ದಾವಣಗೆರೆ

ನಾಮಪತ್ರ ಸಲ್ಲಿಸಲು ಇಂದುಅಂತಿಮ ದಿನ

Published On :

ದಾವಣಗೆರೆ:  ದಾವಣಗೆರೆ ಪಾಲಿಕೆ ಸೇರಿದಂತೆ ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 149 ವಾರ್ಡ್‌ಗಳಿಗೆ ಶುಕ್ರವಾರ 381 ಅಭ್ಯರ್ಥಿಗಳಿಂದ ಒಟ್ಟು 413 ನಾಮಪತ್ರಗಳು ಸಲ್ಲಿಕೆಯಾಗಿವೆ.
ಇದರಲ್ಲಿ ಕಾಂಗ್ರೆಸ್ ಪಕ್ಷದಿಂದ ಒಟ್ಟು 106, ಬಿಜೆಪಿಯಿಂದ 97, ಜೆಡಿಎಸ್ 71, ಸಿಪಿಐ 2, ಸ್ವತಂತ್ರ 92, ಜೆಡಿಯು 42, ಬಿಎಸ್ಸಾರ್ ಕಾಂಗ್ರೆಸ್ 20, ಕೆಜೆಪಿ 22, ವೆಲ್‌ಫೇರ್ ಪಾರ್ಟ್ ವತಿಯಿಂದ 1 ಸೇರಿದಂತೆ ಒತ್ತು 413 ನಾಮಪತ್ರ ಸಲ್ಲಿಕೆಯಾಗಿರುವುದಾಗಿ ಅಪರ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ ತಿಳಿಸಿದ್ದಾರೆ.
 ದಾವಣಗೆರೆ ಪಾಲಿಕೆಗೆ ಒಟ್ಟು 164 ನಾಮಪತ್ರ ಸಲ್ಲಿಕೆಯಾಗಿವೆ. ಈ ಪೈಕಿ ಕಾಂಗ್ರೆಸ್ 45, ಬಿಜೆಪಿ 52, ಜೆಡಿಎಸ್ 19, ಸಿಪಿಐ 1, ಸ್ವತಂತ್ರ 45, ಜೆಡಿಯು 1 ನಾಮಪತ್ರ ಸಲ್ಲಿಕೆಯಾಗಿವೆ. ಹರಿಹರ ನಗರಸಭೆಗೆ 94 ಜನರಿಂದ 118 ನಾಮಪತ್ರ ಸಲ್ಲಿಕೆಯಾಗಿವೆ. ಇದರಲ್ಲಿ ಕಾಂಗ್ರೆಸ್ 35, ಬಿಜೆಪಿ 11, ಜೆಡಿಎಸ್ 20, ಸಿಪಿಐ 1, ಸ್ವತಂತ್ರ 24, ಕೆಜೆಪಿ 13, ಬಿಎಸ್ಸಾರ್ ಕಾಂಗ್ರೆಸ್ 13, ವೆಲ್‌ಫೇರ್ ಪಾರ್ಟಿ 1 ನಾಮಪತ್ರ ಸಲ್ಲಿಕೆಯಾಗಿರುವುದಾಗಿ ಅವರು ಹೇಳಿದ್ದಾರೆ.
ಹರಪನಹಳ್ಳಿ: ಹರಪನಹಳ್ಳಿ ಪುರಸಭೆಗೆ 24 ಜನರಿಂದ 26 ನಾಮಪತ್ರ ಸಲ್ಲಿಕೆಯಾಗಿವೆ. ಇದರಲ್ಲಿ ಬಿಜೆಪಿ 7, ಜೆಡಿಎಸ್ 5, ಸ್ವತಂತ್ರ 6, ಕೆಜೆಪಿ 2, ಬಿಎಸ್ಸಾರ್ ಕಾಂಗ್ರೆಸ್ 6 ನಾಮಪತ್ರ ಸಲ್ಲಿಕೆಯಾಗಿವೆ. ಹೊನ್ನಾಳಿ ಪಪಂಗೆ 44 ಜನರಿಂದ 50 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್ 13, ಬಿಜೆಪಿ 17, ಜೆಡಿಎಸ್ 7, ಸ್ವತಂತ್ರ 12, ಬಿಎಸ್ಸಾರ್ ಕಾಂಗ್ರೆಸ್ 1 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಚನ್ನಗಿರಿ:  ಚನ್ನಗಿರಿ ಪಪಂಗೆ 27 ನಾಮಪತ್ರ ಸಲ್ಲಿಕೆಯಾಗಿದ್ದು, ಬಿಜೆಪಿ 4, ಜೆಡಿಎಸ್ 16, ಸ್ವತಂತ್ರ 2, ಕೆಜೆಪಿಯಿಂದ 5 ನಾಮಪತ್ರ ಸಲ್ಲಿಕೆಯಾಗಿವೆ. ಜಗಳೂರು ಪಪಂಗೆ 28 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4, ಸ್ವತಂತ್ರ 3, ಕೆಜೆಪಿ 2 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
 ನಾಮಪತ್ರ ಸಲ್ಲಿಸರು ಅಂತಿಮ ದಿನವಾದ ಫೆ.23ರಂದು ಜಿಲ್ಲೆಯ ಆರೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಹುತೇಕ ಪಕ್ಷಗಳು ಅಂತಿಮವಾಗಿ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಆಕಾಂಕ್ಷಿಗಳು ಮುಗಿ ಬೀಳುವ ಸಾಧ್ಯತೆಗಳೇ ಹೆಚ್ಚಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.