ಮತದಾರರು ನಮ್ಮ ಪರವಾಗಿದ್ದಾರೆ
ಕ.ಪ್ರ.ವಾರ್ತೆ, ಹರಿಹರ, ಮಾ.3
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ರೋಡ್ ಷೋ ಮೂಲಕ ನಗರಸಭಾ ಚುನಾವಣೆಗೆ ಸ್ಪರ್ಧಿಸಿರುವ ಕೆಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿನಂತಿಸಿದರು.
ನಗರಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ ಅವರು, ಕ್ಷೇತ್ರನಾಥ ಶ್ರೀ ಹರಿಹರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಿಂದ ತೆರೆದ ವಾಹನದಲ್ಲಿ ರೋಡ್ ಷೋ ಮೂಲಕ ದೇವಸ್ಥಾನದ ಆವರಣದಿಂದ ಹಳೇ ಕಚೇರಿ, ಹಳ್ಳದಕೇರಿ, ಶಿವಮೊಗ್ಗ ವೃತ್ತ ರಾಣಿ ಚೆನ್ನಮ್ಮ ವೃತ್ತ, ಮಹತ್ಮಾಗಾಂಧಿ ವೃತ್ತ ಹಾಗೂ ಪಿ.ಪಿ. ರಸ್ತೆಗಳ ಮೂಲಕ ತೆಗ್ಗಿನ ಕೇರಿಗೆ ಸಾಗಿತು.
ನಾವು ಸಿದ್ಧ: ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇತರೆ ಪಕ್ಷಗಳು ಚುನಾವಣೆ ಬೇಡ ಎನ್ನುತ್ತಿದ್ದು, ಕೆಜೆಪಿ ಚುನಾವಣೆಗೆ ಸಿದ್ಧವಾಗಿದ್ದೇವೆ.
ಇದಕ್ಕೆ ನಾವು ಅಧಿಕಾರದಲ್ಲಿದ್ದಾಗ ಸ್ಥಳೀಯ ಸಂಘ ಸಂಸ್ಥೆಗಳ ಅಭಿವೃದ್ಧಿಗೆ ಅತ್ಯಂತ ಹೆಚ್ಚು ಒತ್ತು ನೀಡಿದ್ದೆವು. ಇದನ್ನು ಮನಗಂಡ ರಾಜ್ಯದ ಮತದಾರರು ನಮ್ಮ ಪರವಾಗಿದ್ದಾರೆ ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಕೆಜೆಪಿ ರಾಜ್ಯ ಕಾರ್ಯದರ್ಶಿ ಬಿ.ಕೆ. ಸೈಯದ್ ರೆಹಮಾನ್, ಅಧ್ಯಕ್ಷ ರಮೇಶ ಮೆಹರ್ವಾಡೆ, ಉಪಾಧ್ಯಕ್ಷರಾದ ಗದಿಗೆಪ್ಪ ಹಲಸಬಾಳು, ರಾಜಾನಾಯ್ಕ, ಸಿ.ಎಂ. ಮುಷೀರ್, ಅಮರಾವತಿ ಸಿದ್ದಣ್ಣ, ಗಂಗಾಧರ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ರಾಘವೇಂದ್ರ, ವಾಸು ಚಂದಾಪುರ, ಸಂಘಟನಾ ಕಾರ್ಯದರ್ಶಿಗಲಾದ ಗಣೇಶ, ಎಸ್. ಚನ್ನಬಸಪ್ಪ, ನಜೀರ್ ಅಹ್ಮದ್, ಜಡಿಯಪ್ಪ, ಶ್ರೀನಿವಾರ ಇಂಡಿ, ಪಾಂಡಣ್ಣ ರಾಜೋಳ್ಲಿ, ದೇವೇಂದ್ರ, ಎ.ಕೆ. ಹನುಮಂತಪ್ಪ, ಪಾಪಣ್ಣಿ, ತುಳಜಾರಾಂ ಭೂತೆ, ಸನಾವುಲ್ಲ, ಮುದೇಗೌಡ್ರ ಪ್ರಭು, ಹಾಗೂ
ಮಹಿಳಾ ಮುಖಂಡರಾದರಾದ ವಿಜಯಲಕ್ಷಿ, ಸೋಫಿಯಾ, ಎಸ್.ಆರ್. ಅಂಜು, ಜಿ.ಆರ್.ಕವಿತಾ, ನಿರ್ಮಲ ಆರ್. ರಾಜೇನವರ್, ಪುಟ್ಟಮ್ಮ, ಬಿ.ಎಸ್. ಕವಿತಾ, ಕವಿತಾ ರೂಪಾ ಮಲ್ಲಪ್ಪ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

