ಸಂಘಟನೆಗಳ ಪ್ರತಿಭಟನೆ
ದಾವಣಗೆರೆ: ರಾಜ್ಯದಲ್ಲಿ ನಿತ್ಯವೂ ಮಹಿಳೆಯರ ಮೇಲೆ ನಡೆಯುತ್ತಿರುವ ಸರಣಿ ಅತ್ಯಾಚಾರ ಪ್ರಕರಣ ಖಂಡಿಸಿ, ಮಹಿಳೆಯರ ರಕ್ಷಣೆಗೆ ಅಗತ್ಯ ಕಾನೂನು ಜಾರಿಗೊಳಿಸಲು ಒತ್ತಾಯಿಸಿ ಡಿವೈಎಫ್ಐ, ಎಸ್ಎಫ್ಐ ಸಂಘಟನೆಗಳ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಎಕ್ಸ್ಮುನಿಸಿಪಲ್ ಕಾಲೇಜು ಬಳಿಯಿಂದ ಮೆರವಣಿಗೆ ತೆರಳಿದ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಮಹಿಳೆಯರ ರಕ್ಷಣೆಗೆ ಅಗತ್ಯ ಕಾನೂನು ಜಾರಿಗೊಳಿಸುವ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಡುವಂತೆ ಘೋಷಣೆ ಕೂಗಿ, ಉಪ ವಿಭಾಗಾಧಿಕಾರಿ ಕಚೇರಿ ತಲುಪಿಸಿದರು.
ತ್ವರಿತ ನ್ಯಾಯಾಲಯಕ್ಕೆ ಚುರುಕು ತಂದು, ನ್ಯಾಯಮೂರ್ತಿ ವರ್ಮ ಸಮಿತಿ ಶಿಫಾರಸ್ಸು ಜಾರಿಗೊಳಿಸಲಿ. ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಬಹು ವಿಳಂಬವಾಗಿ ರಚನೆಯಾದ ಮಹಿಳಾ ಆಯೋಗ ಸಕ್ರಿಯವಾಗಿ ಇನ್ನಾದರೂ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆ ಎಲ್ಲಾ ಹಂತದ ಸಿಬ್ಬಂದಿಗೆ ಲಿಂಗ ಸಂವೇದನಾಶೀಲತೆ ಮೂಡಿಸುವ ತರಬೇತಿಗೆ ಸೂಕ್ತ ಪಠ್ಯವನ್ನು ಸಂಘಟನೆ ಜೊತೆಗೆ ಚರ್ಚಿಸಿ, ಸಿದ್ಧಪಡಿಸಬೇಕು ಎಂದರು.
ಉಪವಿಭಾಗಾಧಿಕಾರಿ ಡಾ.ಸಿ. ನಾಗರಾಜ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. ಸಂಘಟನೆ ಮುಖಂಡರಾದ ರವಿ, ಫಯಾಜ್, ಸಿದ್ಧಾರ್ಥ, ಕಿರಣ್, ಸತೀಶ, ನಿರ್ಮಲ, ಪಲ್ಲವಿ, ಜ್ಯೋತಿ, ಮಧು, ಗೀತಾ, ಮಮತಾ, ರಾಧಾ, ಮಂಜುಳಾ, ವನಜಾ, ಸೌಮ್ಯ ಇತರರು ಇದ್ದರು.
ಎಐಎಂಎಸ್ಎಸ್ ಪ್ರತಿಭಟನೆ: ಮನವಿ
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ನಗರದ ವಿವಿಧ ಕಾಲೇಜುಗಳಿಂದ ಇಲ್ಲಿನ ಜಯದೇವ ವೃತ್ತಕ್ಕೆ ಆಗಮಿಸಿದ ಸಂಖ್ಯೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ, ಮಹಿಳೆಯರ ರಕ್ಷಣೆಗೆ ಬಾರದ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಸರ್ಕಾರದ ಪ್ರತಿಕೃತಿ ದಹಿಸಿದರು.
ಎಐಎಂಎಸ್ಸೆಸ್ ಜಿಲ್ಲಾ ಸಂಚಾಲಕಿ ಜ್ಯೋತಿ ಎಂ. ಕುಕ್ಕವಾಡ ಮಾತನಾಡಿ, ರಾಜ್ಯದೆಲ್ಲೆಡೆ ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣ ತಡೆಗಟ್ಟಬೇಕಾದ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಅತ್ಯಾಚಾರ, ದೌರ್ಜನ್ಯ ಎಸಗಿದ ಆರೋಪಿಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಾಗದೆ ಮೀಸೆ ಮೇಲೆ ಕೈ ಹಾ ಕಿಕೊಂಡು ತಿರುಗುತ್ತಲೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ಮುಖಂಡ ಮಂಜುನಾಥ ಕೈದಾಳ್, ಭಾರತಿ, ಸೌಮ್ಯ, ಶಿವರಾಜ, ಭವ್ಯಶ್ರೀ, ನಾಗಜ್ಯೋತಿ, ಮಂಜುನಾಥ ಕುಕ್ಕವಾಡ, ಸುನೀತಾ, ಚೇತನ್, ನಾಗರಾಜ, ಭವಾನಿರಾವ್, ನಾಗಲಕ್ಷ್ಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ಎಸಿ ಡಾ. ಸಿ. ನಾಗರಾಜ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

