ದಾವಣಗೆರೆ

ಇಂದು ಪದಗ್ರಹಣ (ಸಿಟಿ ಸುದ್ದಿ)

Published On :

ದಾವಣಗೆರೆ: ದೈವಜ್ಞ ಹಿತರಕ್ಷಣಾ ವೇದಿಕೆ ಪದಗ್ರಹಣ, ಉಚಿತ ನೇತ್ರ ತಪಾಸಣೆ, ಕನ್ನಡ ವಿತರಣೆ, ದೈವಜ್ಞ ಸುವರ್ಣ ವರ್ಷ ಸನ್ಮಾನ ಸಮಾರಂಭ ಫೆ.16ರಂದು ದಾವಣಗೆರೆ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9ಕ್ಕೆ ನೇತ್ರತಜ್ಞ ಡಾ. ಜಿ. ಚಂದ್ರಶೇಖರ ಮತ್ತು ತಂಡ ಉಚಿತ ನೇತ್ರ ತಪಾಸಣೆ ನಡೆಯಲಿದೆ. ಸಂಜೆ 6.30ಕ್ಕೆ ವಾಸುದೇವ ರಾಯ್ಕರ್ ಅಧ್ಯಕ್ಷತೆಯಲ್ಲಿ ಎಸ್ಪಿ ಲಾಭೂ ರಾಮ್ ಸಮಾರಂಭ ಉದ್ಘಾಟಿಸುವರು. ಶಿವಮೊಗ್ಗದ ರಘುನಾಥ ರಾಯ್ಕರ್, ಸುಧಾಕರ ಶೇಟ್, ಸತ್ಯ ನಾರಾಯಣ ರಾಯ್ಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ನಾಳೆ ನಮಸ್ಕಾರ
ರಥಸಪ್ತಮಿ ಅಂಗವಾಗಿ ಅಕ್ಷಯ ಯೋಗ ಪ್ರತಿಷ್ಠಾನದಿಂದ ಫೆ.17ರಂದು ದಾವಣಗೆರೆ ಎಂಸಿ ಕಾಲನಿ ಎ ಬ್ಲಾಕ್‌ನ 9ನೇ ಮುಖ್ಯರಸ್ತೆಯ ಶ್ರೀಗುರು ಶಾಂತಾಶ್ರಮದಲ್ಲಿ ವಿಶೇಷ ಸೂರ್ಯೋಪಾಸನೆ, ಸೂರ್ಯ ನಮಸ್ಕಾರ, ಸೂರ್ಯ ನಾರಾಯಣನ ವಿಶೇಷ ಮಂತ್ರಗಳು ಮತ್ತು ವಿಧಿ ವಿಧಾನ ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ಮೊ-9620024076ಗೆ ಸಂಪರ್ಕಿಸಲು ಪ್ರತಿಷ್ಠಾನದ ಯೋಗಚಾರ್ಯ ಶ್ರೀ ವಿಕ್ರಂ ಆಚಾರ್ಯ ಕೋರಿದ್ದಾರೆ.
ನಾಳೆ ಸಭೆ
ದಾವಣಗೆರೆಯ ಚಿಗಟೇರಿ ಮಿಲ್ಸ್‌ನ ಕಾರ್ಮಿಕರಿಗೆ ಈ ಹಿಂದೆ ಸ್ಥಗಿತಗೊಂಡಿರುವ ಜವಳಿ ಗಿರಣಿಗಳಿಗೆ ಕೇಂದ್ರ ಸರ್ಕಾರದಿಂದ ಜವಳಿ ಕಾರ್ಮಿಕರ ಪುನರ್ವಸತಿ ಯೋಜನೆಯ ಕೆಲವು ಜೀವಂತ ಕಾರ್ಮಿಕರು ಮರಣವನ್ನು ಹೊಂದಿದ್ದು, ಅಂತಹ ಕಾರ್ಮಿಕರ ವಾರಸುದಾರರಿಗೆ ಟಿಎನ್‌ಆರ್‌ಎಫ್‌ಸಿ ಹಣ ಪಡೆಯುವ ವಿಚಾರವಾಗಿ ಕಾರ್ಮಿಕರ ವಾರಸುದಾರರ ತುರ್ತು ಸಭೆಯು ಫೆ.17ರಂದು ನಡೆಯಲಿದೆ. ಅಂದು ಬೆ.10ಕ್ಕೆ ಮಿಲ್‌ನ ಆವರಣದಲ್ಲಿ ನಡೆಯುವ ಸಭೆಯಲ್ಲಿ ಚಿಗಟೇರಿ ಮಿಲ್ಸ್‌ನ ಕಾರ್ಮಿಕರು ಮತ್ತು ವಾರಸುದಾರರು ಪಾಲ್ಗೊಳ್ಳಲು ಕಾರ್ಯದರ್ಶಿ ಡಿ. ಶರಣಪ್ಪ ಕೋರಿದ್ದಾರೆ.
18ರಂದು ಶಿಬಿರ
ಮಾನಸಿಕ ಯೋಗ ಚಿಕಿತ್ಸಾ ಶಿಬಿರವನ್ನು ಆಚಾರ್ಯ ಯೋಗ ವಿದ್ಯಾಶಾಲೆಯಿಂದ ದಾವಣಗೆರೆ ಪಿ.ಜೆ. ಬಡಾವಣೆಯ ಎವಿಕೆ ಕಾಲೇಜು ರಸ್ತೆಯ ಕೋಗುಂಡಿ ಬಿಲ್‌ಡಿಂಗ್‌ನಲ್ಲಿ ಫೆ.18ರಿಂದ 24ರ ವರೆಗೆ ಏರ್ಪಡಿಸಲಾಗಿದೆ. ನಗು, ಧ್ಯಾನದಿಂದ ಮಾನಸಿಕ ಒತ್ತಡ ನಿವಾರಣೆ, ಯೋಗ ಚಿಕಿತ್ಸೆ, ಧ್ಯಾನಮಾರ್ಗದ ಬಗ್ಗೆ ತರಬೇತಿ ನೀಡಲಾಗುವುದು. ಮಾಹಿತಿಗೆ ವೀರೂ ಮೊ-8277269649, ಅರ್ಚನಾ 9738572318ಗೆ ಸಂಪರ್ಕಿಸ ಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.