ದಾವಣಗೆರೆ

ಮಕ್ಕಳ ಚಿತ್ರಕ್ಕೆ ಪ್ರೋತ್ಸಾಹ ಅಗತ್ಯ

Published On :

ದಾವಣಗೆರೆ: ಮಕ್ಕಳ ಏಳಿಗೆ, ಶಿಕ್ಷಣದ ಮಹತ್ವ ಸಾರುವ 'ನಾವು ಗೆಳೆಯರು' ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿದೆ. ಇಂತಹ ಚಿತ್ರವನ್ನು ಸಾರ್ವಜನಿಕರು ತಮ್ಮ ಮಕ್ಕಳು, ಕುಟುಂಬ ಸಮೇತ ವೀಕ್ಷಿಸುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ನಿವೃತ್ತ ಎಸ್ಪಿ ರವಿನಾರಾಯಣ ಮನವಿ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆಯ ಉತ್ಸಾಹಿ ಯುವಕ ರಾಜಶೇಖರ ಎಸ್‌ಐ ಆಗಿ ನಟಿಸಿರುವ 'ನಾವು ಗೆಳೆಯರು' ಚಿತ್ರವನ್ನು 35 ಲಕ್ಷ ವೆಚ್ಚದಲ್ಲಿ, ಅಚ್ಚುಕಟ್ಟಾಗಿ ನಿರ್ಮಿಸಿದ್ದರೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಚಿತ್ರವು ನಿರೀಕ್ಷೆಗಿಂತಲೂ ಹೆಚ್ಚು ಯಶಸ್ವಿಯಾಗಿದೆ ಎಂದರು.
ಕಳೆದೆರೆಡು ದಶಕದಲ್ಲಿ ಸಿನಿಮಾಗಳನ್ನೇ ನೋಡದಿದ್ದ ತಾವು ಮಕ್ಕಳ ಸಿನಿಮಾವೆಂಬ ಕಾರಣಕ್ಕೆ 'ನಾವು ಗೆಳೆಯರು'ಚಿತ್ರ ವೀಕ್ಷಿಸಿದ್ದು, ಉತ್ತಮ ಸಾಮಾಜಿಕ ಸಂದೇಶ ನೀಡುವ ಚಿತ್ರವಾಗಿದೆ. ಶಿಕ್ಷಣದ ಅಗತ್ಯತೆ ಬಗ್ಗೆ ಸಾರುವುದೇ ಚಿತ್ರದ ತಿರುಳಾಗಿದೆ. ಅಲೆಮಾರಿ ಮಕ್ಕಳಿಗೆ ಶಿಕ್ಷಣ ಬೇಡವೆಂಬ ಅಪನಂಬಿಕೆ ಹೋಗಲಾಡಿಸುವಲ್ಲಿ ಚಿತ್ರವಂತೂ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದರು.
ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಬೇರು ಬಿಟ್ಟಿದ್ದು, ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಸರ್ಕಾರ ಅನೇಕ ಯೋಜನೆಗಳಡಿ ಹಣ ಹರಿದಾಡುವುದರಿಂದ ಪವಿತ್ರ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರೂ ಭ್ರಷ್ಟರಾಗುತ್ತಿದ್ದು, ಇಂಥದ್ದಕ್ಕೆಲ್ಲಾ ಕಡಿವಾಣ ಹಾಕುವ ಸಂದೇಶವನ್ನು ಚಿತ್ರ ನೀಡುತ್ತದೆ. ಸರ್ಕಾರಿ ಶಾಲೆಗಳು ಕಳಪೆ ಎಂಬ ವಾದ ಸರಿಯಲ್ಲ. ಮಕ್ಕಳಲ್ಲಿ ಹೋರಾಟದ ಮನೋಭಾವ ತುಂಬುವಲ್ಲಿ ಚಿತ್ರ ಸಹಕಾರಿಯಾಗಿದೆ ಎಂದರು.
ಚಿತ್ರದ ನಿರ್ದೇಶಕ ಜಿ.ಕೆ. ಮುದ್ದುರಾಜ್ ಮಾತನಾಡಿ,'ನಾವು ಗೆಳೆಯರು'ತಮ್ಮ 38ನೇ ಸಿನಿಮಾ ಆಗಿದ್ದು, ಸಾಂಸಾರಿಕ, ಹಾಸ್ಯ ಚಿತ್ರ ಮಾಡುತ್ತಾ ಬಂದಿದ್ದ ತಮಗೆ ಈ ಚಿತ್ರವು ಮನಸ್ಸಿಗೆ ಖುಷಿ ತಂದಿದೆ. 35 ಲಕ್ಷ ವೆಚ್ಚದಲ್ಲಿ 3 ಹಾಡುಗಳನ್ನು ಒಳಗೊಂಡ ಸಮಾಜಕ್ಕೆ ಸಂದೇಶ ನೀಡುವ, ಶಿಕ್ಷಣದ ಅಗತ್ಯತೆಯ ಮಹತ್ವ ಸಾರುವ ಚಿತ್ರವಾಗಿ ಸಿನಿಮಾ ಮೂಡಿ ಬಂದಿದೆ. ಎಂದರು.
ಸಮಾಜ ಸೇವಕರಾದ ಅಜ್ಜಂಪುರಶೆಟ್ರಿ ಮೃತ್ಯುಂಜಯ, ಪಿ.ಸಿ. ರಾಮನಾಥ, ಅಜ್ಜಂಪುರಶೆಟ್ರು ವಿಜಯಕುಮಾರ, ಕಸಾಪ ಜಿಲ್ಲಾಧ್ಯಕ್ಷ ಎ.ಆರ್. ಉಜ್ಜಿನಪ್ಪ, ಚಿತ್ರದಲ್ಲಿ ನಟಿಸಿರುವ ರಾಜಶೇಖರ, ದೈಹಿಕ ಶಿಕ್ಷಣ ಮಹಲಿಂಗಪ್ಪ, ಪಿ. ನಾಗಭೂಷಣ ತೌಡೂರು, ವೇದಮೂರ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.