ದಾವಣಗೆರೆ

1163 ನಾಮಪತ್ರ ಸ್ವೀಕೃತ, 131 ತಿರಸ್ಕೃತ

Published On :

ದಾವಣಗೆರೆ: ದಾವಣಗೆರೆ ಪಾಲಿಕೆ ಸೇರಿದಂತೆ ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳ 149 ವಾರ್ಡ್‌ನ ನಾಮಪತ್ರ ಪರಿಶೀಲನೆಯಲ್ಲಿ ಸೋಮವಾರ 131 ನಾಮಪತ್ರ ತಿರಸ್ಕೃತವಾಗಿ, 1,163 ನಾಮಪತ್ರಗಳು ಸ್ವೀಕೃತವಾಗಿದೆ.
  ಇದರಲ್ಲಿ ಕ್ರಮಬದ್ಧವಾಗಿ ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ 941 ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಎಸ್ಸೆಸ್ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
  ನಗರ ಪಾಲಿಕೆಯ 41 ವಾರ್ಡ್‌ಗೆ 428 ನಾಮಪತ್ರ ಸ್ವೀಕೃತವಾಗಿವೆ. 89 ನಾಮಪತ್ರ ತಿರಸ್ಕೃತವಾಗಿದೆ. 339 ಕ್ರಮಬದ್ಧವಾಗಿ ನಿರ್ದೇಶಿತ ಅಭ್ಯರ್ಥಿಗಳಾಗಿದ್ದಾರೆ. ಹರಿಹರ ನಗರಸಭೆಯ 31 ವಾರ್ಡ್‌ಗೆ 281 ನಾಮಪತ್ರ ಸ್ವೀಕೃತವಾಗಿದ್ದವು. 18 ನಾಮಪತ್ರ ತಿರಸ್ಕೃತವಾಗಿದ್ದು, 203 ಕ್ರಮಬದ್ದವಾಗಿ ನಾಮನಿರ್ದೇಶಿತರಾದ ಅಭ್ಯರ್ಥಿಗಳು ಎಂದು ಅವರು ಹೇಳಿದ್ದಾರೆ.
157 ತಿರಸ್ಕೃತ: ಹರಪನಹಳ್ಳಿ ಪುರಸಭೆ 27 ವಾರ್ಡ್‌ಗೆ 157 ನಾಮಪತ್ರ ಸ್ವೀಕೃತವಾಗಿವೆ. 8 ನಾಮಪತ್ರ ತಿರಸ್ಕೃತವಾಗಿದ್ದು, 149 ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳು.  ಹೊನ್ನಾಳಿ ಪಪಂ 16 ವಾರ್ಡ್‌ಗೆ 114 ನಾಮಪತ್ರ ಸ್ವಿಕೃತವಾಗಿವೆ. ಇಲ್ಲಿ ಯಾವುದೇ ನಾಮಪತ್ರ ತಿರಸ್ಕೃತವಾಗಿಲ್ಲ. 87 ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
  ಚನ್ನಗಿರಿ ಪಪಂ 19 ವಾರ್ಡ್‌ಗೆ 93 ನಾಮಪತ್ರ ಸ್ವೀಕೃತವಾಗಿದೆ. 3 ನಾಮಪತ್ರ ತಿರಸ್ಕೃತವಾಗಿದೆ. 90 ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳಿರುವರು. ಜಗಳೂರು ಪಪಂನ 15 ವಾರ್ಡ್‌ಗೆ 90 ನಾಮಪತ್ರ ಸ್ವೀಕೃತವಾಗಿವೆ.
  13 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 73 ಕ್ರಮಬದ್ಧ ನಾಮಪತ್ರ ನಿರ್ದೇಶಿತರಾದ ಅಭ್ಯರ್ಥಿಗಳಾಗಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.