ದಾವಣಗೆರೆ

ನಾಮಪತ್ರ ಸಲ್ಲಿಕೆ

Published On :

ಚನ್ನಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಮಾರ್ಚ್ 7ರಂದು ನಡೆಯುವ ಚುನಾವಣೆಗೆ ಗುರುವಾರ ನಾಲ್ಕು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಲ್ಕನೇ ವಾರ್ಡ್‌ನಿಂದ ಕೆಜೆಪಿ ಪಕ್ಷದಿಂದ ಸ್ಪರ್ಧೆ ಬಯಸಿ ಶಬ್ಬೀರ್ ಖಾನ್, ಐದನೇ ವಾರ್ಡ್‌ನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಬಯಸಿ ಶ್ರೀನಿವಾಸ ರಾವ್, ಏಳನೇ ವಾರ್ಡ್‌ನಿಂದ ಕೆಜೆಪಿ ಪಕ್ಷದಿಂದ ಸ್ಪರ್ಧೆ ಬಯಸಿ ಎ.ಎಂ. ಶಿವಲಿಂಗಪ್ಪ, 12ನೇ ವಾರ್ಡ್ ನಿಂದಾ ಕಾಂಗ್ರೆಸ್‌ನಿಂದ ಎಸ್. ರುಕ್ಮಿಣಿ ಇವರು ನಾಮಪತ್ರಗಳನ್ನು ಸಲ್ಲಿಸಿದ್ದಾರೆಂದು ಚುನಾವಣಾಧಿಕಾರಿಗಳಾದ ಸೋಮಶೇಖರಪ್ಪ, ಪ್ರಕಾಶ್ ತಿಳಿಸಿದ್ದಾರೆ.
ಹಾರಕನಾಳ ಗ್ರಾಪಂ ಚುನಾವಣೆ ವಿಜೇತ ಅಭ್ಯರ್ಥಿಗಳು
ಹರಪನಹಳ್ಳಿ: ಹಾರಕನಾಳ ಗ್ರಾಪಂನ 16 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ವಿಜೇತರ ವಿವರ ಈ ಕೆಳಗಿನಂತಿದೆ.  
ಪಂಚಾಯ್ತಿಯ 18 ಸ್ಥಾನಗಳಲ್ಲಿ ಹುಲಿಕಟ್ಟೆ ಗ್ರಾಮದ ಸಿದ್ದವ್ವ ಹಾಗೂ ಈಶಾಪುರ ಗ್ರಾಮದ ಚೂರಿ ಬಸವರಾಜ  ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ 16 ಸದಸ್ಯ ಸ್ಥಾನಗಳಿಗೆ ಚುನಾವಣೆ ಜರುಗಿತು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಮತ ಎಣಿಕೆಯಲ್ಲಿ ಯುವಕರ ಷರತ್ತಿಗೆ ಬದ್ಧವಾಗಿ  ಕರಾರು ಪತ್ರಕ್ಕೆ ಸಹಿ ಹಾಕಿ ಚುನಾವಣೆ ಎದುರಿಸಿದ ಚೆನ್ನಹಳ್ಳಿ ಗ್ರಾಮದ 8 ಅಭ್ಯರ್ಥಿಗಳಲ್ಲಿ ಎಸ್ಸಿ ಮೀಸಲು  ವಾರ್ಡ್‌ನಿಂದ ಭೋಜನಾಯ್ಕ ಹಾಗೂ ಸಾಮಾನ್ಯ ಮಹಿಳೆ ಮೀಸಲಾಗಿದ್ದ ವಾರ್ಡ್‌ನಿಂದ ದೇವಿಬಾಯಿ  ಅವರು ಆಯ್ಕೆಯಾಗಿದ್ದಾರೆ.  
ಹಾರಕನಾಳ ಗ್ರಾಮದಿಂದ ನೀಲಮ್ಮ (ಪ.ಜಾ.ಮಹಿಳೆ), ರಮೇಶ (ಪ.ಜಾ), ಕೊಟ್ರಬಸಮ್ಮ (ಸಾಮಾನ್ಯ ಮಹಿಳೆ), ವೀರಭದ್ರಪ್ಪ (ಸಾಮಾನ್ಯ), ಮೇಗಳ ತಾಂಡದಿಂದ ನಿರ್ಮಲಾ (ಪ.ಜಾ.ಮಹಿಳೆ), ದೇವಿಬಾಯಿ(ಪ.ಜಾ.), ಲಕ್ಷ್ಮಿಬಾಯಿ (ಸಾಮಾನ್ಯ), ಹುಲಿಕಟ್ಟೆ ಗ್ರಾಮದಿಂದ ಶಶಿಕಲಾ (ಪ.ಜಾ.ಮಹಿಳೆ), ರತ್ನಮ್ಮ (ಸಾಮಾನ್ಯ ಮಹಿಳೆ), ಲಕ್ಕೇಶ (ಸಾಮಾನ್ಯ), ಚೌಡಮ್ಮ (ಪ.ಜಾ.ಮಹಿಳೆ), ಪಕ್ಕೀರಪ್ಪ(ಪ.ಜಾ), ಕನ್ನನಾಯಕನಹಳ್ಳಿ ಗ್ರಾಮದಿಂದ ಭಾಗ್ಯ ಕೆ. (ಪ.ಜಾ.ಮಹಿಳೆ), ಶೇಖರ ನಾಯ್ಕ (ಸಾಮಾನ್ಯ) ಅವರು ಮತ ಎಣಿಕೆಯಲ್ಲಿ  ಬಹುಮತ ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತೋಟಗಾರಿಕಾ ಇಲಾಖೆ  ಸಹಾಯಕ ನಿರ್ದೇಶಕ ರಾಜೇಂದ್ರ  ಘೋಷಿಸಿದ್ದಾರೆ.  
ಮತ ಎಣಿಕೆ ಕಾರ್ಯದ ಸಂದರ್ಭ ಡಿವೈಎಸ್ಪಿ ರಾಧಾಮಣಿ, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‌ಐ ವಸಂತ  ಅಸೋದೆ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.