ನಾಮಪತ್ರ ಸಲ್ಲಿಕೆಗೆ ಸಾಲು
ಚನ್ನಗಿರಿ: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆ.23, ಶನಿವಾರ ಕೊನೆಯ ದಿನವಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯ ಅರ್ಜಿಗಳನ್ನು ಸಲ್ಲಿಸಿದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕೆಜೆಪಿ, ಬಿಎಸ್ಆರ್ ಪಕ್ಷಗಳಿಂದ ಮತ್ತು ಇನ್ನು ಕೆಲವರು ಪಕ್ಷೇತರರಾಗಿ ತಂಡೋಪ ತಂಡವಾಗಿ ಬಂದು ಅರ್ಜಿ ಸಲ್ಲಿಸಿದರು.
ಫೆ.16ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ಅಂತಿಮ ದಿನವಾದ ಶನಿವಾರದಂದು ಸಲ್ಲಿಕೆಯಾದ ಅರ್ಜಿಗಳು ಕಾಂಗ್ರೆಸ್ ಪಕ್ಷದಿಂದ 19 ಅರ್ಜಿಗಳು ಸಲ್ಲಿಕೆಯಾದರೆ, ಜೆಡಿಎಸ್ ನಿಂದ 3, ಕೆಜೆಪಿಯಿಂದ 13, ಬಿಜೆಪಿಯಿಂದ 8, ಪಕ್ಷೇತರರಾಗಿ 6 ಜನ ನಾಮಪತ್ರ ಸಲ್ಲಿಸಿದರು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರದಂದೆ ಒಟ್ಟು 60 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಳೆದ ಎರಡು- ಮೂರು ದಿನಗಳ ಹಿಂದಿನಿಂದ 33 ಅರ್ಜಿಗಳು ಸೇರಿದಂತೆ ಒಟ್ಟು 93 ಅರ್ಜಿಗಳು ಸಲ್ಲಿಕೆಯಾದಂತಾಗಿದೆ.
ಫೆ.25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್ಸು ಪಡೆಯಲು ಫೆ.27 ಕೊನೆಯ ದಿನವಾಗಿದ್ದು, ಆ ನಂತರದಲ್ಲಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ತಹಸೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

