ಇಂದು, ಬಚಪನ್ ವಾರ್ಷಿಕೋತ್ಸವ
ದಾವಣಗೆರೆ: ದಾವಣಗೆರೆಯ ಆಲೂರು ಎಜುಕೇಷನಲ್ ಟ್ರಸ್ಟ್ನ ಬಚಪನ್ ಕಿರಿಯ ಪ್ರಾಥಮಿಕ ಶಾಲೆಯ 3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಫೆ.23ರಂದು ನಗರದ ಬಾಪೂಜಿ ಸಭಾಂಗಣದಲ್ಲಿ ನಡೆಯಲಿದೆ. ಅಂದು ಸಂಜೆ 5ಕ್ಕೆ ಸಂಸ್ಥೆ ಅಧ್ಯಕ್ಷೆ ರಾಜೇಶ್ವರಿ ಸಿ. ಆಲೂರು ಅಧ್ಯಕ್ಷತೆಯಲ್ಲಿ ಡಿಡಿಪಿಐ ಡಿ.ಕೆ. ಶಿವಕುಮಾರ ಸಮಾರಂಭ ಉದ್ಘಾಟಿಸಲಿದ್ದು, ಡಯಟ್ ಕಾಲೇಜು ಬೋಧಕಿ ಪುಷ್ಪಲತಾ, ಟ್ರಸ್ಟ್ ಕಾರ್ಯದರ್ಶಿ ಮಧುಕೇಶ ಆಲೂರು, ಪ್ರಾಂಶುಪಾಲರಾದ ವಿದ್ಯಾ ಆರ್. ಸೊರಟೂರು ಪಾಲ್ಗೊಳ್ಳುವರು. ನಂತರ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸನತ್ಗೆ ಸಂತಾಪ
ರಸ್ತೆ ಅಪಘಾತದಲ್ಲಿ ಟಿವಿ9 ದಾವಣಗೆರೆ ವರದಿಗಾರ ಸನತ್ ರಾವ್ ನಿಧನರಾದ ಹಿನ್ನೆಲೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ತೀವ್ರ ಸಂತಾಪ ಸೂಚಿಸಿದೆ. ಯುವ ಉತ್ಸಾಹಿ ಪತ್ರಕರ್ತ ಸನತ್ ಅಗಲಿಕೆಯಿಂದಾಗಿ ಯುವ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ ಎಂದು ಪಕ್ಷದಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ತಿಳಿಸಲಾಯಿತು. ಮೃತನ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬಕ್ಕೆ ದು-ಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಜಿಲ್ಲಾಧ್ಯಕ್ಷ ಬಿ.ಎನ್. ಇರ್ಷಾದ್ ಅಹಮ್ಮದ್, ಉಪಾಧ್ಯಕ್ಷ ಎನ್. ಶ್ರೀನಿವಾಸನಾಯ್ಕ, ಬೆ.ನಾ. ಅಣ್ಣಪ್ಪ ಇತರರು ಪ್ರಾರ್ಥಿಸಿದರು.
ಸೋಮೇಶ್ವರ ಉತ್ಸವ ನಾಳೆ
ದಾವಣಗೆರೆ ತಾ. ಗೋಣಿವಾಡ ಕ್ರಾಸ್ನ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯದ ಪ್ರಥಮ ಸಾಂಸ್ಕೃತಿಕ ಹಬ್ಬ ಸೋಮೇಶ್ವರೋತ್ಸವ- 2013 ಫೆ.24ರಂದು ಶಾಲಾವರಣದಲ್ಲಿ ನಡೆಯಲಿದೆ. ಅಂದು ಸಂಜೆ 5.45ಕ್ಕೆ ಅಧ್ಯಕ್ಷ ಎಚ್.ಆರ್. ಅಶೋಕ ರೆಡ್ಡಿ ಅಧ್ಯಕ್ಷತೆಯಲ್ಲಿ ಮೈಸೂರು ಉಪನ್ಯಾಸಕ ಪ್ರೊ. ಎಂ. ಕೃಷ್ಣೇಗೌಡ ಸಮಾರಂಭ ಉದ್ಘಾಟಿಸಲಿದ್ದು, ಎಂ. ಬಸವರಾಜನಾಯ್ಕ, ಡಿ.ಕೆ. ಶಿವಕುಮಾರ, ಉಮೇಶ ಶೆಟ್ಟಿ, ಪಿ.ಎನ್. ಪರಮೇಶ್ವರಪ್ಪ, ರವಿ ಆರುಂಡಿ ಪಾಲ್ಗೊಳ್ಳುವರು. ಪ್ರಗತಿಪರ ರೈತರಾದ ಕುಕ್ಕವಾಡ ಚಂದ್ರಶೇಖರ, ಕಾರಿಗನೂರು ಟಿ.ಆರ್. ಶರಣಪ್ಪ, ಕೋಗಲೂರು ಶರಣಪ್ಪ, ಕೆಂಪಿನಹಳ್ಳಿ ಲೋಕೇಶ್ವರಪ್ಪ, ಕತ್ತಲಗೆರೆ ಕೆ. ಶಿವಲಿಂಗಪ್ಪಗೆ ಸನ್ಮಾನಿಸುವುದಾಗಿ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ಸುರೇಶ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

