ದಾವಣಗೆರೆ

9ರಂದು ಬೀಳ್ಕೊಡುಗೆ

Published On :

ಕ.ಪ್ರ. ವಾರ್ತೆ, ದಾವಣಗೆರೆ, ಮಾ.6
ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾ. ಕುರುವತ್ತಿ ಶ್ರೀಕ್ಷೇತ್ರದ ಶ್ರೀ ಕುರುವತ್ತಿ ಬಸವೇಶ್ವರ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ದಾವಣಗೆರೆಯಿಂದ ಶ್ರೀ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿ ನೇತೃತ್ವದಲ್ಲಿ ಮಾ.9ರಂದು ಸುಮಾರು 3 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾದಯಾತ್ರೆಯಲ್ಲಿ ತೆರಳಲಿದ್ದಾರೆ.
 ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿಯ ಕೆ. ಬಸವರಾಜ ಮತ್ತು ಬಿ. ಮಲ್ಲಿಕಾರ್ಜುನ, ಮಾ.11ಕ್ಕೆ ಕುರುವತ್ತಿ ಬಸವೇಶ್ವರ ಜಾತ್ರೋತ್ಸವ ನಡೆಯಲಿದ್ದು, ಸಮಿತಿಯಿಂದ ಸತತ 9ನೇ ವರ್ಷದಲ್ಲಿ ಪಾದಯಾತ್ರಿಗಳು  ಜಾತ್ರೋತ್ಸವಕ್ಕೆ ಪಾದಯಾತ್ರೆಯಲ್ಲಿ ತೆರಳುವರು ಎಂದರು.
ಸನ್ಮಾನ: ಶ್ರೀ ಬಕ್ಕೇಶ್ವರ ದೇವಸ್ಥಾನದಲ್ಲಿ ಮಾ.9ರ ಸಂಜೆ ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಪೀಠದ ಸ್ಥಿರ ಪೀಠಾಧಿಪತಿ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಸಮಿತಿ ಗೌರವಾಧ್ಯಕ್ಷ ಬಿ. ಲೋಕೇಶ ಅಧ್ಯಕ್ಷತೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ದೊಗ್ಗಳ್ಳಿ ಜಯಣ್ಣನವರಿಗೆ ಅಂದು ಸಮಿತಿಯಿಂದ ಸನ್ಮಾನಿಸುವುದಾಗಿ ಅವರು ತಿಳಿಸಿದರು.
 ಸಮಿತಿಯ ಲೋಕೇಶ, ಮೇಗಳಗೆರೆ ಬಸವರಾಜಪ್ಪ, ಹುಲ್ಲತ್ತಿ ಚನ್ನಬಸಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.