ದಾವಣಗೆರೆ

ಸನತ್‌ಗೆ ವರದಿಗಾರರ ಕೂಟದ ಶ್ರದ್ಧಾಂಜಲಿ

Published On :

ದಾವಣಗೆರೆ: ಕಾರು ಮತ್ತು ಬೈಕ್ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದ ಟಿವಿ 9 ವರದಿಗಾರ ಸನತ್ ರಾವ್‌ಗೆ ಜಿಲ್ಲಾ ವರದಿಗಾರರ ಕೂಟದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗರದ ವರದಿಗಾರರ ಕೂಟದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸನತ್ ರಾವ್ ಗೌರವಾರ್ಥ 2 ನಿಮಿಷ ಮೌನ ಆಚರಿಸಲಾಯಿತು. ಸನತ್ ಭಾವಚಿತ್ರಕ್ಕೆ ಹಿರಿಯ ಪತ್ರಕರ್ತರು, ಕ್ಯಾಮರಾಮನ್‌ಗಳು ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೃತನ ಕುಟುಂಬಕ್ಕೆ ಭಗವಂತನು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಇದೇ ವೇಳೆ ಸನತ್ ರಾವ್ ಎಲ್ಲರೊಂದಿಗೂ ಹೊಂದಿದ್ದ ಬಾಂಧವ್ಯ, ಸ್ನೇಹ ಮನೋಭಾವ, ವೃತ್ತಿಯ ಬಗ್ಗೆ ಹೊಂದಿದ್ದ ಆಸಕ್ತಿ, ಅತ್ಯಲ್ಪ ಅವದಿಯಲ್ಲೇ ಗಮನ ಸೆಳೆಯುವಂತೆ ಕೆಲಸ ಮಾಡಿದ್ದನ್ನು ಸ್ಮರಿಸಲಾಯಿತು. ನಿನ್ನೆ ಮಧ್ಯಾಹ್ನದವರೆಗೂ ತಮ್ಮೊಡನೆ ಆತ ಕಳೆದಿದ್ದ ಕ್ಷಣಗಳನ್ನು ಅನೇಕರು ಇದೇ ಸಂದರ್ಭದಲ್ಲಿ ಮೆಲುಕು ಹಾಕಿದರು.
ಕೂಟದ ಮಾಜಿ ಅಧ್ಯಕ್ಷರಾದ ಕೆ. ಏಕಾಂತಪ್ಪ, ಚಂದ್ರಹಾಸ ಹಿರೇಮಳಲಿ, ಮಾಜಿ ಉಪಾಧ್ಯಕ್ಷರಾದ ಎಂ. ಶಶಿಕುಮಾರ, ನಟರಾಜ, ಜಿ.ಎಂ.ಆರ್. ಆರಾಧ್ಯ, ತಾರಾನಾಥ, ಸಿದ್ದಯ್ಯ ಒಡೆಯರ್, ಮಂಜುನಾಥ ಕಾಡಜ್ಜಿ, ನಾಗರಾಜ ಬಡದಾಳ್, ಎಂ.ವೈ. ಸತೀಶ, ವಿವೇಕ್ ಬದ್ದಿ, ದೇವಿಕಾ ಸುನಿಲ್, ಆರ್. ರವಿಬಾಬು, ಸಿದ್ದೇಶ, ರಫೀಕ್, ಶರತ್ ಹೆಗ್ಡೆ, ಶ್ರೀಕಾಂತ, ಪ್ರಮೋದ, ಅಶೋಕ, ರವಿ, ರಾಜೇಶ, ಸುರೇಶ ಕೋಲ್ಕುಂಟೆ, ಅರ್ಜುನ್, ಪ್ರಕಾಶ, ವಿನಾಯಕ ಪೂಜಾರ್, ಭಾಸ್ಕರ ಸೇರಿದಂತೆ ಅನೇಕ ಹಿರಿಯ, ಕಿರಿಯ ಪತ್ರಕರ್ತರು, ಕ್ಯಾಮರಾಮನ್, ಸಿಬ್ಬಂದಿ ವರ್ಗದವರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.