ಕಲಾವಿದ ಪ್ರೊ. ಹಿರೇಗೌಡರ್ ನಿಧನ
ದಾವಣಗೆರೆ: ದಾವಣಗೆರೆ ವಿವಿ ಲಲಿತಕಲಾ ಮಹಾ ವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ, ಮೈಸೂರಿನ ಡಿಎಂಎಸ್ ಲಲಿತಕಲಾ ಮಹಾ ವಿದ್ಯಾಲಯದ ಡೀನ್, ಹೆಸರಾಂತ ಹಿರಿಯ ಕಲಾವಿದ ಪ್ರೊ. ವಿ.ಬಿ. ಹಿರೇಗೌಡರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರಿ ಹಾಗೂ ಅಪಾರ ವಿದ್ಯಾರ್ಥಿ ವೃಂದವನ್ನು ಅಗಲಿದ್ದಾರೆ. ಪ್ರೊ. ಬಿ.ವಿ. ಹಿರೇಗೌಡರ್ ಪಾರ್ಥಿವ ಶರೀರರನ್ನು ದಾವಣಗೆರೆ ಬನಶಂಕರಿ ಬಡಾವಣೆಯ ಮೃತರ ಸ್ವಗೃಹ ವರ್ಣಬಿಂದುವಿನಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದೆ. ಅಂತ್ಯಕ್ರಿಯೆ ದಾವಣಗೆರೆ ತಾ. ಕುರ್ಕಿ ಗ್ರಾಮದಲ್ಲಿ 18ರ ಬೆಳಿಗ್ಗೆ 10ಕ್ಕೆ ನಡೆಯಲಿದೆ. ಆಸ್ಪತ್ರೆಯಲ್ಲಿ ಪ್ರಶಸ್ತಿ ಪ್ರದಾನ: ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಏಳೆಂಟು ದಿನಗಳ ಹಿಂದಷ್ಟೇ ಹೃದ್ರೋಗ ಸಮಸ್ಯೆಯಿಂದಾಗಿ ಹಿರೇಗೌಡರ್ರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರ ಚಿತ್ರಕಲಾ ವಿಭಾಗದ ಸಾಧನೆಗಾಗಿ ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಪ್ರೊ. ಹಿರೇಗೌಡರ್ರವರಿಗೆ ನೀಡಿತ್ತು. ಕನ್ನಡ ಮತ್ತು ಸಂಸ್ಕೃತಿ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ, ಪ್ರಶಸ್ತಿ ಪ್ರದಾನ ಮಾಡಿದ್ದರು. ಪೇಂಟಿಂಗ್ನಲ್ಲಿ ಅತ್ಯುದ್ಭುತ ಸಾಧನೆ ಮಾಡಿದ್ದ ಹಿರೇಗೌಡರ್ಗೆ ಆಳ್ವಾಸ್ ಚಿತ್ರಸಿರಿ ರಾಜ್ಯ ಪ್ರಶಸ್ತಿ, ಜುವೆಲ್ ಆಫ್ ಇಂಡಿಯಾ, ರಾಜ್ಯೋತ್ಸವ, ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಗದಗಿನ ಎಂ.ಎ. ಶೆಟ್ಟಿ ವರ್ಣಬಿಂಬ ಸೇರಿದಂತೆ ನೂರಾರು ಪ್ರಶಸ್ತಿಗಳೂ ಲಭಿಸಿವೆ. ಪ್ರೊ. ಹಿರೇಗೌಡರ್ ಹಾಲಿ ಮೈಸೂರಿನ ಡಿಎಂಎಸ್ ಲಲಿತಕಲಾ ಮಹಾ ವಿದ್ಯಾಲಯದ ಡೀನ್ ಆಗಿ, ಸೇವೆ ಸಲ್ಲಿಸುತ್ತಿದ್ದರು.
ಇಂದು ಸಭೆ
ಹರಪನಹಳ್ಳಿ: ಪುರಸಭಾ ಚುನಾವಣಾ ಪೂರ್ವ ಸಿದ್ಧತೆಗಾಗಿ ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ಫೆ.18ರಂದು ಬೆ.12ಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಬಳ್ಳಾರಿ ಜಿಲ್ಲಾ (ಗ್ರಾಮೀಣ) ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಪಿ. ರವೀಂದ್ರ, ಕೆಪಿಸಿಸಿ ಸದಸ್ಯ ಬಸವಾಜ, ಶಾಮರಾವ್, ಬ್ಲಾಕ್ ಅಧ್ಯಕ್ಷ ಹಾಲೇಶ್, ಪ್ರಕಾಶ್, ಭಾಗವಹಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

