ದಾವಣಗೆರೆ

ಚುನಾವಣಾ ಶಿರಸ್ತೇದಾರ ಅಮಾನತು

Published On :

ಹರಿಹರ ತಾಲೂಕು ಕಚೇರಿ ಚುನಾವಣಾ ಶಿರಸ್ತೇದಾರ ಕೆ.ಎಲ್. ನಾಯ್ಕರ್ ಫೆ.6ರಿಂದ 8ರವರೆಗೆ ಹಾಗೂ ಫೆ.14ರಂದು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದು ನಂತರದ ದಿನಗಳಲ್ಲಿ ಕಚೇರಿಗೆ ಹಾಜರಾಗಿ,   ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ, ಸ್ವಲ್ಪ ಹೊತ್ತು ಕಚೇರಿಯಲ್ಲಿದ್ದು ನಂತರ ಹೊರ ಹೋದವರು ಕಚೇರಿಗೆ ಹಿಂದಿರುಗಾಗಿ ಬಂದಿಲ್ಲ. ಕಚೇರಿ ಅವಧಿಯಲ್ಲಿ ಪಾನಮತ್ತರಾಗಿ ಕರ್ತವ್ಯಕ್ಕೆ ಹಾಜರಾಗುವ ಪರಿಪಾಠ ಬೆಳೆಸಿಕೊಂಡ ಹಿನ್ನೆಲೆಯಲ್ಲಿ ಆ ಅಧಿಕಾರಿಯನ್ನು ನಿಲಂಬನೆಯಲ್ಲಿಟ್ಟು ಜಿಲ್ಲಾ ಶಿಸ್ತು ಪ್ರಾಧಿಕಾರಿ ಜಿಲ್ಲಾಧಿಕಾರಿ  ಎಸ್ಸೆಸ್ ಪಟ್ಟಣಶೆಟ್ಟಿ ಆದೇಶ ಹೊರಡಿಸಿದ್ದಾರೆ. ಹರಿಹರ ತಾಲೂಕು ಕಚೇರಿಯ ಚುನಾವಣಾ ತಹಸೀಲ್ದಾರ್  ನಾಯ್ಕರ್‌ರನ್ನು ಸೇವೆಯಿಂದ ನಿಲಂಬನೆಯಲ್ಲಿಡಲಾಗಿದೆ. ನಿಲಂಬನಾ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ  ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ಆ ನೌಕರನಿಗೆ ನಿಲಂಬನಾ ಅವಧಿಯಲ್ಲಿ ಕೆಸಿಎಸ್‌ಆರ್  ನಿಯಮ 98ರ ಅಡಿಯಲ್ಲಿ ಜೀವನಾಧಾರ ಭತ್ಯೆ ಸಂದಾಯ ಮಾಡುವಂತೆ ಜಿಲ್ಲಾ ಶಿಸ್ತು ಪ್ರಾಧಿಕಾರಿ, ಜಿಲ್ಲಾಧಿಕಾರಿ ಪಟ್ಟಣಶೆಟ್ಟಿ ಆದೇಶ ಹೊರಡಿಸಿದ್ದಾರೆ.


ನಾಳೆ ಕೆಜೆಪಿ ಸಮಾವೇಶ
ದಾವಣಗೆರೆ: ಮಹಾ ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕೆಜೆಪಿ ಕಾರ್ಯಕರ್ತರು, ಅಭಿಮಾನಿಗಳ ಸಮಾವೇಶ ಫೆ.21ರಂದು ನಗರದ ಹದಡಿ ರಸ್ತೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಜೆಪಿ ಜಿಲ್ಲಾ ಸಂಚಾಲಕ ಬಿ.ಎಸ್. ಜಗದೀಶ, ಅಂದು ಬೆಳಗ್ಗೆ 11ಕ್ಕೆ ಮಾಜಿ ಸಿಎಂ, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದರು.
ಮಾಜಿ ಸಚಿವರಾದ ಸಿ.ಎಂ. ಉದಾಸಿ, ಶೋಭಾ ಕರಂದ್ಲಾಜೆ, ಕೇಂದ್ರದ ಮಾಜಿ ಸಚಿವ ಧನಂಜಯಕುಮಾರ, ರಾಜ್ಯ ಮುಖಂಡರಾದ ರಾಜೇಂದ್ರ ಗೋಖಲೆ, ಎಂ.ಡಿ. ಲಕ್ಷ್ಮಿನಾರಾಯಣ, ಮಾಜಿ ಶಾಸಕ ಬಿ.ಪಿ. ಹರೀಶ ಸೇರಿದಂತೆ ಅನೇಕ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಪ್ರತಿಯೊಂದು ವಾರ್ಡ್‌ಗಳಲ್ಲೂ ಕಣಕ್ಕಿಳಿಸುವ ಜೊತೆಗೆ ಜನತೆಯ ನಿರೀಕ್ಷೆಯನ್ನು ಹೊಸ ಬದಲಾವಣೆಯನ್ನು ತರುವ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು. ಈಗಾಗಲೇ ವಾರ್ಡ್ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಎಂದು ಹೇಳಿದರು.
ಕೆಜೆಪಿಗೆ ಚಿಹ್ನೆಯಾಗಿ ತೆಂಗಿನಕಾಯಿ ದೊರೆತಿದೆ. ಇದು ಪಕ್ಷಕ್ಕೆ ಶುಭ ಸಂಕೇತ. ಎಲ್ಲರೂ ತಮ್ಮ ದೈನಂದಿನ ಬದುಕಲ್ಲಿ ಬಳಸುವಂತಹ ಅಗತ್ಯ ವಸ್ತುವೂ ಇದಾಗಿದೆ ಎಂದರು.
ಪಕ್ಷದ ಮುಖಂಡರಾದ ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಕೆ. ಹೇಮಂತಕುಮಾರ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಸೈಯದ್ ಶಾಹೀನ್, ರೇಣುಕಾಸ್ವಾಮಿ, ಪರಶುರಾಮನಾಯ್ಕ, ಬಸವರಾಜ, ಮಹಿಳಾ ಘಟಕದ ಅಮೀರಾಬಾನು, ವೀಣಾ ಮಂಜುನಾಥ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.