ಮಾರ್ಗದರ್ಶಿ ಚಿಟ್ ಫಂಡ್ನಲ್ಲಿ 11.5 ಲಕ್ಷ ಕಳವು
ಶಿವಮೊಗ್ಗ: ಇಲ್ಲಿನ ಚಿಟ್ ಫಂಡ್ ಕಚೇರಿಗೆ ನುಗ್ಗಿದ ಕಳ್ಳರು ಸುಮಾರು ರು. 11.5 ಲಕ್ಷ ನಗದು ಕಳವು ಮಾಡಿದ ಘಟನೆ ನಗರದ ನೆಹರೂ ರಸ್ತೆಯಲ್ಲಿ ನಡೆದಿದೆ. ಮಾರ್ಗದರ್ಶಿ ಚಿಟ್ ಫಂಡ್ ಕಚೇರಿ ಹಿಂಭಾಗದ ಕಿಟಕಿಯ ಗ್ರಿಲ್ಗಳನ್ನು ಗ್ಯಾಸ್ ಕಟರ್ ಬಳಸಿ ಮುರಿದು ಒಳನುಗ್ಗಿರುವ ಕಳ್ಳರು ಹಣ ಕಳವು ಮಾಡಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾ ನೆಹರೂ ಕಾಲೇಜಿನ ಹಿಂಭಾಗದ ಮೂಲಕ ಕಟ್ಟಡದ ಕಿಟಕಿ ಬಾಗಿಲು ತೆರೆದು ಒಳಪ್ರವೇಶಿಸಿರುವ ದುಷ್ಕರ್ಮಿಗಳು ಗ್ಯಾಸ್ ಕಟರ್ ಯಂತ್ರದ ನೆರವಿನಿಂದ ಸ್ಟ್ರಾಂಗ್ ರೂಂ ಬಾಗಿಲು ಮುರಿದು ಹಣ ದೋಚಿದ್ದಾರೆ. ಗ್ಯಾಸ್ ಕಟರ್ ಬಳಸಿದ್ದರಿಂದ ಬೆಂಕಿಯ ಕಿಡಿಗಳು ತಾಗಿ ಚೆಕ್ ಹಾಗೂ ನೋಟುಗಳು ಸಹ ಸುಟ್ಟುಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಕಚೇರಿಯಲ್ಲಿ ಚೀಟಿ ವ್ಯವಹಾರ ನಡೆದಿದ್ದು, ವಾಡಿಕೆಯಂತೆ ಸೋಮವಾರ ರಜೆ ನೀಡಲಾಗಿತ್ತು. ಸ್ಥಳಕ್ಕೆ ಎಸ್ಪಿ ಕೌಶಲೇಂದ್ರ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

