ಬಸವ ಕೇಂದ್ರದಪದಾಧಿಕಾರಿಗಳು
ಚನ್ನಗಿರಿ: ಚನ್ನಗಿರಿ ಪಟ್ಟಣದಲ್ಲಿ ಬಸವಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಚಿತ್ರದುರ್ಗದ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಅಣತಿಯಂತೆ ಬಸವಕೇಂದ್ರದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವ ಅಧ್ಯಕ್ಷರಾಗಿ ಹಾಲಸ್ವಾಮಿ ವಿರಕ್ತಮಠದ ಶ್ರೀ ಜಯದೇವ ಸ್ವಾಮೀಜಿ, ಅಧ್ಯಕ್ಷರಾಗಿ ಕೆ.ಶಿವಲಿಂಗಪ್ಪ, ಉಪಾಧ್ಯಕ್ಷರಾಗಿ ಜೆ. ಮಲ್ಲಿಕಾರ್ಜುನ್, ಕಾರ್ಯದರ್ಶಿಯಾಗಿ ಎಲ್.ಎಂ. ಉಮಾಪತಿ, ಸಹ ಕಾರ್ಯದರ್ಶಿಯಾಗಿ ಎಚ್.ಆರ್. ಲಿಂಗಮೂರ್ತಿ, ಖಜಾಂಚಿಯಾಗಿ ಎನ್.ಯು. ರಾಜಶೇಖರಯ್ಯ, ಸದಸ್ಯರಾಗಿ ಕೋರಿ ಬಸವರಾಜ್, ಬಾ.ರಾ. ಮಹೇಶ್, ಬಂಗಿ ಬಸವರಾಜ, ಶಿವಕುಮಾರ್, ಕೆ.ಪಿ.ಎಂ. ವಾಗೀಶಯ್ಯ, ಎಚ್.ಬಿ. ಸಂತೋಷ್, ಜಯಪ್ರಕಾಶ್, ರುದ್ರಪ್ಪ, ಆರ್.ಕುಮಾರ್, ಬಿ.ಎಂ.ಕುಬೇಂದ್ರೋಜಿರಾವ್, ಪಿ.ಶ್ರೀಧರ್,ಗಣೇಶಾಚಾರ್, ರಾಜಣ್ಣ ಆಯ್ಕೆಯಾಗಿದ್ದಾರೆ.
ವಿರೂಪಾಕ್ಷಶಾಸ್ತ್ರಿ ನಾಟಕ ಶಾಲೆಗೆ ಅರ್ಜಿ ಆಹ್ವಾನ
ಹರಪನಹಳ್ಳಿ: ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಇಲ್ಲಿಯ ತೆಗ್ಗಿನಮಠ ಸಂಸ್ಥೆಯ ಶ್ರೀ ವಿರೂಪಾಕ್ಷಶಾಸ್ತ್ರಿ ನಾಟಕ ಶಾಲೆಗೆ 2014-15ನೇ ಸಾಲಿನ ಶಿಕ್ಷಣ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಇದ್ದು, ಕೆಲವೇ ಕೆಲವು ಸೀಟುಗಳು ಲಭ್ಯ ಇವೆ. ಸಂದರ್ಶನದ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ 8 ತಿಂಗಳ ತರಬೇತಿಯಲ್ಲಿ ಅಂಗಿಕ, ವಾಚಕ, ಆಹಾರ್ಯ, ನಟನೆ, ಪ್ರಯೋಗ, ಸಾಹಿತ್ಯ, ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಬಗ್ಗೆ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಹಂಪಿ ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ನಾಟಕ ಕಲೆ ಡಿಪ್ಲೋಮಾ ಕೋರ್ ಸರ್ಟಿಪಿಕೇಟ್ ಕೊಡಿಸಲಾಗುವುದು. ಜು. 31 ಅರ್ಜಿ ಸಲ್ಲಿಸಲು ಅಂತಿಮ ದಿನ.ಮಾಹಿತಿಗಾಗಿ ನಾಟಕ ಶಾಲೆ ಪ್ರಾಂಶುಪಾಲ ಬಿ.ಪರಶುರಾಮ-9449424664 ಮತ್ತು ದೂರ ಶಿಕ್ಷಣ ಅಧ್ಯಯನ ಕೇಂದ್ರದ ಸಂಯೋಜಕ ಡಿ.ವಿಶ್ವನಾಥ-9945525413 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

