ದಾವಣಗೆರೆ

ಚುನಾವಣೆಗೆ 1071 ನಾಮಪತ್ರ

Published On :

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಆರೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದ ಶನಿವಾರದವರೆಗೆ ಒಟ್ಟು 1071 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪಾಲಿಕೆಯ 41 ವಾರ್ಡ್‌ಗೆ ಒಟ್ಟು ಶನಿವಾರದವರೆಗೆ 495 ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್ 116, ಬಿಜೆಪಿ 88, ಜೆಡಿಎಸ್ 44, ಸಿಪಿಐ 3, ಎನ್‌ಸಿಪಿಯಿಂದ 1, ಸ್ವತಂತ್ರ 236 (ಬಿಎಸ್ಸಾರ್ ಕಾಂಗ್ರೆಸ್, ಬಿಜೆಪಿ ಸೇರಿ), ಜೆಡಿಯು 7 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹರಿಹರ ನಗರಸಭೆಯ 31 ವಾರ್ಡ್‌ಗೆ 279 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕಾಂಗ್ರೆಸ್ 66, ಬಿಜೆಪಿ 28, ಜೆಡಿಯು 49, ಸ್ವತಂತ್ರ 67, ಬಿಎಸ್ಸಾರ್ ಕಾಂಗ್ರೆಸ್ 4, ಕೆಜೆಪಿ 40, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ 2 ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ. ಹೊನ್ನಾಳಿ 16 ವಾರ್ಡ್‌ಗೆ 114 ನಾಮಪತ್ರಗಳನ್ನು 101 ಅಭ್ಯರ್ಥಿಗಳು ಸಲ್ಲಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ 24, ಜೆಡಿಎಸ್ 21, ಸಿಪಿಐ 13, ಸ್ವತಂತ್ರ 35, ಬಿಎಸ್ಸಾರ್ 12, ಕೆಜೆಪಿ 9 ನಾಮಪತ್ರ ಸಲ್ಲಿಸಲ್ಪಟ್ಟಿವೆ ಎಂದು ಜಿಲ್ಲಾಡಳಿತ ಹೇಳಿದೆ.
93 ನಾಮಪತ್ರ: ಚನ್ನಗಿರಿ ಪಪಂ 19 ವಾರ್ಡ್‌ಗೆ 93 ನಾಮಪತ್ರಗಳನ್ನು 92 ಮಂದಿ ಸಲ್ಲಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ 22, ಬಿಜೆಪಿ 12, ಜೆಡಿಎಸ್ 19, ಸ್ವತಂತ್ರ 8, ಬಿಎಸ್ಸಾರ್ ಕಾಂಗ್ರೆಸ್ 11, ಕೆಜೆಪಿ 21 ನಾಮಪತ್ರ ಸಲ್ಲಿಕೆಯಾಗಿವೆ. ಜಗಳೂರು ಪಪಂ 15 ವಾರ್ಡ್‌ಗೆ 88 ಜನ 90 ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ 28, ಬಿಜೆಪಿ 18, ಜೆಡಿಎಸ್ 20, ಸ್ವತಂತ್ರ 13, ಬಿಎಸ್ಸಾರ್ ಕಾಂಗ್ರೆಸ್ 10, ಕೆಜೆಪಿಯಿಂದ 8 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಡಳಿತ ವಿವರಿಸಿದೆ.
ಜಿಲ್ಲೆಯ 149 ವಾರ್ಡ್‌ಗಳಿಗೆ ಕಾಂಗ್ರೆಸ್ 249, ಬಿಜೆಪಿ 167, ಜೆಡಿಎಸ್ 145, ಸಿಪಿಐ 3, ಎನ್‌ಸಿಪಿ 1, ಸ್ವತಂತ್ರ 359(ದಾವಣಗೆರೆ ಪಾಲಿಕೆ ವ್ಯಾಪ್ತಿ ಬಿಎಸ್ಸಾರ್ ಕಾಂಗ್ರೆಸ್, ಕೆಜೆಪಿ ಸೇರಿ), ಜೆಡಿಯು 11, ಬಿಎಸ್ಸಾರ್ ಕಾಂಗ್ರೆಸ್ 56, ಕೆಜೆಪಿ 78, ವೆಲ್‌ಫೇರ್ 2 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.