20 ಲಕ್ಷ ವೆಚ್ಚದ ಶಾದಿ ಮಹಲ್
ಚನ್ನಗಿರಿ: ಕ್ಷೇತ್ರದಲ್ಲಿರುವ ಅಲ್ಪಸಂಖ್ಯಾತರು 5 ವರ್ಷದ ಅಧಿಕಾರದಲ್ಲಿ ಹಲವಾರು ಸೌಲಭ್ಯ ಪಡೆಯಬಹುದಾಗಿತ್ತು. ಆದರೆ, ಯಾರು ಮುಂದೆ ಬರಲಿಲ್ಲ ಎಂದು ಶಾಸಕ ಮಾಡಾಶ್ ವಿರೂಪಾಕ್ಷಪ್ಪ ಹೇಳಿದರು.
ಅವರು ಸೋಮವಾರ ತಾಲೂಕಿನ ಆಗರಬನ್ನೀಹಟ್ಟಿ ಗ್ರಾಮದಲ್ಲಿ 20 ಲಕ್ಷ ವೆಚ್ಚದ ಶಾದಿ ಮಹಲ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ನನ್ನ ಅಧಿಕಾರದ ಕೊನೆ ದಿನಗಳಲ್ಲಿ ಸೌಲಭ್ಯಗಳನ್ನು ಕೇಳಿ ಬರುತ್ತಿದ್ದಾರೆ ಕ್ಷೇತ್ರದಲ್ಲಿ 27 ಮಸೀದಿಗಳ ನಿರ್ಮಾಣಕ್ಕೆ 90 ಲಕ್ಷ ನೀಡಿದ್ದು, 460 ಮುಸ್ಲಿಂ ಜನರಿಗೆ ಮುಖ್ಯಮಂತ್ರಿಗಳ ಪರಿಹಾರ ಧನ ಕೊಡಿಸಿರುವುದಾಗಿ ಹೇಳಿದರು.
ಜಿ.ಪಂ.ಸದಸ್ಯ ಎಚ್.ವಿ. ರುದ್ರಪ್ಪ ಮಾತನಾಡಿ, ಹಳ್ಳಿಯಿಂದ ಪಟ್ಟಣಕ್ಕೆ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ಆದರೆ, ಪಟ್ಟಣದಿಂದ ಈ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸುತ್ತಿದ್ದು ಈ ಶಾಲೆಯ ಒಂದು ವೈಶಿಷ್ಟ್ಯ ಎಂದರು.
ತಾ.ಪಂ.ಅಧ್ಯಕ್ಷ ಕಗತೂರು ಪಾಲಾಕ್ಷಿ ಮಾತನಾಡಿ, ಅಲ್ಪಸಂಖ್ಯಾತರಿಗೆ ಯಾರು ಸಹಕಾರ ಮಾಡಿರಲಿಲ್ಲ ನಿಮ್ಮಗಳ ಶ್ರೇಯಸ್ಸನ್ನು ಬಯಸುವಂತವರನ್ನು ಬೆಂಬಲಿಸಬೇಕೆಂದರು.
ಸಮಾರಂಭದಲ್ಲಿ ತಾ.ಪಂ.ಉಪಾಧ್ಯಕ್ಷೆ ಲಲಿತಾ ಪುಟ್ಟಸ್ವಾಮಿ, ಸದಸ್ಯ ಎ.ಬಿ. ಶಿವಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ರತ್ನಮ್ಮ, ಶಾಲಾ ಮುಖ್ಯ ಶಿಕ್ಷಕ ಇಲ್ಯಾಸ್ ಅಹಮದ್, ಚಂದ್ರಶೇಖರ್, ಮಜೀರ್ ಸಾಬ್, ರೆಹಮತ್ ಉಲ್ಲಾಖಾನ್, ಸೈಯ್ಯದ್ ಖಲೀಲ್, ಮಲ್ಲಿಕಾರ್ಜುನಪ್ಪ ಇದ್ದರು. ಸಮಾರಂಭದ ಅಧ್ಟಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಗೀತಮ್ಮ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

