ಪುಸ್ತಕ ಮುಟ್ಟುಗೋಲು ಸ್ವಾಗತಾರ್ಹ: ಭೋಜರಾಜ್
ಚನ್ನಗಿರಿ: ವಿವಾದಿತ 'ವಾಲ್ಮೀಕಿ ಯಾರು?' ಎಂಬ ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿರುವುದು ಅಭಿನಂದನೀಯ ಎಂದು ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ನಿರ್ದೇಶಕ ಎನ್.ಪಿ. ಭೋಜರಾಜ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜುಲೈ 24ರಂದು ವಿಧಾನ ಪರಿಷತ್ತಿನ ಕಲಾಪದಲ್ಲಿ ಇಂತಹ ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ವಾಲ್ಮೀಕಿ ನಾಯಕ ಸಂಘದ ಮುಖಂಡರಾದ ಬುಳುಸಾಗರದ ಸಿದ್ದರಾಮಪ್ಪ, ಬಿ.ಎಸ್. ನಾಗರಾಜ್, ಕೃಷ್ಣಮೂರ್ತಿ, ರಾಜಣ್ಣ, ಕುಬೇರಪ್ಪ, ಅಶೋಕ್, ಎನ್.ಎಚ್. ಶಿವಮೂರ್ತಿ, ಗಾದ್ರಿ ರಾಜು, ಜಯಣ್ಣ, ರುದ್ರಣ್ಣ, ರಂಗಣ್ಣ ಉಪಸ್ಥಿತರಿದ್ದರು. ನಂತರ ಸಂಘದ ಕಾರ್ಯಕರ್ತರು ಮಹಾತ್ಮ ಗಾಂಧಿ ವೃತ್ತದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಆರ್ಯವೈಶ್ಯ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಇಂದು
ದಾವಣಗೆರೆ: ಶ್ರೀ ವಾಸವಿ ಚಾರಿಟಬಲ್ ಫೌಂಡೇಷನ್ನಿಂದ ಆರ್ಯವೈಶ್ಯ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಜು.27ರಂದು ನಗರದ ಎಸ್ಕೆಪಿ ರಸ್ತೆಯ ಶ್ರೀಮತಿ ಸುಂದರಮ್ಮ ಕಾಸಲ್ ವಿಠ್ಠಲ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಂಜೆ 5.30ಕ್ಕೆ ಸಂಸ್ಥೆ ಅಧ್ಯಕ್ಷ ಆರ್.ಎಸ್. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ರಾಜನಹಳ್ಳಿ ರಮಾನಂದ್ ಸಮಾರಂಭ ಉದ್ಘಾಟಿಸುವರು. ಕಾಸಲ್ ಎಸ್. ವಿಠ್ಠಲ್, ಸಿ.ಆರ್. ವಿರುಪಾಕ್ಷಪ್ಪ, ಎ.ಬಿ. ವಿಶ್ವನಾಥ, ಆರ್.ಜಿ. ನಾಗೇಂದ್ರ ಪ್ರಕಾಶ, ಸಿ.ಪಿ. ಸತೀಶ ಕುಮಾರ, ಆರ್.ಎಲ್. ಪ್ರಭಾಕರ, ಆರ್.ಜಿ. ಶ್ರೀನಿವಾಸಮೂರ್ತಿ, ಬೆಂಗಳೂರಿನ ಕಾಸಲ್ಜಿ. ರಾಮರಾಜ್, ರಾಜನಹಳ್ಳಿ ಕಾಂತಲಕ್ಷ್ಮಮ್ಮ ಗೋಪಾಲಕೃಷ್ಣ ಶೆಟ್ಟಿ, ಅಮೆರಿಕಾದ ಜ್ಯೋತಿ ವಿಶಾಲ ಕಾಶಿ ಮಂಜುನಾಥ ಭಾಗವಹಿಸುವರು. ಆರ್ಯವೈಶ್ಯ ಸಮಾಜದ ಬಿ.ವಿ. ಗಂಗಪ್ಪ ಶೆಟ್ಟಿ, ಕಲಾವತಿ, ಬಿ.ಜಿ. ದತ್ತಾತ್ರೇಯ, ಬಿ.ಡಿ. ಮಂಜುಳಾ, ಬಿ.ಜಿ. ವಿರುಪಾಕ್ಷಪ್ಪ, ಬಿ.ವಿ. ಅನಿತಾ ಮತ್ತು ಕುಟುಂಬ ವರ್ಗ ಪ್ರತಿ ವರ್ಷ ಆರ್ಯ ವೈಶ್ಯ ಸಮಾಜದ ವಿದ್ಯಾರ್ಥಿಗಳಿಗೆ ನಿರಂತರ 2 ಲಕ್ಷ ದೇಣಿಗೆ ಸೇರಿ ಸಮಾಜದ ಅನೇಕರು ವಿದ್ಯಾರ್ಥಿಗಳ ಓದಿಗೆ ನೆರವನ್ನು ನೀಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

