ದಾವಣಗೆರೆ

ಅಗ್ನಿ ಆಕಸ್ಮಿಕ: ಮಹಿಳೆ ದಹನ

Published On :

ಹೊನ್ನಾಳಿ: ತಾಲೂಕಿನ ಕುಂದೂರು ಗ್ರಾಮದಲ್ಲಿ ಟೈರ್ ಪಂಕ್ಚರ್ ಅಂಗಡಿಯಲ್ಲಿ ಮಂಗಳವಾರ ಸಂಜೆ ಆಕಸ್ಮಿಕಾಗಿ ಬೆಂಕಿ ಹತ್ತಿಕೊಂಡು ಅಂಗಡಿ ಮಾಲೀಕ ರಹೀಂಸಾಬ್ ಅವರ ಪತ್ನಿ ಕೌಸರ್‌ಬೀ(50) ಅವರು ಜೀವಂತ ದಹನವಾದ ದುರ್ಘಟನೆ ನಡೆದಿದೆ.
 ಕುಂದೂರು ಗ್ರಾಮದ ಮಲೆಬೆನ್ನೂರು ಸರ್ಕಲ್ ಬಳಿ ಟೈರ್ ಪಂಕ್ಚರ್ ಅಂಗಡಿಯಲ್ಲಿ ರಹೀಂ ಸಾಬ್ ಅವರು ವಾಹನವೊಂದರ ಟೈರ್‌ಗೆ ಪಂಕ್ಚರ್ ಹಾಕುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿಹತ್ತಿಕೊಂಡಿತು. ಅಂಗಡಿ ಒಳಗಡೆ ಇದ್ದ ಅಂಗಡಿ ಮಾಲೀಕ ರಹೀಂ ಸಾಬ್ ಅವರ ಪತ್ನಿ ಕೌಸರ್ ಅವರು ದಟ್ಟ ಹೊಗೆಯಿಂದಾಗಿ ಹೊರಬರಲಾಗದೇ ಬೆಂಕಿಗೆ ಆಹುತಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ
ಸ್ಥಳೀಯ ಗ್ರಾಮಪಂಚಾಯಿತಿ ಅಧ್ಯಕ್ಷ  ಈರೇಗೌಡರ್ ಹಾಗೂ ಸದಸ್ಯರುಗಳು ಅಗ್ನಿಶಾಮಕ ದಳಕ್ಕ ಸುದ್ದಿಮುಟ್ಟಿಸಿ ಬೆಂಕಿನಂದಿಸುವಲ್ಲಿ ಶ್ರಮವಹಿಸಿದ್ದು ಅಗ್ನಿಶಾಮಕ ದಳ ಕೂಡ ಸ್ಥಳಕ್ಕ ಆಗಮಿಸಿ ಬೆಂಕಿಯನ್ನು ಕೂಡಲೇ ಹತೋಟಿಗೆ ತಂದು ಹೆಚ್ಚಿನ ಅನಾಹುತವಾಗುವುದನ್ನು ತಡೆದಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬೀಗ ಒಡೆದು ಕಳ್ಳತನ
ದಾವಣಗೆರೆ: ಅನಾರೋಗ್ಯ ಪೀಡಿತರಾಗಿದ್ದ ತಾಯಿಗೆ ಚಿಕಿತ್ಸೆ ಕೊಡಿಸಲು ಮನೆ ಮಂದಿ ಆಸ್ಪತ್ರೆಗೆ ಹೋಗಿದ್ದನ್ನು ಗಮನಿಸಿ, ಮನೆಯ ಬೀಗ ಮುರಿದು, ಸುಮಾರು ರು. 22 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ತಾಲೂಕಿನ ಚಿಕ್ಕತೊಗಲೇರಿ ಗ್ರಾಮದಲ್ಲಿ ಗ್ರಾಮದಲ್ಲಿ ನಡೆದಿದೆ. ಚಿಕ್ಕತೊಗಲೇರಿ ಗ್ರಾಮದ ಬಸವರಾಜಪ್ಪ ತಮ್ಮ ತಾಯಿಯನ್ನು ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಇದನ್ನು ಗಮನಿಸಿರುವ ಕಳ್ಳರು ಸೋಮವಾರ ರಾತ್ರಿ ಮನೆ ಬೀಗ ಮುರಿದು, 10 ಗ್ರಾಂ ತೂಕದ ಬೆಳ್ಳಿ ಕಾಲು ಗೆಜ್ಜೆ, 5.9 ಗ್ರಾಂ ತೂಕದ ಓಲಿ, 2 ಗ್ರಾಂ ತೂಕದ ಕಿವಿಯ ಚೈನ್ ಸೇರಿ ರು. 22 ಸಾವಿರಕ್ಕೂ ಅಧಿಕ ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.