ದಾವಣಗೆರೆ

ಇಂದು ಎಸ್ಸೆಸ್ಸೆಂ ಪ್ರಚಾರ ಆರಂಭ

Published On :

ದಾವಣಗೆರೆ: ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮಾಜಿ ಸಚಿವ, ಪಕ್ಷದ ಯುವ ಮುಖಂಡ ಎಸ್ಸೆಸ್ ಮಲ್ಲಿಕಾರ್ಜುನ ಫೆ.28ರಂದು ಬೆಳಿಗ್ಗೆ 11ಕ್ಕೆ 5ನೇ ವಾರ್ಡ್ ಬೇತೂರು ರಸ್ತೆ ಕೊರಚರಹಟ್ಟಿಯಿಂದ ಪ್ರಚಾರವನ್ನು ಆರಂಭಿಸುವರು. ಮಧ್ಯಾಹ್ನ 1ಕ್ಕೆ 14ನೇ ವಾರ್ಡಿನ ಆನೆಕೊಂಡ, ಬಸಾಪುರ, ಮಧ್ಯಾಹ್ನ 3ಕ್ಕೆ 15ನೇ ವಾರ್ಡ್ ಭಾರತ ಕಾಲನಿ, 4.30ಕ್ಕೆ 16ನೇ ವಾರ್ಡ್ ಶೇಖರಪ್ಪ ನಗರ, ಸಂಜೆ 6ಕ್ಕೆ 23ನೇ ವಾರ್ಡ್ ಆವರಗೆರೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಎಸ್ಸೆಸ್ ಮಲ್ಲಿಕಾರ್ಜುನ ಇತರೆ ಮುಖಂಡರು, ಕಾರ್ಯಕರ್ತರು ಪ್ರಚಾರ ಕೈಗೊಳ್ಳುವರು ಎಂದು ಎಂ.ಆರ್. ಮಾಲತೇಶ ತಿಳಿಸಿದ್ದಾರೆ.
ಪವಾಡ ಬಯಲು ಕಾರ್ಯಕ್ರಮ ಇಂದು
ಲಯನ್ಸ್ ಕ್ಲಬ್, ದೇವನಗರಿ ಲಯನ್ಸ್ ಕ್ಲಬ್, ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್‌ನಿಂದ ದಾವಣಗೆರೆ ಪಿಇಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಲಿಕಲ್ ನಟರಾಜ್‌ರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ 3ಕ್ಕೆ ವಿಪ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾವು, ಡಿಡಿಪಿಐ ಡಿ.ಕೆ. ಶಿವಕುಮಾರ, ಟ್ರಸ್ಟ್ ಅಧ್ಯಕ್ಷ ಕೆ.ಎಂ. ಹೊಳಿಯಪ್ಪ, ಬಿಎಸ್ಸಿ ಪದವಿ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ, ಬಿಇಓ ಸಿದ್ದಪ್ಪ, ಮುಖ್ಯ ಶಿಕ್ಷಕ ಎಸ್. ಬಸವರಾಜ, ಎನ್.ವಿ. ಬಂಡಿವಾಡ, ವಿನುತಾ ರವಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಇಂದು
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭ ಫೆ.28ರಂದು ದಾವಮಗೆರೆ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ. ಅಂದು ಮಧ್ಯಾಹ್ನ 3ಕ್ಕೆ ಪ್ರಾಚಾರ್ಯ ಡಾ. ಎಚ್.ವಿ. ವಾಮದೇವಪ್ಪ ಅಧ್ಯಕ್ಷತೆಯಲ್ಲಿ ಎಸ್‌ಪಿಎಸ್‌ಎಂ ಸಿಬಿಎಸ್‌ಇ ವಸತಿ ಶಾಲೆ ಪ್ರಾಚಾರ್ಯ ಸಿ. ಮಂಜಪ್ಪ ವಿಜ್ಞಾನ ದಿನಾಚರಣೆ ಮಹತ್ವ ಕುರಿತು ಉಪನ್ಯಾಸ ನೀಡುವರು. ಪವಾಡಗಳ ರಹಸ್ಯ ಬಯಲು ವಿಷಯವಾಗಿ ರಾಜ್ಯ ವಿಜ್ಞಾನ ಪರಿಷತ್ ಸಂಚಾಲಕ ಎಂ. ಗುರುಸಿದ್ದಸ್ವಾಮಿ ಮಾತನಾಡುವರು. ಇಪ್ಟಾ ಕಲಾವಿದ ಐರಣಿ ಚಂದ್ರು ಪರಸರ ಗೀತೆ ಹಾಡುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.