ದಾವಣಗೆರೆ

ನೀತಿ ಸಂಹಿತೆ: ಹರಾಜು ಮುಂದಕ್ಕೆ

Published On :

ದಾವಣಗೆರೆ: ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 21 ಮತ್ತು 22ರಂದು ದಾವಣಗೆರೆಯಲ್ಲಿ ನಡೆಸಲುದ್ದೇಶಿಸಿದ್ದ ಡಿ. ದೇವರಾಜ ಅರಸ್ ಬಡಾವಣೆಯ 2ನೇ ಹಂತದ ಬಿ ಬ್ಲಾಕ್‌ನ ಮಧ್ಯಂತರ ವಸತಿ ಬಿಡಿ ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ದೂಡಾ ಆಯುಕ್ತ ಜಯಪ್ರಕಾಶ  ನಾರಾಯಣ ಮನವಿ ಮಾಡಿದ್ದಾರೆ.
ಮರಿಕುಂಟೆ ಗ್ರಾಮ ಲೆಕ್ಕಿಗ ಅಮಾನತು
ಜಗಳೂರು ತಾ. ಮರಿಕುಂಟೆ ಫಿರ್ಕಾದ ಗ್ರಾಮ ಲೆಕ್ಕಿಗ ಬಿ. ಪರಮೇಶ ಕಳೆದೊಂದು ತಿಂಗಳಿನಿಂದ ಅನಧಿಕೃತವಾಗಿ ಕೆಲಸಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಆತನನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಶಿಸ್ತು ಪ್ರಾಧಿಕಾರಿ, ಜಿಲ್ಲಾಧಿಕಾರಿ ಎಸ್ಸೆಸ್  ಪಟ್ಟಣಶೆಟ್ಟಿ ಆದೇಶ ಹೊರಡಿಸಿದ್ದಾರೆ. ಗ್ರಾಮ ಲೆಕ್ಕಿಗ ಫಿರ್ಕಾಕ್ಕೆ ಸಂಬಂಧಿಸಿದ ಗ್ರಾಮದಲ್ಲಿ ವಾಸಿಸುತ್ತಿಲ್ಲ. ಇದರಿಂದ ಜನತೆಗೆ ಹಾಗೂ ಸರ್ಕಾರಿ ಕೆಲಸಕ್ಕೆ ತೊಂದರೆಯಾಗುತ್ತಿದೆ. ಪದೇಪದೇ ಸರ್ಕಾರಿ ಕೆಲಸಕ್ಕೆ ಗೈರು ಹಾಜರಾಗುವ ಪ್ರವೃತ್ತಿಯನ್ನು ಆತ ಬೆಳೆಸಿಕೊಂಡಿದ್ದರು. ಕರ್ತವ್ಯಕ್ಕೆ ಹಾಜರಾಗಲು ಅಂಚೆ ನೋಟೀಸ್ ಕಳುಹಿಸಿದ್ದರೂ ಕರ್ತವ್ಯಕ್ಕೆ ಹಾಜರಾಗದ್ದರಿಂದಾಗಿ ಆ ನೌಕರನ ಮೇಲೆ ಶಿಸ್ತು ಕ್ರಮವನ್ನು ನಿಯಮಾನುಸಾರ ಸೇವೆಯಿಂದ ನಿಲಂಬನೆಯಲ್ಲಿ ಇಡಲಾಗಿದೆ.ನೌಕರನು ನಿಲಂಬನಾ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ನೌಕರನಿಗೆ ನಿಲಂಬನಾ ಅವಧಿಯಲ್ಲಿ ಕೆಸಿಎಸ್‌ಆರ್ ನಿಯಮ 98ರಡಿ ಜೀವನಾಧಾರ ಭತ್ಯೆ ಸಂದಾಯ ಮಾಡಲು ಅವರು ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.