ದಕ್ಷಿಣ ಭಾರತದಾದ್ಯಂತ ಜನಜಾಗೃತಿ ಸಪ್ತಾಹ
ದಾವಣಗೆರೆ: ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಸಾಮಾಜಿಕ ಪರಿವರ್ತನಾ ಜನಾಂದೋಲನ ಜ.21ರಿಂದ ದಕ್ಷಿಣ ಭಾರತದಲ್ಲಿ ಏಕಕಾಲಕ್ಕೆ ಜನಜಾಗೃತಿ ಸಪ್ತಾಹ ಆರಂಭಿಸಲಾಗಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕಿ ಹಸೀನಾ, ದಕ್ಷಿಣ ಭಾರತದ ಜನಪರ ಸಂಘ- ಸಂಸ್ಥೆಗಳ ಒಕ್ಕೂಟ ಕರ್ನಾಟಕ ಸಾಮಾಜಿಕ ಪರಿವರ್ತನಾ ಜನಾಂದೋಲನ, ಆಂಧ್ರದ ಪೀಪಲ್ ವಾಯ್ಸ್ ಫಾರ್ ಚೈಲ್ಡ್ ರೈಟ್ಸ್, ತಮಿಳುನಾಡು ಸಮಕಳ್ವಿ ಇಯಕ್ಕಮ್ ಮತ್ತು ಕೇರಳದ ಜನಮುನ್ನೆಟ್ಟಮ್ ನೇತೃತ್ವದಲ್ಲಿ ಏಕಕಾಲದಲ್ಲಿ ದಕ್ಷಿಣ ಭಾರತದಲ್ಲಿ ಜನಜಾಗೃತಿ ಸಪ್ತಾಹ ಆರಂಭಿಸಲಾಗಿದೆ ಎಂದರು.
ಸಂವಾದ: ಸಪ್ತಾಹದ ಅಂಗವಾಗಿ ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಗುಲ್ಬರ್ಗಾ, ವಿಜಾಪುರ, ಬೆಳಗಾವಿ, ಬೆಂಗಳೂರು ಜಿಲ್ಲೆಗಳಲ್ಲಿ ಜ.21ರಿಂದ 30ರವರೆಗೆ ಸಿಎಂಗೆ ಮಕ್ಕಳೇ ಪತ್ರ ಬರೆದು, ಶಾಲೆ ಮುಚ್ಚದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಿದ್ದಾರೆ. ಜ.25ರಂದು ಸರ್ಕಾರಿ ಶಾಲೆ ಮುಚ್ಚುವುದರಿಂದ ಶೋಷಿತ ಸಮುದಾಯದ ಮಕ್ಕಳ ಶಿಕ್ಷಣದ ಮೇಲಾಗುವಂತಹ ದುಷ್ಪರಿಣಾಮ ಕುರಿತ ಸಂವಾದ ನಡೆಯಲಿದೆ ಎಂದು ಅವರು ತಿಳಿಸಿದರು.
ಜ.26ರಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಅರ್ಪಿಸಲಾಗುವುದು. ಜ.30ರಂದು ರಾಜ್ಯ ಮಟ್ಟದಲ್ಲಿ ಮಕ್ಕಳು ಪತ್ರಿಕಾಗೋಷ್ಠಿ ನಡೆಸಿ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಮನವಿ ಅರ್ಪಿಸುವರು. ಆಗಲೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ದಕ್ಷಿಣ ಭಾರತಾದ್ಯಂತ ಹೋರಾಟಗಳನ್ನು ಸಂಘಟನೆ ಒಕ್ಕೂಟದ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಜನಪರ ಸಂಘಟನೆಗಳ ಬಿ.ಎಂ. ಸತೀಶ, ಟಿ. ರಾಜಪ್ಪ, ಚನ್ನಬಸಪ್ಪ, ಕೆ.ಎಂ.ಎಸ್. ಷಣ್ಮುಖ, ಎಲ್. ಮಂಜುನಾಥ, ಎಸ್. ದುರುಗೇಶಷ ಎಚ್. ಹನುಮಂತಪ್ಪ, ಆರ್. ಹನುಮಂತಪ್ಪ, ಅಜಂ ರಜ್ವಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

