ನಾಳೆಯಿಂದ ದಿಂಡಿ ಉತ್ಸವ
ಕ.ಪ್ರ.ವಾರ್ತೆ, ಹರಿಹರ ಫೆ.5
ನಗರದ ಗಾಂಧಿ ನಗರದಲ್ಲಿರುವ ವಿಠಲ ಮಂದಿರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಮೂರು ದಿನಗಳ ಕಾಲ ದಿಂಡಿ ಉತ್ಸವ ಹಮ್ಮಿಕೊಳ್ಳಲಾಗಿದೆ.
ಮಾ.7ರಿಂದ ಮಾ.9ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಮಾ.7ರ ಸಂಜೆ 4 ಗಂಟೆಗೆ ಆಶ್ರಯ ಕಾಲೋನಿಯಲ್ಲಿರುವ ಶಾಮರಾವ್ ಮಾಳದ್ಕರ್ ಅವರ ಮನೆಯಿಂದ ವಾರ್ಕರಿ ಮಹಾ ಜನರ ಹಾಗೂ ಸಮಾಜದ ಜನತೆಯೊಂದಿಗೆ ತೆರಳಿ ಪೋತಿ ಗಳನ್ನು ಶ್ರೀ ವಿಠಲ ಮಂದಿರಕ್ಕೆ ತಂದು ಸ್ಥಾಪಿಸಲಾಗುವುದು. ಸಂಜೆ 8 ಗಂಟೆಗೆ ಪುಂಡಲೀಕರಾವ್ ಜ್ಞಾನಮೋಟೆ ಇವರಿಂದ ಕೀರ್ತನಾ ಕಾರ್ಯಕ್ರಮ ನಡೆಯಲಿದೆ.
ಮಾ.8ರಂದು ಬೆಳಗ್ಗೆ 10ರಿಂದ ಶಿವಮೊಗ್ಗದ ಜಿಂಗಾಡೆ ದಾಮೋದರ ಹಾಗೂ ಹುಬ್ಬಳ್ಳಿ ಹನುಮಂತರಾವ್ ದೊಡ್ಡಮನಿ ಅವರಿಂದ ಪ್ರವಚನ, ಹರಿಪಾಠ, ಭಜನೆ ಹಾಗೂ ಸಂಜೆ 5 ರಿಂದ ಗಣ್ಯವ್ಯಕ್ತಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದ ಸಾರತ್ಯವನ್ನು ಹಿರಿಯ ಕೀರ್ತನಕಾರ ಬಸಪ್ಪ ಮಾಸ್ತರ್ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ್ ತುಳಜಪ್ಪ ತೇಲ್ಕರ್ ವಹಿಸಲಿದ್ದಾರೆ. ತಹಸೀಲ್ದಾರ್ ಜಿ. ನಜ್ಮಾ, ನಗರಸಭಾ ಮಾಜಿ ಅಧ್ಯಕ್ಷ ವಿಶ್ವನಾಥ ಭೂತೆ, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಕಾರ ಸಂಘದ ಯೋಜನಾಧಿಕಾರಿ ಮಾಲಿನಿ ಹೆಗಡೆ ಅವರನ್ನು ಸನ್ಮಾನಿಸಲಾಗುವುದು.
ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಮಾ.9ರಂದು ಕಾಕಡಾರತಿಯ ನಂತರ ನಗರದ ಪ್ರಮುಖ ಬೀದಿಗಳಲ್ಲಿ ದಿಂಡಿ ಉತ್ಸವ ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

