ದಾವಣಗೆರೆ

ನಾಟಕಗಳು ನೈಜ್ಯ ಬದುಕಿನ ಪ್ರತಿರೂಪ

Published On :

ಹೊನ್ನಾಳಿ: ಇತ್ತೀಚಿನ ಟಿವಿ ಮಾಧ್ಯಮಗಳ ಹಾವಳಿಯಿಂದಾಗಿ ಜೀವಂತ ಕಲೆಯಾದ ರಂಗ ನಾಟಕಗಳು ನಶಿಸುತ್ತಿವೆ ಎಂದು ಸ್ಥಳೀಯ ಭಾರತೀಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ರಾಜ್ ಕುಮಾರ್ ಹೇಳಿದರು.
ಸ್ಥಳೀಯ ಭಾರತೀಯ ವಿದ್ಯಾಸಂಸ್ಖೆಯ ಆವರಣದಲ್ಲಿ ಶಿವಮೊಗ್ಗದ ರಂಗಾಯಣದವತಿಯಿಂದ ಹಮ್ಮಿಕೊಂಡಿದ್ದ ರಂಗೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮದಡಿಯಲ್ಲಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಬದಲಾವಣೆ: ನಾಟಕಗಳು ನೈಜ್ಯ ಬದುಕಿನ ಪ್ರತಿರೂಪಗಳಾಗಿದ್ದು ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲದ ರಂಗಸಚ್ಚಿಕೆಯ ಮೇಲೆಯ ನೈಜ್ಯವಾಗಿ ಅಭಿವ್ಯಕ್ತಿಗೊಳ್ಳುವ ಒಂದು ಕಲಾ ಪ್ರಕಾರವಾಗಿದ್ದು ಇಂತಹ ನಾಟಕಗಳಿಂದ ಸಾಕಷ್ಟು ಸಮಾಜಿಕ ಬದಲಾವಣೆಗಳು ಉಂಟಾದ ಹಲವಾರು ಉದಾಹರಣೆಗಳಿವೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಚನ್ನೇಶ್ ಮಾತನಾಡಿ, ಯುವಪೀಳಿಗೆ ಕೇವಲ ಪುಸ್ತಕಗಳ ಹುಳುಗಳಾಗದೆ ಪಠೇತರ ಚಟುವಟಿಕೆಗಳಲ್ಲಿ ತೊಡಿಕೊಂಡಾಗ ತಂತಾನಾಗಿಯೇ ಆ ವ್ಯಕ್ತಿಯಲ್ಲಿ ಸದೃಢ ಮನಸ್ಸು, ನಾಯಕತ್ವ ಗುಣ, ಎಂತಹದ್ದೇ ಪರಿಸ್ಥಿತಿ ಎದುರಿಸುವ ಮನೋಸ್ಥೈರ್ಯ ಒಡಮೂಡುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪಠೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಜೀವನದ ದಾರಿದೀಪ: ಶಿವಮೊಗ್ಗದ ರಂಗಾಯಣದ ಅಧ್ಯಕ್ಷ ಹೂ.ನ. ಸತ್ಯ ಮಾತನಾಡಿ, ಗೊಂದಲಗಳೇ ತುಂಬಿದ ಮನುಷ್ಯನ ಜೀವನಕ್ಕೆ ರಂಗಭೂಮಿ ಚಟುವಟಿಕೆಗಳಾದ ನಾಟಕಗಳು ಜೀವನದದಾರಿ ತೋರಿಸುವ ದೀಪಗಳಾಗಿವೆ. ಆದರೆ ಆಂತಹ ನಾಟಕಗಳನ್ನು ನೋಡುವ ಆಸ್ವಾದಿಸುವ ರೀತಿಯಲ್ಲಿ ಅವುಗಳು ಅಡಕವಾಗಿರುತ್ತವೆ ಎಂದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಉಡುಪಿ. ರಂಗಕರ್ಮಿ ಎಂ. ಗಣೇಶ್ ನಿರ್ದೇಶನದ ಡಾ. ಶಿವರಾಂ ಕಾರಂತರ  ಚೋಮನ ದುಡಿ ನಾಟಕವನ್ನು ಆಭಿನಯಿಸುಯ ಮೂಲಕ ಪ್ರೇಕ್ಷರ ಮೆಚ್ಚುಗೆ ಗಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ, ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ, ಕಾಲೇಜಿನ ಸಾಂಸ್ಕೃತಿ ವಿಭಾಗದ ಸಂಚಾಲಕ ರಮೇಶ್, ಎಂ.ಎಸ್. ಚಿದಾನಂದಮೂರ್ತಿ, ಪ್ರೇಂಕುಮಾರ್, ದೇವರಾಜ್ ಪಾಟೀಲ್, ಕರಿಸಿದ್ದಪ್ಪ, ಮಲ್ಲಿಕಾರ್ಜನ ಸ್ವಾಮಿ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.