ದಾವಣಗೆರೆ

ಇಂದು ಎವಿಕೆಯಲ್ಲಿ ವಿಚಾರ ಸಂಕಿರಣ

Published On :

ಭ್ರಷ್ಟಾಚಾರದ ಪಿಡುಗನ್ನು ನಿಯಂತ್ರಿಸುವಲ್ಲಿ ನಾಗರಿಕ ಸಮಾಜದ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯತೆಯ ಕುರಿತಂತೆ ಯುಜಿಸಿ ಪ್ರಾಯೋಜಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ಮಾ.9ರಂದು ದಾವಣಗೆರೆ ಎವಿಕೆ ಮಹಿಳಾ ಕಾಲೇಜಿನಲ್ಲಿ ನಡೆಯಲಿದೆ. ಅಂದು 10ಕ್ಕೆ ಪ್ರಾಚಾರ್ಯ ಪ್ರೊ.ಕೆ.ಎಸ್. ಹನುಮಂತಪ್ಪ  ಅಧ್ಯಕ್ಷತೆಯಲ್ಲಿ ಶಾಸಕ, ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ  ಕಾರ್ಯಕ್ರಮ ಉದ್ಘಾಟಿಸುವರು. ನಂತರ ವಿಚಾರ ಸಂಕಿರಣ ಆರಂಭಗೊಳ್ಳಲಿದೆ ಎಂದು ರಾಜ್ಯಶಾಸ್ತ್ರ ವಿಭಾಗ  ಮುಖ್ಯಸ್ಥ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ ತಿಳಿಸಿದ್ದಾರೆ.
ಇಂದು ಜಿಎಂಐಟಿ ಅಲುಮ್ನಿ ಮೀಟ್
ದಾವಣಗೆರೆ ಜಿಎಂಐಟಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಗಮ ಅಲುಮ್ನಿ ಮೀಟ್- 2013 ಮಾ.9ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 11ಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ, ಬೆಂಗಳೂರಿನ  ಎಲ್.ಎಸ್. ಉಮೇಶ, ಎಚ್.ಎನ್. ಕಿರಣಕುಮಾರ ಪಾಲ್ಗೊಳ್ಳಲಿದ್ದಾರೆ.ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಲಿಂಗರಾಜ ಅಧ್ಯಕ್ಷತೆ ವಹಿಸುವರು. ಹಳೆ ವಿದ್ಯಾರ್ಥಿಗಳು ತಮ್ಮ ನೆನಪು, ಅನುಭವ ಹಂಚಿಕೊಳ್ಳುವರು  ಎಂದು ಆಡಳಿತಾಧಿಕಾರಿ ವೈ.ಯು. ಸುಭಾಷ್, ಪ್ರಾಚಾರ್ಯ ಡಾ.ಎಸ್.ಜಿ. ಹಿರೇಮಠ, ವಿವಿಧ ವಿಭಾಗ ಮುಖ್ಯಸ್ಥರು, ಬೋಧಕರು ತಿಳಿಸಿದ್ದಾರೆ.
ಇಂದು ಸ್ವಕುಳಸಾಳಿ ಮಹಿಳಾ ದಿನ
ಸ್ವಕುಳಸಾಳಿ ಶ್ರೀ ಜಿಹ್ವೇಶ್ವರ ಮಹಿಳಾ ಮಂಡಳಿಯಿಂದ ದಾವಣಗೆರೆ ಹೊಂಡದ ಸರ್ಕಲ್‌ನ ಜಿಹ್ವೇಶ್ವರ  ಮಂದಿರದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಲಿದೆ. ಅಂದು ಸಂಜೆ 4.30ಕ್ಕೆ ಮಹಿಳಾ ಅಧ್ಯಕ್ಷೆ ಲಲಿತಾ  ಶಿವಾಜಿರಾವ್ ಢಗೆ ಅಧ್ಯಕ್ಷತೆಯಲ್ಲಿ ಭಾರ್ಗವಿ ನಾಗೇಂದ್ರ ಸರೋದೆ ಅವರನ್ನು ಸನ್ಮಾನಿಸಲಾಗುವುದು. ಶಾಂತಮ್ಮ ಹನುಮಂತಪ್ಪ ಕ್ಷೀರ ಸಾಗರ, ಸುಶೀಲಮ್ಮ ದಾಮೋದರಪ್ಪ ಏಕಬೋಟೆ, ಕಮಲಮ್ಮ ಲೋಕೇಶರಾವ್  ರೋಖಡೆ, ಸಿದ್ದಮ್ಮ ಗಂಗಾಧರಪ್ಪ ಏಕಬೋಟೆ, ನಾಗರತ್ನಬಾಯಿ ಜಗನ್ನಾತ ದಿವಟೆ ದಂಪತಿಯನ್ನು ಸನ್ಮಾನಿಸಲಾಗುವುದು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.