ಚನ್ನಗಿರಿ ಪಪಂ ಚುನಾವಣೆ : 2 ನಾಮಪತ್ರ ತಿರಸ್ಕೃತ
ಚನ್ನಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಭರಾಟೆ ಮುಗಿದಿದೆ. ಸೋಮವಾರ ನಾಮಪತ್ರಗಳ ಪರಿಶೀಲನೆಯನ್ನು ಅರ್ಜಿಗಳನ್ನು ಸಲ್ಲಿಸಿದ ಉಮೇದುವಾರರ ಸಮಕ್ಷಮದಲ್ಲಿ ನಡೆಸಲಾಯಿತು.
ಎಲ್ಲಾ ರಾಜಕೀಯ ಪಕ್ಷಗಳಿಂದ ಸಲ್ಲಿಕೆಯಾದ 93 ನಾಮಪತ್ರಗಳಲ್ಲಿ 2 ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿತಾಳಿಕಟ್ಟೆ ಸೋಮಶೇಖರಪ್ಪ ತಿಳಿಸಿದ್ದಾರೆ. 12ನೇ ವಾರ್ಡ್ನಲ್ಲಿ ರುಕ್ಮಿಣಿ ಎಂಬುವರು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು.
ಈ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಅಧಿಕೃತ ಬಿ- ಫಾರಂ ನೀಡದ ಕಾರಣ ತಿರಸ್ಕರಿಸಲ್ಪಟ್ಟಿದೆ ಎಂದು ತಿಳಿಸಿದ್ದು, ಇದೇ ವಾರ್ಡ್ನ ರಜೀಯಾ ಬಾನು ಬಿಎಸ್ಆರ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದು ಪಕ್ಷದ ಅಧಿಕೃತಡಿ- ಫಾರಂ ಇಲ್ಲದ ಕಾರಣದಿಂದ ಈ ಅಭ್ಯರ್ಥಿಯನ್ನು ಪಕ್ಷೇತರರನ್ನಾಗಿ ಪರಿಗಣಿಸಲಾಗಿದೆ.
15ನೇ ವಾರ್ಡ್ನಲ್ಲಿ ಕೆಜೆಪಿ ಪಕ್ಷದಿಂದ ಪಾರಮ್ಮ ಮತ್ತು ಪುಷ್ಪಲತಾ ಜಗದೀಶ್ ಇವರಿಬ್ಬರಿಗೂ ಪಕ್ಷದ ಡಿ -ಫಾರಂ ಸಿಕ್ಕಿದೆ. ಇವರಲ್ಲಿ ಪಾರಮ್ಮ ಎಂಬವರ ನಾಮಪತ್ರದಲ್ಲಿ ಅಭ್ಯರ್ಥಿಯನ್ನು ಸೂಚಿಸುವ ಸೂಚಕರ ಮತದಾರರ ಪಟ್ಟಿಯ ಕ್ರಮಸಂಖ್ಯೆ ನಮೂದಿಸದ ಕಾರಣ ಈ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನುಳಿದಂತೆ 91 ಜನರ ನಾಮಪತ್ರಗಳು ಕ್ರಮಬದ್ಧವಾಗಿದೆ. ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಇಚ್ಛಿಸುವವರು ಫೆ.26ರ ಬೆಳಿಗ್ಗೆ 11 ಗಂಟೆಯಿಂದ 27ರ ಮಧ್ಯಾಹ್ನ 3 ಗಂಟೆವರೆಗೆ ಕಾಲಾವಕಾಶವಿದೆ ಎಂದು ಈ ಸಂದರ್ಭದಲ್ಲಿ ಮತ್ತೊಬ್ಬ ಚುನಾವಣಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

