಗೆರೆ: ಜಾಗತೀಕರಣದ ತಲ್ಲಣಗಳಿಂದ ಮನುಷ್ಯ ಮನುಷ್ಯರ ಮಧ್ಯೆ ಮಾನವೀಯ ಸಂಬಂಧ  ಕಣ್ಮರೆಯಾಗುತ್ತಿದ್ದು, ಯುವ ಜನಾಂಗಕ್ಕೆ ಸ್ಫೂರ್ತಿಯಾಗುವ ಸಕಾರಾತ್ಮಕ ಮಾದರಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸಂಸ್ಥಾಪಕ ಸದಸ್ಯ ಜಿ.ಎಸ್. ಜಯದೇವ ವಿಷಾದ ವ್ಯಕ್ತಪಡಿಸಿದರು.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಲ್ಲಿ ಮಂಗಳವಾರ ಪ್ರಚಲಿತ ಸಮಸ್ಯೆಯಾದ ಅತ್ಯಾಚಾರ ನಿಯಂತ್ರಣ ವಿಷಯ ಕುರಿತ ಸಮಾಲೋಚನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹೆತ್ತವರು ಉದ್ಯೋಗಿಗಳಾದ ಪರಿಣಾಮ ಮಕ್ಕಳು ಇಂದು ಕೌಟುಂಬಿಕ ಪ್ರೀತಿ, ಹೆತ್ತವರ ಆರೈಕೆಯಿಂದಲೂ ವಂಚಿತರಾಗುತ್ತಿದ್ದಾರೆ ಎಂದರು. ಪರಿಣಾಮ ಮಕ್ಕಳಲ್ಲಿ ಆತ್ಮವಿಶ್ವಾಸ ಕುಗ್ಗಿ, ನಕಾರಾತ್ಮಕ ಭಾವನೆ ಪ್ರಚೋದಿಸುವಂತಾಗಿದೆ. ಇಂತಹ ಸಂಕೀರ್ಣ ವಾತಾವರಣದಲ್ಲಿ ಅತ್ಯಾಚಾರದಂತಹ ದುಷ್ಕೃತ್ಯ ದಿನಬೆಳಗಾದರೆ ಸುದ್ದಿಯಾಗಿ ಬಿತ್ತರಗೊಳ್ಳುತ್ತಿವೆ. ಇದಕ್ಕೆಲ್ಲಾ ಅರಿವಿನ ಕೊರತೆಯೂ ಕಾರಣ. ವೈಯಕ್ತಿಕ ಶುದ್ಧೀಕರಣವೇ ಇದಕ್ಕೆಲ್ಲಾ ಪರಿಹಾರವಾಗಿದೆ ಎಂದು ಅವರು ತಿಳಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಪ್ರೊ. ಬಿ.ವಿ. ವೀರಭದ್ರಪ್ಪ, ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಸಾಹಿತಿ
ನಾಗರಾಜ ಸಿರಿಗೆರೆ, ಡಾ. ಆನಂದ ಋಗ್ವೇದಿ, ಗಂಗಾಧರಯ್ಯ ಹಿರೇಮಠ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.